ETV Bharat / international

ಏರ್​ಪೋರ್ಟ್​ನಲ್ಲಿ ಎಡವಟ್ಟು: ಪಾಸ್​ಪೋರ್ಟ್​ ಇಲ್ಲದೇ ವಿದೇಶಕ್ಕೆ ಹಾರಿದ ಮಹಿಳೆ! - ಘಟನೆಯೊಂದು ಸುಮಾರು ಆರು ತಿಂಗಳ ಬಳಿಕ ಬೆಳಕಿಗೆ

ಮಹಿಳೆಯೊಬ್ಬರು ದೇಶೀಯ ವಿಮಾನದ ಬದಲು ಅಂತಾರಾಷ್ಟ್ರೀಯ ವಿಮಾನವನ್ನು ತಪ್ಪಾಗಿ ಏರಿದ್ದರು. ವಿಮಾನ ಹತ್ತಿದ ಸ್ವಲ್ಪ ಹೊತ್ತಿನಲ್ಲೇ ತಪ್ಪಿನ ಅರಿವಾಗಿದೆ. ಮುಂದೇನಾಯ್ತು ನೋಡೋಣ.

US passenger boards wrong flight  flown to foreign country without passport  plane mistake  ಏರ್​ಪೋರ್ಟ್​ನಲ್ಲಿ ಎಡವಟ್ಟು  ಪಾಸ್​ಪೋರ್ಟ್​ ಇಲ್ಲದೇ ವಿದೇಶಕ್ಕೆ ಹಾರಿದ ಮಹಿಳೆ  ದೇಶಿಯ ವಿಮಾನದ ಬದಲು ಅಂತರರಾಷ್ಟ್ರೀಯ ವಿಮಾನ  ವಿಮಾನದಲ್ಲಿ ಅವಾಂತರಗಳು ನಿರಂತರವಾಗಿ ಹೆಚ್ಚು  ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ  ಘಟನೆಯೊಂದು ಸುಮಾರು ಆರು ತಿಂಗಳ ಬಳಿಕ ಬೆಳಕಿಗೆ  ಫ್ರಾಂಟಿಯರ್ ಏರ್‌ಲೈನ್ಸ್ ಪಾಸ್‌ಪೋರ್ಟ್
ಪಾಸ್​ಪೋರ್ಟ್​ ಇಲ್ಲದೇ ವಿದೇಶಕ್ಕೆ ಹಾರಿದ ಮಹಿಳೆ!
author img

By

Published : May 8, 2023, 10:11 AM IST

ನ್ಯೂಜೆರ್ಸಿ (ಅಮೆರಿಕ): ಕಳೆದ ಕೆಲವು ತಿಂಗಳುಗಳಿಂದ ವಿಮಾನದಲ್ಲಿ ಅವಾಂತರಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಪ್ರಯಾಣಿಕನೊಬ್ಬ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಘಟನೆ, ಮಹಿಳೆಗೆ ಚೇಳು ಕಚ್ಚಿರುವ ಪ್ರಕರಣ ಸೇರಿದಂತೆ ಅನೇಕ ವಿದ್ಯಮಾನಗಳು ವಿಮಾನೋದ್ಯಮದಲ್ಲಿ ನಡೆದಿವೆ. ಇದೀಗ ಅಮೆರಿಕದಲ್ಲಿ ನಡೆದ ವಿಚಿತ್ರ ಘಟನೆಯೊಂದು ಆರು ತಿಂಗಳ ಬಳಿಕ ಬೆಳಕಿಗೆ ಬಂದಿದೆ.

ಅಮೆರಿಕದ ಫ್ರಾಂಟಿಯರ್ ಏರ್‌ಲೈನ್ಸ್ ಪಾಸ್‌ಪೋರ್ಟ್ ಇಲ್ಲದ ನ್ಯೂಜೆರ್ಸಿಯ ಮಹಿಳೆಯನ್ನು ಜಾಕ್ಸನ್‌ವಿಲ್ ಬದಲಿಗೆ ಜಮೈಕಾಗೆ ತಲುಪಿಸಿತ್ತು. ಗ್ಲೌಸೆಸ್ಟರ್ ಕೌಂಟಿಯ ನಿವಾಸಿ ಬೆವರ್ಲಿ ಎಲ್ಲಿಸ್-ಹೆಬ್ಬಾರ್ಡ್ ಎಂಬ ಮಹಿಳೆ ಫಿಲಡೆಲ್ಫಿಯಾದಿಂದ ಜಾಕ್ಸನ್‌ವಿಲ್ಲೆ ಆಗಾಗ ವಿಮಾನ ಪ್ರಯಾಣ ಮಾಡುತ್ತಿರುತ್ತಾರೆ. ಜಾಕ್ಸನ್‌ವಿಲ್ಲೆಯಲ್ಲಿ ಬೆವರ್ಲಿಗೆ ಮತ್ತೊಂದು ಮನೆ ಇದೆ. ಹೀಗಾಗಿ ಆಕೆ ಫಿಲಡೆಲ್ಫಿಯಾದಿಂದ ಜಾಕ್ಸನ್‌ವಿಲ್ಲೆಗೆ ಪ್ರಯಾಣಿಸುತ್ತಿರುತ್ತಾರೆ.

