ETV Bharat / international

ಆಗಸದಲ್ಲಿ ಪ್ರಯಾಣಿಕನ ಆಟಾಟೋಪ: ಗಗನಸಖಿಗೆ ಇರಿತ, ಎಮೆರ್ಜೆನ್ಸಿ ಡೋರ್​ ತೆಗೆಯಲು ಯತ್ನ! - ಅಪಾಯಕಾರಿ ಆಯುಧವನ್ನು ಬಳಸಿದ ಆರೋಪ

ಪ್ರಯಾಣಿಕನೊಬ್ಬ ವಿಮಾನದ ತುರ್ತು ಬಾಗಿಲು ತೆಗೆಯಲು ಯತ್ನಿಸಿದ್ದು, ಇದನ್ನು ಪ್ರಶ್ನಿಸಿದ ಗಗನಸಖಿಯ ಕತ್ತಿಗೆ ಚಮಚದಿಂದ ಇರಿದು ಗಾಯಗೊಳಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ.

allegedly attempting to open plane emergency door  stab flight attendant  US man arrested  plane emergency door  ಆಗಸದಲ್ಲಿ ಪ್ರಯಾಣಿಕನ ಹೈಡ್ರಾಮಾ  ವಿಮಾನ ಎಮೆರ್ಜೆನ್ಸಿ ಡೊರ್​ ತೆಗೆಯುವ ಯತ್ನ  ಅಮೆರಿಕಾದಲ್ಲಿ ಭಾರೀ ದುರಂತ  ವಿಮಾನದ ತುರ್ತು ಬಾಗಿಲು ತೆಗೆಯಲು ಯತ್ನ  ಗಗನಸಖಿ ಕತ್ತಿಗೆ ಇರಿದ ಘಟನೆ  ಯುನೈಟೆಡ್ ಏರ್‌ಲೈನ್ಸ್ ವಿಮಾನದ ತುರ್ತು ಬಾಗಿಲು  ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನ  ಅಪಾಯಕಾರಿ ಆಯುಧವನ್ನು ಬಳಸಿದ ಆರೋಪ  ಲಾಸ್ ಏಂಜಲೀಸ್ ನಿಂದ ಬೋಸ್ಟನ್​ಗೆ ವಿಮಾನನಲ್ಲಿ ಪ್ರಯಾಣ
ಆಗಸದಲ್ಲಿ ಪ್ರಯಾಣಿಕನ ಹೈಡ್ರಾಮಾ
author img

By

Published : Mar 7, 2023, 8:25 AM IST

ವಾಷಿಂಗ್ಟನ್: ವಿಮಾನ ಹಾರಾಟದ ವೇಳೆ ಗಂಭೀರ ಸ್ವರೂಪದ ದುರ್ವರ್ತನೆ ತೋರಿದ 33 ವರ್ಷದ ಪುರುಷ ಪ್ರಯಾಣಿಕನನ್ನು ಅಮೆರಿಕದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಯುನೈಟೆಡ್ ಏರ್‌ಲೈನ್ಸ್ ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಈ ದುಷ್ಕೃತ್ಯಕ್ಕೆ ತಡೆಯೊಡ್ಡಲು ಧಾವಿಸಿದ ಗಗನಸಖಿಯ ಕತ್ತಿಗೂ ಇರಿದಿದ್ದಾನೆ. ಲಾಸ್ ಏಂಜಲೀಸ್ ಮತ್ತು ಬೋಸ್ಟನ್ ನಡುವೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಘಟನೆ ನಡೆದಿದೆ.

