ETV Bharat / international

'ಸೋವಿಯತ್ ವಿರುದ್ಧ ಅಫ್ಘಾನ್ ಜಿಹಾದ್​ಗೆ ರಹಸ್ಯ ನೆರವು ನೀಡಿತ್ತು ಯುಎಸ್': ರಹಸ್ಯ ದಾಖಲೆ ಬಹಿರಂಗ - ನ್ಯಾಷನಲ್ ಸೆಕ್ಯುರಿಟಿ ಆರ್ಕೈವ್

ಆಗಿನ ಸೋವಿಯತ್ ರಷ್ಯಾ ವಿರುದ್ಧ ಹೋರಾಡಲು ಅಫ್ಘಾನ್ ಮುಜಾಹಿದೀನ್‌ಗಳಿಗೆ ಯುಎಸ್ ನೆರವು ನೀಡಿದ್ದ ಬಗ್ಗೆ ರಹಸ್ಯ ದಾಖಲೆಗಳು ಈಗ ಬಹಿರಂಗವಾಗಿವೆ.

Documents 'expose' Jimmy Carter's covert support for Afghan jihad in 1979 through Pak

author img

By ETV Bharat Karnataka Team

Published : Dec 17, 2023, 5:50 PM IST

ಕರಾಚಿ: ಸೋವಿಯತ್ ವಿರುದ್ಧ ಹೋರಾಡಲು ಅಗತ್ಯಬಿದ್ದರೆ ಮೂರನೇ ರಾಷ್ಟ್ರವೊಂದರ ಮೂಲಕ ಅಫ್ಘಾನ್ ಮುಜಾಹಿದೀನ್​ಗಳಿಗೆ ಮಿಲಿಟರಿ ನೆರವು ನೀಡಲು ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅನುಮೋದನೆ ನೀಡಿದ್ದರು ಎಂಬುದನ್ನು ಹೊಸದಾಗಿ ಬಹಿರಂಗಗೊಂಡ ದಾಖಲೆಗಳು ತೋರಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಾಷಿಂಗ್ಟನ್ ಮೂಲದ ನ್ಯಾಷನಲ್ ಸೆಕ್ಯುರಿಟಿ ಆರ್ಕೈವ್ ಬಿಡುಗಡೆ ಮಾಡಿದ ರಹಸ್ಯ ದಾಖಲೆಗಳನ್ನು ಉಲ್ಲೇಖಿಸಿ ಸೆನೆಟರ್ ಮುಷಾಹಿದ್ ಹುಸೇನ್ ಸೈಯದ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಈ ಮಾಹಿತಿ ಬೆಳಕಿಗೆ ಬಂದಿವೆ ಎಂದು ಪಾಕಿಸ್ತಾನದ ದಿ ನ್ಯೂಸ್ ಮಾಧ್ಯಮ ವರದಿ ಮಾಡಿದೆ.

"ವಾಷಿಂಗ್ಟನ್ ಮೂಲದ ನ್ಯಾಷನಲ್ ಸೆಕ್ಯುರಿಟಿ ಆರ್ಕೈವ್ ನಿನ್ನೆ 42 ವರ್ಷಗಳ ನಂತರ ಡಿಕ್ಲಾಸಿಫೈ (ರಹಸ್ಯಮುಕ್ತಗೊಳಿಸುವುದು) ಮಾಡಿ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ, ಅಧ್ಯಕ್ಷ ಕಾರ್ಟರ್ ಅವರ ಈ ಅತ್ಯಂತ ಮಹತ್ವದ ನಿರ್ಧಾರವು 1979 ರಲ್ಲಿ ಪಾಕಿಸ್ತಾನದ ಮೂಲಕ ಸಿಐಎ ಅನುದಾನಿತ 'ಅಫ್ಘಾನ್ ಜಿಹಾದ್' ಗೆ ಕಾರಣವಾಗಿತ್ತು. ಇದರಲ್ಲಿ ಯುಎಸ್ 2.1 ಬಿಲಿಯನ್ ಡಾಲರ್ ಮತ್ತು ಸೌದಿ ಅರೇಬಿಯಾ 2.1 ಬಿಲಿಯನ್ ಡಾಲರ್ ನೀಡಿದ್ದವು ಎಂದು ಹೇಳಲಾಗಿದೆ.