ನವೆಂಬರ್ 6, 2022 ರಂದು ಬೆವರ್ಲಿ ಅವರು ಜಾಕ್ಸನ್‌ವಿಲ್ಲೆಗೆ ಹೋಗಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ವಿಮಾನ ಹತ್ತುವ ಮೊದಲು ವಾಶ್ ರೂಂಗೆ ಹೋಗಿದ್ದರು. ಬಳಿಕ ಆಕೆ ಹತ್ತಬೇಕಿದ್ದ ವಿಮಾನದ ಬೋರ್ಡಿಂಗ್ ಗೇಟ್ ಬದಲಾಗಿತ್ತು. ಆದ್ದರಿಂದ ಅವರು ಜಮೈಕಾಗೆ ತೆರಳುವ ವಿಮಾನ ಹತ್ತಿದ್ದಾರೆ. ಸ್ವಲ್ಪ ಸಮಯದ ನಂತರ, ಬೆವರ್ಲಿ ಎಲ್ಲಿಸ್-ಹೆಬಾರ್ಡ್ ತನ್ನ ಗಮ್ಯಸ್ಥಾನಕ್ಕೆ ಹೋಗಬೇಕಾದ ವಿಮಾನದ ಬದಲಿಗೆ ಮತ್ತೊಂದು ವಿಮಾನ ಹತ್ತಿರುವುದರ ಬಗ್ಗೆ ಅರಿತುಕೊಂಡರು. ಕೂಡಲೇ ವಿಚಾರವನ್ನು ಸಿಬ್ಬಂದಿಯ ಗಮನಕ್ಕೂ ತಂದಿದ್ದರು. ಆಕಸ್ಮಿಕವಾಗಿ ಗೇಟ್ ಬದಲಾಯಿಸಿದ್ದರಿಂದ ಈ ಅಚಾತುರ್ಯ ನಡೆದಿತ್ತು ಎಂದು ಸಿಬ್ಬಂದಿ ಹೇಳಿದ್ದರು.

ಬೆವರ್ಲಿ ಎಲ್ಲಿಸ್-ಹೆಬಾರ್ಡ್ ಅವರು ದೇಶೀಯ ವಿಮಾನದಲ್ಲಿ ಪ್ರಯಾಣಿಸಬೇಕಾಗಿರುವುದರಿಂದ ಆಕೆ ಪಾಸ್‌ಪೋರ್ಟ್ ಹೊಂದಿರಲಿಲ್ಲ. ಹೀಗಾಗಿ ಸ್ವಲ್ಪ ಹೊತ್ತು ಗಾಬರಿಯಾಗಿದ್ದರು. ವಿಮಾನ ಇಳಿದ ನಂತರ ಫಿಲಡೆಲ್ಫಿಯಾ ವಿಮಾನ ಹತ್ತಲು ಕಾಯುತ್ತಿದ್ದರು. ಅವರು ಅಷ್ಟು ಹೊತ್ತು ಜೆಟ್‌ವೇಯಲ್ಲಿ ಇರಲು ಅವಕಾಶ ಮಾಡಿಕೊಟ್ಟರು. ಫ್ರಾಂಟಿಯರ್ ಏರ್‌ಲೈನ್ಸ್‌ವರು ಬೆವರ್ಲಿ ಎಲ್ಲಿಸ್-ಹೆಬಾರ್ಡ್ ಬಳಿ ಘಟನೆಗೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಿದ್ದಾರೆ. ಏರ್‌ಲೈನ್ ಕಂಪನಿಯು ಆಕೆಯ ಮೂಲ ಟಿಕೆಟ್ ದರವನ್ನು ಮರುಪಾವತಿ ಮಾಡಿದೆ. ಪರಿಹಾರವಾಗಿ ಸ್ವಲ್ಪ ಹಣವನ್ನೂ ನೀಡಿದೆ.

ಫ್ರಾಂಟಿಯರ್​ ಏರ್‌ಲೈನ್ಸ್‌ನ ವಕ್ತಾರ ಮಾತನಾಡಿ, ಫ್ರಾಂಟಿಯರ್ ಏರ್ಲೈನ್ಸ್ ಇಡೀ ವಿಷಯದ ಬಗ್ಗೆ ಬೇಸರ ವ್ಯಕ್ತಪಡಿಸಿದೆ. ಸಂಪೂರ್ಣ ಘಟನೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಗ್ರಾಹಕರು ತಪ್ಪು ವಿಮಾನ ಏರಿದ್ದಾರೆ. ನಾವು ಮಹಿಳೆಗೆ ಟಿಕೆಟ್​ ದರ ಮರುಪಾವತಿ ಮತ್ತು ಪರಿಹಾರವನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಏರ್​ ಇಂಡಿಯಾ ವಿಮಾನದಲ್ಲಿ ಮಹಿಳಾ ಪ್ರಯಾಣಿಕರಿಗೆ ಕಚ್ಚಿದ ಚೇಳು

ಭಾರತದ ಮೇಲೆ ಹಾರಾಡಿದ ಪಾಕ್ ವಿಮಾನ: ಭಾರಿ ಮಳೆಯ ಕಾರಣದಿಂದ ಲಾಹೋರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದ ಪಾಕಿಸ್ತಾನ್ ಇಂಟರ್​ ನ್ಯಾಷನಲ್ ಏರ್​ಲೈನ್ಸ್ ವಿಮಾನವೊಂದು ಭಾರತದ ವಾಯು ಪ್ರದೇಶದಲ್ಲಿ ಸುಮಾರು 10 ನಿಮಿಷಗಳ ಕಾಲ ಇತ್ತೀಚೆಗೆ ಹಾರಾಟ ನಡೆಸಿದೆ. ಪಂಜಾಬ್ ರಾಜ್ಯದ ಮೇಲಿನಿಂದ ಸುಮಾರು 125 ಕಿಲೋ ಮೀಟರ್ ಕ್ರಮಿಸಿ ಪಾಕಿಸ್ತಾನಕ್ಕೆ ಮರಳಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.