ETV Bharat / international

ಅಮೆರಿಕದಲ್ಲಿ ಅಕ್ರಮ ವಲಸಿಗರ ಮಕ್ಕಳ ಜನ್ಮಸಿದ್ಧ ಪೌರತ್ವ ಕೊನೆಗೊಳಿಸುವುದನ್ನು ಬೆಂಬಲಿಸುತ್ತೇನೆ: ವಿವೇಕ್ ರಾಮಸ್ವಾಮಿ

author img

By ETV Bharat Karnataka Team

Published : Sep 29, 2023, 7:07 AM IST

ಭಾರತೀಯ ಅಮೆರಿಕನ್ ವಾಣಿಜ್ಯೋದ್ಯಮಿ ಮತ್ತು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಅವರು ಅಕ್ರಮ ವಲಸಿಗರ ಮಕ್ಕಳ ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸುವ ಪ್ರಸ್ತಾಪವನ್ನು ಪುನರುಚ್ಚರಿಸಿದ್ದಾರೆ.

vivek ramaswamy
ವಿವೇಕ್ ರಾಮಸ್ವಾಮಿ

ವಾಷಿಂಗ್ಟನ್ ಡಿಸಿ: ಅಮೆರಿಕದಲ್ಲಿ ಅಕ್ರಮ ವಲಸಿಗರ ಮಕ್ಕಳ ಜನ್ಮಸಿದ್ಧ ಪೌರತ್ವ ಕೊನೆಗಾಣಿಸುವುದನ್ನು ಬೆಂಬಲಿಸುವುದಾಗಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಹೇಳಿದ್ದಾರೆ.

2024ರ ಅಧ್ಯಕ್ಷೀಯ ಚುನಾವಣೆ ಉಮೇದುವಾರಿಕೆ ಕುರಿತಾದ ರಿಪಬ್ಲಿಕನ್ ಪಕ್ಷದ ಎರಡನೇ ಚರ್ಚೆಯು ಕ್ಯಾಲಿಫೋರ್ನಿಯಾದ ಸಿಮಿ ವ್ಯಾಲಿಯಲ್ಲಿರುವ ರೊನಾಲ್ಡ್ ರೇಗನ್ ಅಧ್ಯಕ್ಷೀಯ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯದಲ್ಲಿ ಬುಧವಾರ ನಡೆಯಿತು. ಈ ವೇಳೆ ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಮತ್ತು ವಿಶ್ವಸಂಸ್ಥೆಯ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಸೇರಿದಂತೆ ಇತರೆ ಆರು ಅಭ್ಯರ್ಥಿಗಳೊಂದಿಗೆ ರಾಮಸ್ವಾಮಿ ವೇದಿಕೆಯನ್ನು ಹಂಚಿಕೊಂಡಿದ್ದರು.

ವಾಷಿಂಗ್ಟನ್ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ದಾಖಲೆ ರಹಿತ ವಲಸಿಗರನ್ನು ಮತ್ತು ಅವರ ಮಕ್ಕಳನ್ನು ದೇಶದಿಂದ ಹೊರಹಾಕಲು ಯಾವ ಕಾನೂನುಗಳನ್ನು ಬಳಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಮಸ್ವಾಮಿ ಅವರು, 2015 ರಲ್ಲಿ ಡೊನಾಲ್ಡ್ ಟ್ರಂಪ್ ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸುವುದಾಗಿ ಭರವಸೆ ನೀಡಿದ್ದರು. ಅಮೆರಿಕದಲ್ಲಿ ದಾಖಲೆ ರಹಿತ ವಲಸಿಗರ ಮಕ್ಕಳಿಗೆ ಪೌರತ್ವ ನೀಡಬಾರದು, ಏಕೆಂದರೆ ಅವರ ಪೋಷಕರು ಕಾನೂನನ್ನು ಉಲ್ಲಂಘಿಸಿ ದೇಶದಲ್ಲಿ ವಾಸಿಸಿದ್ದಾರೆ. ಹೀಗಾಗಿ, ದೇಶದಲ್ಲಿ ಅಕ್ರಮ ವಲಸಿಗರ ಮಕ್ಕಳಿಗೆ ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸುವ ಮೂಲಕ ಒಂದು ಹೆಜ್ಜೆ ಮುಂದೆ ಇಡಲಾಗುವುದು ಎಂದು ಹೇಳಿದರು.