ತಾವು ತಮ್ಮ ಟ್ವೀಟ್​ನಲ್ಲಿ ನೀಡಿದ ಅಂಕಿಅಂಶಗಳು ಸಿಐಎ ನಡೆಸಿದ 10 ವರ್ಷಗಳ ಸುದೀರ್ಘ ಕಾರ್ಯಾಚರಣೆಯನ್ನು ಆಧರಿಸಿವೆ ಎಂದು ವಿವರಿಸಿದ ಸಯ್ಯದ್, "ಇದು ಎರಡನೇ ಮಹಾಯುದ್ಧದ ನಂತರ ಸಿಐಎ ನಡೆಸಿದ ಅತಿದೊಡ್ಡ ರಹಸ್ಯ ಕಾರ್ಯಾಚರಣೆಯಾಗಿದೆ. ಹತ್ತು ವರ್ಷಗಳಲ್ಲಿ ನೂರಾರು ಅಫ್ಘಾನ್ ಮುಜಾಹಿದೀನ್​ಗಳನ್ನು ಹೋರಾಟಕ್ಕಿಳಿಸಲು ಅಮೆರಿಕ 2.1 ಬಿಲಿಯನ್ ಡಾಲರ್ ಮತ್ತು ಸೌದಿ ಅರೇಬಿಯಾ ಕೂಡ ಅಷ್ಟೇ ಮೊತ್ತದ ಹಣವನ್ನು ಖರ್ಚು ಮಾಡಿದ್ದವು ಮತ್ತು ಇತರ ರಾಷ್ಟ್ರಗಳು ಕೂಡ ಹಣ ನೀಡಿದ್ದವು ಎಂದು ನನಗೆ ಖಾತ್ರಿಯಿದೆ." ಎಂದು ಹೇಳಿದ್ದಾರೆ.

ಇರಾನ್ ಮತ್ತು ಅಫ್ಘಾನಿಸ್ತಾನದ ಬಗ್ಗೆ ಡಿಸೆಂಬರ್ 28, 1979 ರಂದು ನಡೆದ ಸಭೆಯ ಸಾರಾಂಶಕ್ಕೆ ಲಗತ್ತಿಸಲಾದ ಕಾರ್ಟರ್ ಸಹಿ ಮಾಡಿದ ಮೂಲ ಅಧ್ಯಕ್ಷೀಯ ಟಿಪ್ಪಣಿಯು ಸೋವಿಯತ್ ಆಕ್ರಮಣದ ವಿರುದ್ಧ ಅಫ್ಘಾನ್ ಪಡೆಗಳಿಗೆ ಮಾರಕ ಮಿಲಿಟರಿ ಸಹಾಯದ ರೂಪದಲ್ಲಿ ರಹಸ್ಯ ಕ್ರಮಕ್ಕೆ ಅಧಿಕಾರ ನೀಡುವ ಬಗ್ಗೆ ಉಲ್ಲೇಖ ಹೊಂದಿದೆ.

ಡಿಸೆಂಬರ್ 14 ರಂದು ತಾನು ಪ್ರಕಟಿಸಿದ ದಾಖಲೆಗಳು "ಜಿಮ್ಮಿ ಕಾರ್ಟರ್ ಅವರ ಅಧ್ಯಕ್ಷತ್ವದ ಬಗ್ಗೆ ಪ್ರಮುಖ ಪ್ರಾಥಮಿಕ ದಾಖಲೆಗಳ ಸಂಗ್ರಹ" ಎಂದು ನ್ಯಾಷನಲ್ ಸೆಕ್ಯುರಿಟಿ ಆರ್ಕೈವ್ ಹೇಳಿದೆ. 'ಕಾರ್ಟರ್ ವರ್ಷಗಳಲ್ಲಿ ಯುಎಸ್ ವಿದೇಶಾಂಗ ನೀತಿ, 1977-1981: ಅಧ್ಯಕ್ಷರಿಗೆ ಉನ್ನತ ಮಟ್ಟದ ಮೆಮೋಗಳು' ('US Foreign Policy in the Carter Years, 1977-1981: Highest-Level Memos to the President') ಎಂಬ ಶೀರ್ಷಿಕೆಯ ಈ ಸಂಗ್ರಹವು ಕಾರ್ಟರ್ ಆಡಳಿತಾವಧಿಯ 2,500 ಕ್ಕೂ ಹೆಚ್ಚು ಸಂವಹನ ಮತ್ತು ನೀತಿ ನಿರೂಪಣೆಯ ದಾಖಲೆಗಳನ್ನು ಹೊಂದಿದೆ. (IANS)

ಇದನ್ನೂ ಓದಿ : ಅಕ್ರಮ ವಲಸಿಗರಿಂದ ಯುರೋಪಿಯನ್ ದೇಶಗಳ ವಿನಾಶ; ಯುಕೆ ಪ್ರಧಾನಿ ಸುನಕ್ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.