ವಾಷಿಂಗ್ಟನ್( ಅಮೆರಿಕ): ಭಾರತೀಯ- ಅಮೆರಿಕನ್ ಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ 2024ರ ಅಮೆರಿಕನ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇನ್ನು ತಮ್ಮ ಅಧ್ಯಕ್ಷೀಯ ಚುನಾವಣೆ ಕುರಿತು ಮಾತನಾಡಿರುವ ಅವರು, ಇದು ರಾಜಕೀಯ ಪ್ರಚಾರ ಅಲ್ಲ. ಇದು ಅಮೆರಿಕದ ಮುಂದಿನ ಪೀಳಿಗೆಯ ಹೊಸ ಕನಸನ್ನು ಸೃಷ್ಟಿಸುವ ಸಾಂಸ್ಕೃತಿಕ ಚಳವಳಿ ಎಂದಿದ್ದಾರೆ
ಈ ಕುರಿತು ಚಿಕ್ಕ ವಿಡಿಯೋವನ್ನು ಮಂಗಳವಾರ ಬಿಡುಗಡೆ ಮಾಡಿರುವ 37 ವರ್ಷದ ರಂಗಸ್ವಾಮಿ, ನಮ್ಮ ವೈವಿದ್ಯತೆಯನ್ನು ನಾವು ಆಚರಿಸಿದ್ದೇವೆ. ಅಮೆರಿಕವನ್ನು ಮೊದಲ ಸ್ಥಾನದಲ್ಲಿ ಇರಿಸಬೇಕು ಎಂದರೆ, ಮೊದಲು ಅಮೆರಿಕ ಎಂದರೆ ಏನು ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ. 250 ವರ್ಷದ ಹಿಂದೆ ವಿಭಜಿತಗೊಂಡು, ಆದರ್ಶಗಳಿಗೆ ಒಂದುಗೂಡಿದ್ದ ಅಮೆರಿಕನ್ನರು ಎಲ್ಲ ಮಾರ್ಗಗಳನ್ನು ಮರೆತಿದ್ದೇವೆ. ಆದರೆ, ಈ ಆದರ್ಶಗಳು ಇನ್ನು ಇದೇ ಎಂಬುದನ್ನು ನಾನು ನಂಬಿದ್ದು, ಅಮೆರಿಕನ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು.
ರಾಷ್ಟ್ರೀಯ ಗುರುತಿನ ಬಿಕ್ಕಟ್ಟಿನ ಮಧ್ಯದಲ್ಲಿ ನಾವಿದ್ದೇವೆ. ನಂಬಿಕೆ, ರಾಷ್ಟ್ರೀಯವಾದ ಮತ್ತು ಕುಟುಂಬಗಳು ಕಣ್ಮರೆಯಾಗಿದೆ. ಜಾತ್ಯತೀಯ ಧರ್ಮ ನಂತರ ವೊಕೊಯಿಸಮ್ ನಿಂದ ಕ್ಲೈಮೆಟಿಸಮ್ವರೆಗೆ ನಮ್ಮ ಆಳವಾದ ಅವಶ್ಯಕತೆ ಅರ್ಥವನ್ನು ತೃಪ್ತಿಗೊಳಿಸಬೇಕಿದೆ. ಅಮೆರಿಕನ್ ಎಂದರೆ ಅರ್ಥ ಏನು ಎಂಬುದನ್ನು ಇನ್ನೂ ಹೇಳಲು ಸಾಧ್ಯವಿಲ್ಲ. ಹಲವರಿಂದ ಒಂದು, ಇದು ಅಮೆರಿಕನ್ ಕ್ರಾಂತಿಯ ಗೆಲುವಿನ ಕಾರಣವಾಗಿದೆ. ನಾಗರಿಕ ಯುದ್ಧದ ಬಳಿಕ ನಾವು ಒಗ್ಗೂಡಿದ್ದೇವೆ. ನಾವು ಎರಡು ಜಾಗತಿಕ ಯುದ್ಧ ಮತ್ತು ಶೀತಲ ಸಮರವನ್ನು ಗೆದ್ದಿದ್ದೇವೆ. ಇದೇ ಕನಸು ಜಗತ್ತಿಗೆ ಇನ್ನೂ ಭರವಸೆಯನ್ನು ನೀಡುತ್ತಿದೆ ಎಂದು ರಾಮಸ್ವಾಮಿ ಪ್ರತಿಪಾದಿಸಿದ್ದಾರೆ. ವಿವೇಕ್ ರಾಮಸ್ವಾಮಿ ಸ್ಟೈವ್ ಅಸೆಟ್ ಮ್ಯಾನೇಜ್ಮೆಂಟ್ನ ಸಹ ಸಂಸ್ಥಾಪಕರಾಗಿದ್ದು, ಪ್ರಸ್ತುತ ಕಾರ್ಯ ನಿರ್ವಹಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯಾರು ಈ ರಾಮಸ್ವಾಮಿ: ಯೇಲ್ ಯುನಿವರ್ಸಿಟಿಯಿಂದ ಡಾಕ್ಟರ್ ಆಫ್ ಲಾ ಪದವಿ ಪಡೆದಿದ್ದು, 2007ರಲ್ಲಿ ಹಾರ್ವಡ್ ಯುನಿವರ್ಸಿಟಿಯಲ್ಲಿ ಪದವಿಯನ್ನು ಗಳಿಸಿಕೊಂಡಿದ್ದಾರೆ. ರಾಮಸ್ವಾಮಿಯವರ ಆಸ್ತಿ 600 ಮಿಲಿಯನ್ ಡಾಲರ್ ಇದೆ. 40 ರೊಳಗೆ ಇರುವ ಅಮೆರಿಕದ ಶ್ರೀಮಂತ ಉದ್ಯಮಿಯಲ್ಲಿ ರಾಮಸ್ವಾಮಿ ಕೂಡ ಒಬ್ಬರಾಗಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ. 2015ರಿಂದ 2016ರವರೆಗೆ ಅತಿದೊಡ್ಡ ಬಯೊಟೆಕ್ ಐಪಿಒಗಳನ್ನು ಮುನ್ನಡೆಸಿದ್ದಾರೆ. ವೊಕ್,ಇನ್ಕ್: ಇನ್ಸೈಡ್ ಕಾರ್ಪೊರೇಟ್ ಅಮೆರಿಕಸ್ ಸೋಷಿಯಲ್ ಜಸ್ಟೀಸ್ ಸ್ಕಾಮ್ ಪುಸ್ತಕ ಬರೆದಿದ್ದಾರೆ.
ನಿಕ್ಕಿ ಹ್ಯಾಲೆ ಬಳಿಕ ಮತ್ತೊಬ್ಬ ಭಾರತೀಯ ಅಮೆರಿಕನ್ ಅಧ್ಯಕ್ಷೀಯ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇತ್ತೀಚೆಗಷ್ಟೆ ಸೌತ್ ಕರೋಲಿನ್ ಮಾಜಿ ಗವರ್ನರ್ ಮತ್ತು ವಿಶ್ವ ಸಂಸ್ಥೆಗೆ ಶಾಶ್ವತ ಪ್ರತಿನಿಧಿಯಾಗಿರುವ ನಿಕ್ಕಿ ಹ್ಯಾಲೆ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು. 51 ವರ್ಷದ ಹ್ಯಾಲೆ ದಕ್ಷಿಣ ಕೆರೊಲಿನಾದಲ್ಲಿ ಎರಡು ಅವಧಿಗೆ ಗವರ್ನರ್ ಮತ್ತು ಅಮೆರಿಕದ ವಿಶ್ವಸಂಸ್ಥೆಯ ಮಾಜಿ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ತಮ್ಮ ಮೊದಲ ಸಾರ್ವಜನಿಕ ಸಮಾರಂಭದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಯೋಜನೆಯನ್ನು ನಿಜವಾಗಿಸಬಹುದು ಎಂಬ ದೃಢವಿಶ್ವಾಸ ಎಂದಿಗಿಂತಲೂ ಇಂದು ಹೆಚ್ಚು ಹೊಂದಿದ್ದೇನೆ. ಕಾರಣ ನನ್ನ ಸಂಪೂರ್ಣ ಜೀವನವನ್ನು ನಾನು ನೋಡಿದ್ದೇನೆ. ಕಂದು ಬಣ್ಣದ ಹುಡುಗಿಯಾಗಿ, ಕಪ್ಪು ಮತ್ತು ಬಿಳಿ ಜನರ ನಡುವೆ ಬೆಳಯುತ್ತಿರುವಾಗ, ನನ್ನ ಮುಂದೆ ಅಮೆರಿಕದ ಭರವಸೆಯಾಗಿ ಬೆಳೆಯುವುದನ್ನು ನೋಡಿದೆ ಎಂದರು
ಇದನ್ನೂ ಓದಿ: 2024ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಭಾರತೀಯ ಮೂಲದ ಹ್ಯಾಲೆ ಘೋಷಣೆ!