ಬಳಿಕ ಮಾತು ಮುಂದುವರೆಸಿದ ಅವರು, ದೇಶದ ದಕ್ಷಿಣದ ಗಡಿಯನ್ನು ಮಿಲಿಟರಿಗೊಳಿಸುವುದು, ನಿರಾಶ್ರಿತರ "ಅಭಯಾರಣ್ಯ ನಗರಗಳು" ಮತ್ತು ಮೆಕ್ಸಿಕೊ ಹಾಗೂ ಮಧ್ಯ ಅಮೆರಿಕಕ್ಕೆ ವಿದೇಶಿ ಸಹಾಯವನ್ನು ಕೊನೆಗೊಳಿಸುವಂತಹ ಇತರೆ ಕ್ರಮಗಳು ಮತ್ತು H-1B ವೀಸಾದ ಲಾಟರಿ ವ್ಯವಸ್ಥೆಯನ್ನು ಕೊನೆಗೊಳಿಸುವ ಅವಶ್ಯಕತೆಯಿದೆ ಎಂದು ವಾದಿಸಿದರು.

ಇದನ್ನೂ ಓದಿ : ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಎಲೋನ್ ಮಸ್ಕ್​ರನ್ನು ಸಲಹೆಗಾರರನ್ನಾಗಿ ಮಾಡಿಕೊಳ್ಳುವೆ : ವಿವೇಕ್ ರಾಮಸ್ವಾಮಿ

ಲಾಟರಿ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಮತ್ತು ಅಗತ್ಯಗಳನ್ನು ಪೂರೈಸಲು ಅರ್ಹತೆ, ಕೌಶಲ್ಯ ಆಧಾರಿತ ವಲಸೆ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಹೇಳಿದರು. ಭಾರತೀಯ ಐಟಿ ವೃತ್ತಿಪರರಲ್ಲಿ H-1B ವೀಸಾ ಸಾಕಷ್ಟು ಜನಪ್ರಿಯವಾಗಿದೆ. ಇದು ವಲಸೆ ರಹಿತ ವೀಸಾವಾಗಿದ್ದು, ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು US ಕಂಪನಿಗಳಿಗೆ ಅವಕಾಶ ನೀಡುತ್ತದೆ.

ಇನ್ನೊಂದೆಡೆ, H-1B ವೀಸಾದ ಬಗ್ಗೆ ರಾಮಸ್ವಾಮಿ ಅವರು ತೆಗೆದುಕೊಂಡಿರುವ ನಿಲುವು 2016 ರಲ್ಲಿ ಟ್ರಂಪ್ ಕೈಗೊಂಡಿದ್ದ ಪ್ರಚಾರದ ನಿಲುವನ್ನು ನೆನಪಿಸುತ್ತಿದೆ. ಆಗಿನ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಈ ಹಿಂದೆ ವಿದೇಶಿ ಕಾರ್ಮಿಕರ ಬಗ್ಗೆ ಕಠಿಣ ನಿಲುವು ತಳೆದಿದ್ದರು. ಆದರೂ ನಂತರದ ದಿನಗಳಲ್ಲಿ ಅವರು ತಮ್ಮ ವಾಕ್ಚಾತುರ್ಯವನ್ನು ಮೃದುಗೊಳಿಸಿದ್ದರು. ಹಾಗೆಯೇ, ರಾಮಸ್ವಾಮಿ ಅವರು 29 ಬಾರಿ ಹೆಚ್-1ಬಿ ವೀಸಾ ಕಾರ್ಯಕ್ರಮವನ್ನು ಬಳಸಿಕೊಂಡಿದ್ದಾರೆ ಎಂಬುದು ಗಮನಾರ್ಹ.

ಇದನ್ನೂ ಓದಿ : ಅಧಿಕಾರ ಸಿಕ್ಕರೆ H-1B ವೀಸಾ ವ್ಯವಸ್ಥೆ ಬದಲಾಯಿಸುವೆ ; ಯುಎಸ್​ ಅಧ್ಯಕ್ಷೀಯ ಅಭ್ಯರ್ಥಿ ರಾಮಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.