ETV Bharat / international

ಅಮೆರಿಕದಲ್ಲಿ ಟಿಕ್​ಟಾಕ್​ ಬ್ಯಾನ್​: ಎಲ್ಲ ಸರ್ಕಾರಿ ಜಾಲತಾಣದಿಂದ ಅಳಿಸಿಹಾಕಲು 30 ದಿನಗಳ ಡೆಡ್​ಲೈನ್​ - ಸರ್ಕಾರ ಜಾಲತಾಣಗಳಿಂದ ಅಳಿಸಲು ಸರ್ಕಾರ ಸೂಚನೆ

ಅಮೆರಿಕದಲ್ಲಿ ಟಿಕ್​ಟಾಕ್​ ನಿಷೇಧ- ಸರ್ಕಾರ ಜಾಲತಾಣಗಳಿಂದ ಅಳಿಸಲು ಸರ್ಕಾರ ಸೂಚನೆ- ಟಿಕ್​ಟಾಕ್​ ಮೇಲೆ ಅಮೆರಿಕ ಸರ್ಕಾರದ ನಿರ್ಬಂಧ- ಟಿಕ್​ಟಾಕ್​ ನಿಷೇಧಿಸಿದ್ದ ಟ್ರಂಪ್​

ಅಮೆರಿಕದಲ್ಲಿ ಟಿಕ್​ಟಾಕ್​ ಬ್ಯಾನ್
ಅಮೆರಿಕದಲ್ಲಿ ಟಿಕ್​ಟಾಕ್​ ಬ್ಯಾನ್
author img

By

Published : Feb 28, 2023, 10:44 AM IST

ವಾಷಿಂಗ್ಟನ್: ಈ ಹಿಂದೆ ಭಾರತದಲ್ಲಿ ಮನೆ ಮಾತಾಗಿದ್ದ ಸಾಮಾಜಿಕ ಜಾಲತಾಣದ ಆ್ಯಪ್ ಟಿಕ್ ಟಾಪ್​​, ದೇಶದ ಬಹುತೇಕ ಜನರ ಮೊಬೈಲ್​ನಲ್ಲಿ ಜಾಗ ಪಡೆದಿತ್ತು. ಬಳಿಕ ಭದ್ರತಾ ದೃಷ್ಟಿಯಿಂದ ಕೇಂದ್ರ ಸರ್ಕಾರವು ಟಿಕ್​ ಟಾಕ್​ ಸೇರಿದಂತೆ ಚೀನಾದ ಕೆಲವು ಆ್ಯಪ್​ಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಇದೀಗ ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿಗೆ ಬೆದರಿಕೆ ಕಾರಣ ಚೀನಾದ ಜನಪ್ರಿಯ ವಿಡಿಯೋ ಆ್ಯಪ್‌ ಟಿಕ್‌ಟಾಕ್ ಅನ್ನು ಸರ್ಕಾರ ಸೈಟ್​ಗಳಿಂದ ತೆಗೆದು ಹಾಕಲು ಶ್ವೇತಭವನವು ಎಲ್ಲಾ ಫೆಡರಲ್​ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಅಲ್ಲದೇ, 30 ದಿನದಲ್ಲಿ ಇದನ್ನು ಕಾರ್ಯಗತ ಮಾಡಿ ಎಂದು ಗಡುವು ನೀಡಿದೆ.

ಆಫೀಸ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಬಜೆಟ್ ಸೋಮವಾರ ಹೊರಡಿಸಿದ ಮಾರ್ಗಸೂಚಿಯಲ್ಲಿ, ಸರ್ಕಾರದ ಸೂಕ್ಷ್ಮ ದಾಖಲೆಗಳಿಗೆ ಅಪಾಯವನ್ನುಂಟು ಮಾಡುವ ಆತಂಕದ ಕಾರಣ ಟಿಕ್​ಟಾಕ್​ ಅನ್ನು ಸರ್ಕಾರಿ ಸೈಟ್​ಗಳಲ್ಲಿ ಹೊಂದದಂತೆ ಸೂಚಿಸಲಾಗಿದೆ.

ರಕ್ಷಣಾ ಇಲಾಖೆಗಳು, ಹೋಮ್ಲ್ಯಾಂಡ್ ಸೆಕ್ಯುರಿಟಿ ಮತ್ತು ಸ್ಟೇಟ್ ಸೇರಿದಂತೆ ಕೆಲವು ಸಂಸ್ಥೆಗಳು ಈಗಾಗಲೇ ಈ ನಿರ್ಬಂಧಗಳನ್ನು ಹೊಂದಿವೆ. ಇನ್ನುಳಿದ ಸರ್ಕಾರಿ ಇಲಾಖೆಗಳೂ ಇದನ್ನು ಪಾಲಿಸಬೇಕು. ಹೀಗಾಗಿ 30 ದಿನಗಳಲ್ಲಿ ಆ್ಯಪ್​ ಅನ್ನು ಸಂಪೂರ್ಣವಾಗಿ ನಿಷೇಧಿಸಿ ಅದರ ಲಿಂಕ್​ ಅನ್ನು ಅಳಿಸಿ ಹಾಕಬೇಕು ಎಂದು ತಿಳಿಸಿದೆ.

ಜೋ ಬಿಡೆನ್​ ಸರ್ಕಾರ ರಾಷ್ಟ್ರದ ಡಿಜಿಟಲ್ ಮೂಲಸೌಕರ್ಯವನ್ನು ರಕ್ಷಿಸಲು ಮತ್ತು ಅಮೆರಿಕನ್ನರ ಡೇಟಾಗೆ ವಿದೇಶಿಗರ ಪ್ರವೇಶವನ್ನು ನಿಗ್ರಹಿಸುವುದು ಮುಖ್ಯವಾಗಿದೆ. ಈ ಕ್ರಮ ನಮ್ಮ ಡಿಜಿಟಲ್ ಮೂಲಸೌಕರ್ಯದ ಸುರಕ್ಷತೆ, ಜನರ ಭದ್ರತೆ ಮತ್ತು ಗೌಪ್ಯತೆಯನ್ನು ರಕ್ಷಿಸಲು ಕೈಗೊಂಡ ಕ್ರಮವಾಗಿದೆ ಎಂದು ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಕ್ರಿಸ್ ಡೆರುಶಾ ಹೇಳಿದರು.

ಚೀನಾದ ಬೈಟ್​​ಡ್ಯಾನ್ಸ್​ ಲಿಮಿಟೆಡ್​ ಒಡೆತನದ ಟಿಕ್​ಟಾಕ್​ ಅತ್ಯಂತ ಜನಪ್ರಿಯ ಆ್ಯಪ್​ ಆಗಿದೆ. ಅಮೆರಿಕದಲ್ಲಿ ಇದನ್ನು ಮೂರನೇ ಎರಡರಷ್ಟು ಜನರು ಬಳಸುತ್ತಾರೆ. ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯಲಾಗುತ್ತಿದೆ ಎಂಬ ಆರೋಪ ಇದರ ಮೇಲಿದೆ.

ಇದಕ್ಕೂ ಮೊದಲು ಸೈಬರ್​ ಭದ್ರತೆಯ ಕಾರಣಕ್ಕಾಗಿ ಎಲ್ಲ ಸರ್ಕಾರಿ ಉದ್ಯೋಗಿಗಳ ಮೊಬೈಲ್​ನಲ್ಲಿ ಟಿಕ್​ಟಾಕ್​ ಆ್ಯಪ್​ ಬಳಕೆ ಮಾಡದಂತೆ ಆದೇಶಿಸಿದೆ. ಅಲ್ಲದೇ, ಸರ್ಕಾರದ ಎಲ್ಲ ಸಾಧನಗಳಿಂದ ಈ ಆ್ಯಪ್​ ಅನ್ನು ನಿಷೇಧಿಸಿ ಘೋಷಿಸಿದೆ.

ಟಿಕ್​ಟಾಕ್​ ನಿಷೇಧಿಸಿದ್ದ ಟ್ರಂಪ್​: ಆಗಿನ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್​ ಟ್ರಂಪ್​, ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕತೆಗೆ ಬೆದರಿಕೆ ಇದೆ ಎಂದಬ ಕಾರಣಕ್ಕಾಗಿ ಚೀನಾದ ಟಿಕ್​ಟಾಕ್​ ಆ್ಯಪ್​ ಅನ್ನು 2020 ರಲ್ಲಿ ನಿಷೇಧಿಸಿ ಆದೇಶಿಸಿದ್ದರು. ಇದಲ್ಲದೇ, ವಿಚಾಟ್ ಅನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದರು. ಟ್ರಂಪ್​ರ ಈ ಆದೇಶ ಅಸಂವಿಧಾನಿಕ ಎಂದು ಹೇಳಿರುವ ಟಿಕ್​ ಟಾಕ್ ಹಾಗೂ ಅದರ ಅಮೆರಿಕದ ನೌಕರರು ಆದೇಶದ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಿದ್ದರು.

ಓದಿ: ಚೀನಾ ಕುಟೀಲ ತಂತ್ರ ಹಣಿಯಲು ಮೋದಿ ಹಾದಿ ಹಿಡಿದ ಡೊನಾಲ್ಡ್​ ಟ್ರಂಪ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.