ವಾಷಿಂಗ್ಟನ್ ಡಿಸಿ (ಅಮೆರಿಕ) : ಇರಾನ್‌ನಲ್ಲಿ ಬಂಧಿತರಾಗಿರುವ ಅಮೆರಿಕದ ನಾಗರಿಕರನ್ನು ಮರಳಿ ಕರೆತರುವ ಪ್ರಕ್ರಿಯೆಯು ಸಂಪೂರ್ಣ ವಿಭಿನ್ನವಾಗಿದೆ. ಆದರೆ, ಬೆಳೆಯುತ್ತಿರುವ ಪರಮಾಣು ಬೆದರಿಕೆಗಳನ್ನು ತಗ್ಗಿಸಲು ಟೆಹ್ರಾನ್ ತೆಗೆದುಕೊಳ್ಳುವ ಕ್ರಮಗಳನ್ನು ವಾಷಿಂಗ್ಟನ್ ಸ್ವಾಗತಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮಂಗಳವಾರ ಹೇಳಿದ್ದಾರೆ.
ರಾಜ್ಯ ಬ್ರೀಫಿಂಗ್ ಉದ್ದೇಶಿಸಿ ಮಾತನಾಡಿದ ಆಂಟೋನಿ ಬ್ಲಿಂಕೆನ್, "ಕಳೆದ ವಾರ ಇರಾನ್ ಅಧಿಕಾರಿಗಳು ಐದು ಅಮೆರಿಕದ ನಾಗರಿಕರನ್ನು ಜೈಲಿನಿಂದ ಗೃಹಬಂಧನಕ್ಕೆ ಒಳಪಡಿಸಿರುವುದನ್ನು ನಾವು ಖಚಿತಪಡಿಸಿದ್ದೇವೆ. ಸಿಯಾಮಕ್ ನಮಾಜಿ, ಮೊರಾದ್ ತಹಬಾಜ್, ಎಮಾದ್ ಶಾರ್ಗಿ ಸೇರಿದಂತೆ ಮತ್ತಿಬ್ಬರು ಅಮೆರಿಕನ್ನರನ್ನು ಬಿಡುಗಡೆಗೊಳಿಸಲಾಗಿದೆ. ಜೋ ಬೈಡನ್ ಸರ್ಕಾರ ಅಧಿಕಾರ ವಹಿಸಿಕೊಳ್ಳುವ ಮೊದಲೇ ಹೆಚ್ಚಿನವರು ಜೈಲಿನಲ್ಲಿದ್ದಾರೆ. ಒಬ್ಬರು ಸುಮಾರು ಎಂಟು ವರ್ಷಗಳಿಂದ ಜೈಲಿನಲ್ಲಿದ್ದಾರೆ" ಎಂದರು. ಬಳಿಕ ಬಂಧಿತರ ಸಂಬಂಧಿಕರ ಕುರಿತು ಮಾತನಾಡಿದ ಅವರು, ಅವರ ಧೈರ್ಯವನ್ನು ಶ್ಲಾಘಿಸಿದರು.
