ಲೆವಿಸ್ಟನ್ (ಅಮೆರಿಕ): ಮೈನ್ ರಾಜ್ಯದ ಲೆವಿಸ್ಟನ್ ನಗರದ ಬೌಲಿಂಗ್ ಅಲ್ಲೆ, ಬಾರ್ ಸೇರಿದಂತೆ ಹಲವೆಡೆ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ 22 ಮಂದಿ ಸಾವನ್ನಪ್ಪಿದ್ದು, 50 - 60 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
-
#WATCH | At least 16 people were killed and 50-60 wounded in mass shootings in Lewiston, Maine in the US on Wednesday: Reuters
— ANI (@ANI) October 26, 2023 " class="align-text-top noRightClick twitterSection" data="
(Video Source: Reuters) pic.twitter.com/tFOC7ZdLKa
">#WATCH | At least 16 people were killed and 50-60 wounded in mass shootings in Lewiston, Maine in the US on Wednesday: Reuters
— ANI (@ANI) October 26, 2023
(Video Source: Reuters) pic.twitter.com/tFOC7ZdLKa#WATCH | At least 16 people were killed and 50-60 wounded in mass shootings in Lewiston, Maine in the US on Wednesday: Reuters
— ANI (@ANI) October 26, 2023
(Video Source: Reuters) pic.twitter.com/tFOC7ZdLKa
ಲೆವಿಸ್ಟನ್ ನಗರದ ಸ್ಪೇರ್‌ಟೈಮ್ ರಿಕ್ರಿಯೇಶನ್ ಬೌಲಿಂಗ್ ಅಲ್ಲೆ, ಸ್ಕೀಮಿಂಗೀಸ್ ಬಾರ್ ಮತ್ತು ಗ್ರಿಲ್ ರೆಸ್ಟೋರೆಂಟ್ ಮತ್ತು ವಾಲ್‌ಮಾರ್ಟ್ ವಿತರಣಾ ಕೇಂದ್ರದಲ್ಲಿ ಸ್ಥಳೀಯ ಕಾಲಮಾನದ ಪ್ರಕಾರ ಬುಧವಾರ ರಾತ್ರಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಬಾರ್ನಿಂದ ಉತ್ತರಕ್ಕೆ 6.5 ಕಿಲೋ ಮೀಟರ್ ದೂರದಲ್ಲಿ ಬೌಲಿಂಗ್ ಅಲ್ಲೆ ಹಾಗೂ ದಕ್ಷಿಣಕ್ಕೆ 2.5 ಕಿಲೋ ಮೀಟರ್ ದೂರದಲ್ಲಿ ವಿತರಣಾ ಕೇಂದ್ರವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೆವಿಸ್ಟನ್ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಬಾರ್ ಹಾಗೂ ಬೌಲಿಂಗ್ ಅಲ್ಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿಗೆ ಸಂಬಂಧಿಸಿದಂತೆ ರೈಫಲ್ ಹಿಡಿದಿರುವಂತೆ ತೋರುವ ವ್ಯಕ್ತಿಯೊಬ್ಬನ ಫೋಟೋವನ್ನು ಹಂಚಿಕೊಂಡಿದೆ. 40 ವರ್ಷದ ರಾಬರ್ಟ್ ಕಾರ್ಡ್ ಎಂದು ಗುರುತಿಸಿದ್ದು, ಆತನನ್ನು ಶಸ್ತ್ರಸಜ್ಜಿತ ಮತ್ತು ಅಪಾಯಕಾರಿ ಎಂದು ಪರಿಗಣಿಸಬೇಕು ಎಂದು ಹೇಳಿದೆ.
ಬಿಳಿ ಬಣ್ಣದ ಎಸ್ಯುವಿ ಚಿತ್ರದ ಜೊತೆಗೆ ಅಪರಿಚಿತ ಶಂಕಿತ ರೈಫಲ್ನಂತೆ ತೋರುವ ಮೂರು ಪೋಟೋಗಳನ್ನು ಪೊಲೀಸರು ಮೊದಲು ಪೋಸ್ಟ್ ಮಾಡಿದ್ದರು. ಪೊಲೀಸರು ಎಕ್ಸ್ನಲ್ಲಿ ಶೂಟರ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಶಾಪ್ಗಳನ್ನು ಮುಚ್ಚಿ ವ್ಯವಹಾರಗಳನ್ನು ನಿಲ್ಲಿಸುವಂತೆ ಹಾಗೂ ಜನರು ತಮ್ಮ ಮನೆಗಳಲ್ಲಿ ಬೀಗ ಹಾಕಿಕೊಂಡು ಇರಲು ಆ್ಯಂಡ್ರೋಸ್ಕೋಗ್ಗಿನ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.
ಘಟನೆಯ ಬಗ್ಗೆ ಅಮರಿಕದ ಅಧ್ಯಕ್ಷ ಜೋ ಬೈಡನ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲೆವಿಸ್ಟನ್ ಮೇಯರ್ ಕಾರ್ಲ್ ಶೆಲೈನ್ ಅವರು, ನಮ್ಮ ನಗರ ಹಾಗೂ ಜನರು ಆತಂಕಕ್ಕೊಳಗಾಗಿದ್ದಾರೆ. ಈಗಾಗಲೇ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಅಲ್ಲಿನ ನಿವಾಸಿಗಳನ್ನು ಒತ್ತಾಯಿಸಿದ್ದಾರೆ.
ಟೆಕ್ಸಾಸ್ನ ಉವಾಲ್ಡೆಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ, 19 ಮಕ್ಕಳು ಹಾಗೂ ಇಬ್ಬರು ಶಿಕ್ಕರು ಸಾವನ್ನಪ್ಪಿದ್ದ ಘಟನೆ 2022ರ ಮೇಯಲ್ಲಿ ನಡೆದಿತ್ತು. ಅದಾದ ನಂತರ ಯುನೈಟೆಡ್ ಸ್ಟೇಟ್ಸ್ನಲ್ಲಿ ನಡೆದ ಅತ್ಯಂತ ಭೀಕರ ಗುಂಡಿನ ದಾಳಿ ಇದಾಗಿದೆ.
ಅಮೆರಿಕದಲ್ಲಿ ಇಂತಹ ಗುಂಡಿನ ದಾಳಿಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ. ಇಲ್ಲಿ ಎಲ್ಲರಿಗೂ ಬಂದೂಕುಗಳನ್ನು ಇಟ್ಟುಕೊಳ್ಳಲು ಸುಲಭವಾಗಿ ಲೈಸೆನ್ಸ್ ನೀಡಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಗುಂಡಿನ ದಾಳಿಗೆ ಮೂವರು ಮಕ್ಕಳು ಸೇರಿ 5 ಮಂದಿ ಸಾವು