ETV Bharat / international

ರಷ್ಯಾದ ಜೊತೆ ತೈಲ ಖರೀದಿಗೆ ಶ್ರೀಲಂಕಾ ಮುಕ್ತವಾಗಿದೆ: ಪ್ರಧಾನಿ ವಿಕ್ರಮಸಿಂಘೆ

ರಷ್ಯಾದ ಮೇಲಿನ ನಿರ್ಬಂಧದ ಹೊರತಾಗಿಯೂ ಶ್ರೀಲಂಕಾ ಆ ದೇಶದ ತೈಲ ಖರೀದಿಗೆ ಮುಂದಾಗಿದೆ. ಈ ಬಗ್ಗೆ ಪ್ರಧಾನಿ ರನಿಲ್​ ವಿಕ್ರಮಸಿಂಘೆ ಮಾಧ್ಯಮಕ್ಕೆ ಬಹಿರಂಗ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ವಿಕ್ರಮಸಿಂಘೆ
ಪ್ರಧಾನಿ ವಿಕ್ರಮಸಿಂಘೆ
author img

By

Published : Jun 12, 2022, 3:48 PM IST

ಕೊಲಂಬೊ(ಶ್ರೀಲಂಕಾ): ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ನಿರ್ಬಂಧದ ಹೊರತಾಗಿಯೂ ರಷ್ಯಾದಿಂದ ತೈಲ ಆಮದಿಗೆ ಮುಂದಾಗಿದೆ. ಈ ಬಗ್ಗೆ ನೂತನ ಪ್ರಧಾನಿ ರನಿಲ್​ ವಿಕ್ರಮಸಿಂಘೆ ಹೇಳಿಕೆ ನೀಡಿದ್ದು, ಇಂಧನ ಕೊರತೆ ನೀಗಿಸಲು ರಷ್ಯಾದಿಂದಲೂ ತೈಲ ಆಮದು ಮಾಡಿಕೊಳ್ಳಲು ದೇಶ ಮುಕ್ತವಾಗಿದೆ ಎಂದಿದ್ದಾರೆ.

ಉಕ್ರೇನ್​ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ಹಲವು ಕ್ಷೇತ್ರಗಳಲ್ಲಿ ನಿರ್ಬಂಧ ವಿಧಿಸಿ ಆ ದೇಶದೊಂದಿಗೆ ವ್ಯಾಪಾರ ವಹಿವಾಟನ್ನು ನಿಲ್ಲಿಸಿವೆ. ಇದಲ್ಲದೇ ಇತರೆ ರಾಷ್ಟ್ರಗಳು ಕೂಡ ರಷ್ಯಾದ ಜೊತೆಗೆ ವ್ಯಾಪಾರ ನಡೆಸದಂತೆ ಕರೆ ನೀಡಿವೆ. ಈ ಮಧ್ಯೆ ಶ್ರೀಲಂಕಾ ತನ್ನ ದೇಶದಲ್ಲಿನ ಇಂಧನ ಕೊರತೆ ಮತ್ತು ಹಾಹಾಕಾರವನ್ನು ತಗ್ಗಿಸಲು ರಷ್ಯಾದ ಜೊತೆ ತೈಲ ಒಪ್ಪಂದಕ್ಕೆ ಸಜ್ಜಾಗಿದೆ.

ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಶ್ರೀಲಂಕಾ ಪ್ರಧಾನಿ ರನಿಲ್​ ವಿಕ್ರಮಸಿಂಘೆ, ದೇಶದ ಮೇಲೆ ಹೆಚ್ಚುತ್ತಿರುವ ಸಾಲದ ಹೊರೆಯ ಮಧ್ಯೆಯೂ ಚೀನಾದಿಂದ ಇನ್ನೂ ಹೆಚ್ಚಿನ ಹಣಕಾಸಿನ ನೆರವನ್ನು ಪಡೆಯುವ ಅಗತ್ಯವಿದೆ. ಉಕ್ರೇನ್‌- ರಷ್ಯಾ ಯುದ್ಧ ಹಲವು ರಾಷ್ಟ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಯುದ್ಧವು ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದೆ.

2024 ರವರೆಗೆ ಭೀಕರ ಆಹಾರದ ಕೊರತೆ ಕಾಣಿಸಬಹುದು. ರಷ್ಯಾ ಶ್ರೀಲಂಕಾಕ್ಕೆ ಗೋಧಿಯನ್ನು ನೀಡಿ ನೆರವಾಗಿದೆ. ಶ್ರೀಲಂಕಾದಲ್ಲಿ ಇಂಧನ ಕೊರತೆ ಮಿತಿ ಮೀರಿದೆ. ಇರಾನ್​ ಜೊತೆ ತೈಲ ಒಪ್ಪಂದ ಮಾಡಿಕೊಂಡು ಆಮದಿಗಾಗಿ ಚರ್ಚೆಗಳು ನಡೆಯುತ್ತಿವೆ. ರಷ್ಯಾದಿಂದಲೂ ತೈಲ ಖರೀದಿಗೆ ನಾವು ಮುಕ್ತವಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಓದಿ: ಬಹುಭಾಷಾ ನಿರ್ಣಯ ಅಂಗೀಕರಿಸಿದ ವಿಶ್ವಸಂಸ್ಥೆ.. ಭಾರತದ 'ಹಿಂದಿ'ಗೂ ಸಿಕ್ತು ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.