ETV Bharat / international

ಪಿಎಂ ಮೋದಿ ತಾಯಿ ಹೀರಾಬೆನ್ ನಿಧನಕ್ಕೆ ಕಂಬನಿ ಮಿಡಿದ ಅಮೆರಿಕ ಅಧ್ಯಕ್ಷ ಬೈಡನ್​ - ನಿಧನರಾಗಿದ್ದಕ್ಕೆ ನಿನ್ನೆ ಅನೇಕ ಗಣ್ಯರು ಕಂಬನಿ

ಹೀರಾಬೆನ್ ನಿಧನಕ್ಕೆ ಕಂಬನಿ ಮಿಡಿದ ಅಮೆರಿಕ ಅಧ್ಯಕ್ಷ - ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಬೈಡನ್​ ಸಂತಾಪ.

US President joe Biden offers condolences  joe Biden offers condolences to PM Modi  condolences to PM Modi over his mother demise  US President joe Biden news  ಪಿಎಂ ಮೋದಿ ತಾಯಿ ಹೀರಾಬೆನ್ ನಿಧನ  ಹೀರಾಬೆನ್ ನಿಧನಕ್ಕೆ ಕಂಬನಿ ಮಿಡಿದ ಅಮೆರಿಕ ಅಧ್ಯಕ್ಷ  ಕಂಬನಿ ಮಿಡಿದ ಅಮೆರಿಕ ಅಧ್ಯಕ್ಷ  ನಿಧನರಾಗಿದ್ದಕ್ಕೆ ನಿನ್ನೆ ಅನೇಕ ಗಣ್ಯರು ಕಂಬನಿ  ಅಮೆರಿಕ ಅಧ್ಯಕ್ಷ ಜೋ ಬೈಡನ್​ ಕಂಬನಿ
ಪಿಎಂ ಮೋದಿ ತಾಯಿ ಹೀರಾಬೆನ್ ನಿಧನಕ್ಕೆ ಕಂಬನಿ ಮಿಡಿದ ಅಮೆರಿಕ ಅಧ್ಯಕ್ಷ ಬೈಡೆನ್​
author img

By

Published : Dec 31, 2022, 7:54 AM IST

ವಾಷಿಂಗ್ಟನ್​, (ಅಮೆರಿಕ)​: ಪ್ರಧಾನಿ ಮೋದಿ ಅವರ ತಾಯಿ ನಿಧನರಾಗಿದ್ದಕ್ಕೆ ನಿನ್ನೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ ನಿಧನಕ್ಕೆ ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬಾ ಅವರು ನಿಧನಕ್ಕೆ ಅಮೆರಿಕ ಅಧ್ಯಕ್ಷ ಸಂತಾಪ ಸೂಚಿಸಿದ್ದಾರೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಜೋ ಬೈಡೆನ್​ ಟ್ವೀಟ್​ ಮಾಡಿದ್ದಾರೆ.

  • Jill and I send our deepest and heartfelt condolences to Prime Minister @narendramodi on the loss of his mother, Heeraben Modi.

    Our prayers are with the Prime Minister and his family at this difficult time.

    — President Biden (@POTUS) December 30, 2022 " class="align-text-top noRightClick twitterSection" data=" ">