ಇದನ್ನೂ ಓದಿ : ಪುಟಿನ್ - ವ್ಯಾಗ್ನರ್ ವಿವಾದದಿಂದ 'ನಿಜವಾದ ಬಿರುಕು' ಬಹಿರಂಗ: ಬ್ಲಿಂಕನ್ ಸ್ಫೋಟಕ ಹೇಳಿಕೆ
ಟೆಹ್ರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಪಡೆದುಕೊಳ್ಳಲು ಬಯಸುವುದಿಲ್ಲ. ಇರಾನ್ ಜೊತೆಗಿನ ರಾಜತಾಂತ್ರಿಕತೆಯ ವಿಧಾನವನ್ನು ಅಮೆರಿಕ ಅನುಸರಿಸುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆ, ಭಯೋತ್ಪಾದನೆಗೆ ಧನಸಹಾಯ, ರಷ್ಯಾಕ್ಕೆ ಡ್ರೋನ್‌ಗಳನ್ನು ಒದಗಿಸುವುದು, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಶಸ್ತ್ರಗಳ ಬಳಕೆ ಸೇರಿದಂತೆ ಇತರ ಹಲವು ಅಪರಾಧಗಳಿಗೆ ನಾವು ಆಡಳಿತವನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ. ಪರಮಾಣು ವಿಷಯಗಳಲ್ಲಿ ಉಭಯ ದೇಶಗಳ ನಡುವೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಭವಿಷ್ಯದ ದೊಡ್ಡ ಸವಾಲುಗಳನ್ನು ಎದುರಿಸಲು ಭಾರತ-ಅಮೆರಿಕ ಸಹಭಾಗಿತ್ವ ಅಗತ್ಯ : ಬ್ಲಿಂಕೆನ್
ಕಳೆದ ವಾರ ಇರಾನ್‌ನ ಜೈಲಿನಲ್ಲಿದ್ದ ಐದು ಅಮೆರಿಕನ್ನರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಬೆಳವಣಿಗೆಯು ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ನಡುವಿನ ಒಪ್ಪಂದದ ಮೊದಲ ಹಂತವಾಗಿದೆ. ವಿಶ್ವಸಂಸ್ಥೆಗೆ ಇರಾನ್‌ನ ಖಾಯಂ ಮಿಷನ್ ಹೇಳಿಕೆಯಲ್ಲಿ " ಮಾನವೀಯ ಸಹಕಾರದ ಒಪ್ಪಂದದ ಭಾಗವಾಗಿ, ಇರಾನ್ ಮತ್ತು ಅಮೆರಿಕ ಐದು ಕೈದಿಗಳನ್ನು ಪರಸ್ಪರ ಬಿಡುಗಡೆ ಮಾಡಲು ಹಾಗೂ ಕ್ಷಮಿಸಲು ಒಪ್ಪಿಕೊಂಡಿವೆ" ಎಂದು ಹೇಳಿದೆ.
ಇದನ್ನೂ ಓದಿ : ಇರಾನ್‌ನ ಬಜಾರ್‌ನಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ : 5 ಜನ ಸಾವು
2015 ರಲ್ಲಿ ಇರಾನ್‌ನಲ್ಲಿ ದೀರ್ಘಾವಧಿಯ ವ್ಯಾಪಾರ ಪ್ರವಾಸದಲ್ಲಿದ್ದ ಅಮೆರಿಕದ ನಮಾಜಿ ಅವರನ್ನು ಬಂಧಿಸಲಾಗಿತ್ತು. ಹಾಗೆಯೇ, ಉದ್ಯಮಿ ಶಾರ್ಗಿ ಮತ್ತು ಪರಿಸರವಾದಿ ತಹಬಾಜ್ ಅವರನ್ನು 2018 ರಲ್ಲಿ ಮೊದಲ ಬಾರಿಗೆ ಅರೆಸ್ಟ್ ಮಾಡಲಾಗಿತ್ತು. ಬಳಿಕ, ಬಂಧನಕ್ಕೊಳಗಾದವರ ಕುಟುಂಬಸ್ಥರು ತಮ್ಮ ಪ್ರೀತಿಪಾತ್ರರನ್ನು ಯುಎಸ್‌ಗೆ ಮರಳಿ ಕರೆತರುವಂತೆ ಅಧ್ಯಕ್ಷ ಜೋ ಬೈಡನ್ ಆಡಳಿತಕ್ಕೆ ತುರ್ತು ಕರೆಗಳನ್ನು ಮಾಡಿದ್ದರು. ಇದೀಗ, ಕುಟುಂದ ಸದಸ್ಯರನ್ನು ಗೃಹಬಂಧನದಲ್ಲಿ ಇರಿಸಲಾಗಿರುವ ಸುದ್ದಿ ಕೇಳಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಇರಾನ್ ವಿರುದ್ಧದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಮುಂದುವರಿಕೆಗೆ ಬೈಡನ್ ಆದೇಶ