ಬರ್ಲಿನ್ (ಅಮೆರಿಕ) : ತರಬೇತಿ ವೇಳೆ ಯುದ್ಧ ವಿಮಾನ ಪತನಗೊಂಡು ಐವರು ಯುಎಸ್ ಯೋಧರು ಸಾವನ್ನಪ್ಪಿರುವುದಾಗಿ ಯುಎಸ್ ಯುರೋಪಿಯನ್ ಕಮಾಂಡ್ ತಿಳಿಸಿದೆ. ಶುಕ್ರವಾರ ಸಂಜೆ ವೇಳೆ ಇಲ್ಲಿನ ಪೂರ್ವ ಮೆಡಿಟರೇನಿಯನ್ ಸಮುದ್ರದ ಮೇಲೆ ತರಬೇತಿ ನಡೆಯುತ್ತಿದ್ದ ಯುದ್ಧ ವಿಮಾನ ಪತನಗೊಂಡಿದೆ ಎಂದು ಹೇಳಿದೆ.
ಯುಎಸ್ ಯುರೋಪಿಯನ್ ಕಮಾಂಡ್ ಮಾಹಿತಿ ಪ್ರಕಾರ, ಶುಕ್ರವಾರ ಸಂಜೆ ವೇಳೆ ಯುದ್ಧ ವಿಮಾನ ಪತನಗೊಂಡಿದೆ. ಇಲ್ಲಿನ ಪೂರ್ವ ಮೆಡಿಟರೇನಿಯನ್ ಸಮುದ್ರದ ಮೇಲೆ ಯುದ್ಧಾಭ್ಯಾಸ ನಡೆಸಲಾಗುತ್ತಿತ್ತು. ಈ ವೇಳೆ ಮಿಲಿಟರಿ ತರಬೇತಿಯ ಭಾಗವಾಗಿ ಇಂಧನ ತುಂಬುವ ಕಾರ್ಯಾಚರಣೆ ವೇಳೆ ಅವಘಡ ನಡೆದಿದೆ. ಈ ವೇಳೆ ವಿಮಾನದಲ್ಲಿದ್ದ ಐವರು ಯುಎಸ್ ಯೋಧರು ಸಾವನ್ನಪ್ಪಿರುವುದಾಗಿ ತಿಳಿಸಿದೆ.
ಇದಕ್ಕೂ ಮೊದಲು ಶನಿವಾರದಂದು ವಿಮಾನ ಪತನಗೊಂಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಿಮಾನ ಪತನಗೊಂಡ ಕೂಡಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಈವರೆಗೆ ಮೃತ ಯೋಧರ ಗುರುತನ್ನು ಬಹಿರಂಗಪಡಿಸಲಾಗಿಲ್ಲ. ಈ ಯುದ್ಧ ವಿಮಾನವು ಯಾವ ಸೇನಾಪಡೆಗೆ ಸೇರಿದ್ದು ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಶನಿವಾರ ಸಂಜೆ ಮೆಡಿಟರೇನಿಯನ್ ಸಮುದ್ರದ ಮೇಲೆ ನಡೆದ ಯುದ್ಧಾಭ್ಯಾಸ ತರಬೇತಿ ಸಂದರ್ಭ ಐವರು ಯೋಧರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸುತ್ತೇವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ನಮ್ಮ ರಾಷ್ಟ್ರವನ್ನು ಸುರಕ್ಷಿತವಾಗಿಡಲು ನಮ್ಮ ಯೋಧರು ಪ್ರತಿದಿನ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ ಎಂದು ಹೇಳಿದರು.
ಇತ್ತೀಚಿನ ಘಟನೆ- ಅಮೆಜಾನ್ ಕಾಡಿನಲ್ಲಿ ವಿಮಾನ ಪತನ : ಬ್ರೆಜಿಲ್‌ನ ಅಮೆಜಾನ್ ಕಾಡಿನಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಇಬ್ಬರು ಪೈಲಟ್ ಸೇರಿ 12 ಮಂದಿ ಸಾವನ್ನಪ್ಪಿದ್ದರು. ವಿಮಾನದಲ್ಲಿ ಶಿಶು ಸೇರಿದಂತೆ 10 ಮಂದಿ ಪ್ರಯಾಣಿಕರಿದ್ದರು.
ಸಿಂಗಲ್ - ಎಂಜಿನ್ ಸೆಸ್ನಾ ಕಾರವಾನ್ನಲ್ಲಿ ಟೇಕ್ ಆಫ್ ಆದ ವಿಮಾನ ಸ್ವಲ್ಪ ಸಮಯದ ನಂತರ ರಿಯೊ ಬ್ರಾಂಕೊದ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿತ್ತು. ವಿಮಾನ ಪತನಗೊಂಡ ಸ್ಥಳದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ರಾಜ್ಯದ ರಾಜಧಾನಿ ರಿಯೊ ಬ್ರಾಂಕೊದ ಮುಖ್ಯ ವಿಮಾನ ನಿಲ್ದಾಣದ ಬಳಿ ವಿಮಾನವು ಪತನಗೊಂಡಿದೆ ಎಂದು ಎಕ್ರೆ ಗವರ್ನರ್ ಗ್ಲಾಡ್ಸನ್ ಕ್ಯಾಮೆಲಿ ಅವರು ತಿಳಿಸಿದ್ದರು.
ಇದನ್ನೂ ಓದಿ : ರಾಜಸ್ಥಾನದಲ್ಲಿ MiG-21 ಯುದ್ಧ ವಿಮಾನ ಪತನ: ಇಬ್ಬರು ಮಹಿಳೆಯರು ಸೇರಿ ಮೂವರು ಸಾವು