ಹೀರಾ ಬಾ ಆರೋಗ್ಯದಲ್ಲಿ ಬುಧವಾರ ಹಠಾತ್​ ಆಗಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೀರಾಬೆನ್​ ಆರೋಗ್ಯದ ಬಗ್ಗೆ ಆಸ್ಪತ್ರೆಯವರು ಮಾಧ್ಯಮ ಪ್ರಕಟಣೆ ನೀಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ಮೋದಿ ತಾಯಿ ಹೀರಾಬೆನ್​ ಕೊನೆಯುಸಿರೆಳೆದರು. ಹೀರಾಬೆನ್​ ಆರೋಗ್ಯದಲ್ಲಿ ಏರುಪೇರು ಕಂಡ ಬಳಿಕ ಪ್ರಧಾನಿ ಮೋದಿ ಅವರ ತಾಯಿ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಉತ್ತರ ಪ್ರದೇಶದ ವಾರಾಣಸಿಯ ಅಸ್ಸಿ ಘಾಟ್‌ನಲ್ಲಿರುವ ಪಗೋಡಾದಲ್ಲಿ ಮಹಾಮೃತ್ಯುಂಜಯ ಹೋಮ ನೆರವೇರಿಸಿದ್ದರು. ಬನಾರಸ್‌ನ ದೇವಾಲಯದಲ್ಲಿ ಹವನ ಪೂಜೆಯನ್ನು ಮಾಡುವುದರೊಂದಿಗೆ ಹೀರಾಬೆನ್ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದರು.

ತಾಯಿಯ ಗುಣಗಾನ ಮಾಡಿದ ಪ್ರಧಾನಿ: ಹೀರಾಬೆನ್​ ನಿಧನದ ಹಿನ್ನೆಲೆಯಲ್ಲಿ ವಿಶೇಷ ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ ತಮ್ಮ ತಾಯಿಯನ್ನು ಕರ್ಮಯೋಗಿ ಎಂದು ಗುಣಗಾನ ಮಾಡಿದ್ದರು. ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ .. ನನ್ನ ತಾಯಿಯಲ್ಲಿ ನಾನು ಯಾವಾಗಲೂ ಶಕ್ತಿ, ಪ್ರೀತಿ ಮತ್ತು ವಾತ್ಸಲ್ಯವನ್ನು ಅನುಭವಿಸಿದ್ದೇನೆ. ಅವರದ್ದು, ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ‘‘ ಎಂದು ಟ್ವೀಟ್​ ಮಾಡುವ ಮೂಲಕ ಪ್ರಧಾನಿ ಮೋದಿ ತಮ್ಮ ತಾಯಿಯ ಗುಣಗಾನ ಮಾಡಿದ್ದರು.

ಜೂನ್​ನಲ್ಲಿ ನೂರು ವಸಂತ ಪೂರೈಸಿದ್ದ ಹೀರಾಬೆನ್: ಹಿರಿಯ ಜೀವವಾಗಿರುವ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್, ಇದೇ ವರ್ಷದ ಜೂನ್​ ತಿಂಗಳಲ್ಲಿ ನೂರು ವಸಂತಗಳನ್ನು ಪೂರೈಸಿದ್ದರು. ಅಂದು ಸಹ ಮೋದಿ ಖುದ್ದು ಅಮ್ಮನನ್ನು ಭೇಟಿ ಮಾಡಿ, ಅವರ ಪಾದಗಳನ್ನು ತೊಳೆದು ಆಶೀರ್ವಾದ ಪಡೆದಿದ್ದರು. ಅಲ್ಲದೇ, ಇತ್ತೀಚೆಗಷ್ಟೇ ಮುಗಿದ ಗುಜರಾತ್ ವಿಧಾನಸಭೆ ಚುನಾವಣೆಗೂ ಒಂದು ದಿನ ಮೊದಲು ಪ್ರಧಾನಿ ಮೋದಿ ಅವರು ಹೀರಾಬೆನ್​ ಅವರನ್ನು ಭೇಟಿ ಮಾಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಹೀರಾಬೆನ್​ ಅವರು ಗಾಲಿಕುರ್ಚಿಯ ಮೇಲೆ ಬಂದು ಮತ ಚಲಾಯಿಸಿದ್ದರು.

ಓದಿ: ಪಿಎಂ ಮೋದಿ ತಾಯಿ ಹೀರಾಬೆನ್ ನಿಧನ.. ಗಣ್ಯರ ಕಂಬನಿ.. ಅಹಮದಾಬಾದ್​​ನತ್ತ ಪ್ರಧಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.