ವಾಷಿಂಗ್ಟನ್: ಅಮೆರಿಕದ ಶ್ವೇತಭವನದ ಪತ್ರಿಕಾ ಸಹಾಯಕ ಕಾರ್ಯದರ್ಶಿಯಾದ ಭಾರತೀಯ ಮೂಲದ ವೇದಾಂತ್ ಪಟೇಲ್ರನ್ನು ವೈಟ್ಹೌಸ್ ಮೀಡಿಯಾ ಡೆಸ್ಕ್ 'ಸೂಪರ್ ಟ್ಯಾಲೆಂಟೆಡ್' ಎಂದು ಬಣ್ಣಿಸಿದೆ. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯಾದ ಜೆನ್ ಸಾಕಿ ಇಂದು ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ವೇದಾಂತ್ ಪಟೇಲ್ ಅವರ ಎದುರೇ ಅವರನ್ನು ಸೂಪರ್ ಟ್ಯಾಲೆಂಟೆಡ್ ಎಂದು ಪ್ರಶಂಸಿಸಿದರು. 'ವೇದಾಂತ್ ಅವರು ಶ್ವೇತಭವನ ನೀಡುವ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಆಗಾಗ್ಗೆ ನಾನು ವೇದಾಂತ್ರಿಗೆ ನಾವು ನಿಮಗೆ ನೀಡುವ ಕೆಲಸ ಸುಲಭವಾಗಿವೆಯಲ್ಲವೇ ಎಂದು ಕೆಲಸದ ವಿಚಾರವಾಗಿ ತಮಾಷೆ ಮಾಡುತ್ತಿರುತ್ತೇನೆ' ಎಂದು ಹೇಳಿದ್ದಾರೆ.
ವೇದಾಂತ್ ಅವರು ಬಹಳ ಸುಂದರ ಬರಹಗಾರರು ಮತ್ತು ಅಷ್ಟೇ ವೇಗವುಳ್ಳವುವರು. ಸರ್ಕಾರದಲ್ಲಿ ಅತ್ಯಂತ ಭರವಸೆಯ ವೃತ್ತಿಜೀವನವನ್ನು ಹೊಂದಿದ್ದಾರೆ. ನನಗೆ ಮತ್ತು ಅಧ್ಯಕ್ಷರಿಗೆ ಸಹಾಯ ಮಾಡಲು ಅದ್ಭುತವಾಗಿ ಕೆಲಸ ಮಾಡುತ್ತಾರೆ ಎಂದು ಬಣ್ಣಿಸಿದ್ದಾರೆ.
ಅಮೆರಿಕದಲ್ಲಿ ಜೋ ಬೈಡನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವೇದಾಂತ್ ಪಟೇಲ್ ವೈಟ್ ಹೌಸ್‌ನಲ್ಲಿ ಸಹಾಯಕ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪದವೀಧರರಾಗಿದ್ದು, ಫ್ಲೋರಿಡಾ ವಿಶ್ವವಿದ್ಯಾಲಯದ ವಾರಿಂಗ್‌ಟನ್ ಕಾಲೇಜ್ ಆಫ್ ಬ್ಯುಸಿನೆಸ್‌ನಿಂದ ಎಂಬಿಎ ಪದವಿ ಗಳಿಸಿದ್ದಾರೆ. ಗುಜರಾತ್‌ನಲ್ಲಿ ಜನಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ ಗುಪ್ತಚರ ಸಂಸ್ಥೆ ಪ್ರವೇಶಿಸಲು ಯತ್ನಿಸಿದ ಪಾಕ್ ಐಎಸ್ಐ ಗೂಢಾಚಾರಿಗಳ ಬಂಧನ