ಆರೋಪಿ ಲಿಯೋಮಿನ್‌ಸ್ಟರ್‌ ಮೂಲದವ. ಹೆಸರು ಫ್ರಾನ್ಸಿಸ್ಕೊ ​​ಸೆವೆರೊ ಟೊರೆಸ್. ವಿಮಾನ ಹಾರಾಟಕ್ಕೆ ಅಡ್ಡಿಪಡಿಸಿದ ಮತ್ತು ವಿಮಾನ ಸಿಬ್ಬಂದಿ ಮತ್ತು ಪರಿಚಾರಕರ ಮೇಲೆ ಹಲ್ಲೆ ನಡೆಸಿದ ಆರೋಪವನ್ನು ಈತ ಎದುರಿಸುತ್ತಿದ್ದಾನೆ. ಭಾನುವಾರ ಸಂಜೆ ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೊರೆಸ್​ನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿ ಟೊರೆಸ್ ಲಾಸ್ ಏಂಜಲೀಸ್‌ನಿಂದ ಬೋಸ್ಟನ್​ಗೆ ಪ್ರಯಾಣಿಸುತ್ತಿದ್ದ. ಲ್ಯಾಂಡಿಂಗ್‌ಗೆ ಸುಮಾರು 45 ನಿಮಿಷಕ್ಕೆ ಮೊದಲು ಸಿಬ್ಬಂದಿ ಕಾಕ್‌ಪಿಟ್‌ನಲ್ಲಿ ಮೊದಲ ದರ್ಜೆ ಮತ್ತು ಕೋಚ್ ವಿಭಾಗಗಳ ನಡುವಿನ ಸ್ಟಾರ್‌ಬೋರ್ಡ್ ಬದಿಯ ಬಾಗಿಲು ಅನ್‌ಲಾಕ್ ಆಗಿದೆ ಎಂಬ ಎಚ್ಚರಿಕೆ ಕರೆ ಸ್ವೀಕರಿಸಿದ್ದಾರೆ. ಕೂಡಲೇ ಬಾಗಿಲ ಬಳಿ ಗಗನಸಖಿ ತೆರಳಿ ಪರಿಶೀಲಿಸಿದ್ದಾರೆ. ಆಗ ಗಗನಸಖಿ ಬಾಗಿಲಿನ ಹ್ಯಾಂಡಲ್ ಅನ್​ಲಾಕ್​ ಆಗಿರುವುದು ಗಮನಿಸಿದ್ದಾರೆ. ಟೊರೆಸ್​ ಎಂಬ ಪ್ರಯಾಣಿಕ ಬಾಗಿಲ ಬಳಿ ಇದ್ದು, ತೆರೆಯಲು ಪ್ರಯತ್ನಿಸುತ್ತಿದ್ದ ಎಂದು ಗಗನಸಖಿ ಫ್ಲೈಟ್‌ ಕ್ಯಾಪ್ಟನ್​ಗೆ ಮಾಹಿತಿ ನೀಡಿದ್ದಾರೆ.

ಅಮೆರಿಕ ನ್ಯಾಯಾಂಗ ಇಲಾಖೆ ಹೇಳಿಕೆಯ ಪ್ರಕಾರ, ಬಾಗಿಲು ಅನ್​ಲಾಕ್​ ಮಾಡಿರುವ ಬಗ್ಗೆ ಫ್ಲೈಟ್ ಸಿಬ್ಬಂದಿ ಟೊರೆಸ್‌ ಜತೆ ಮಾತನಾಡಿದ್ದಾರೆ. ಇಲ್ಲಿ ಕ್ಯಾಮರಾ ಇದೆಯೇ ಎಂದು ಪ್ರಶ್ನಿಸಿ, ಅದಕ್ಕೆ ನಾನು ಈ ರೀತಿ ಮಾಡುತ್ತಿದ್ದೇನೆ ಎಂದು ಟೊರೆಸ್ ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ಗಗನಸಖಿ ಕ್ಯಾಪ್ಟನ್​ಗೆ ವಿಮಾನವನ್ನು ಆದಷ್ಟು ಬೇಗ ಲ್ಯಾಂಡಿಂಗ್​ ಮಾಡಿ ಎಂದು ತುರ್ತು ಸಂದೇಶ ರವಾನಿಸಿದ್ದರು. ಇದೇ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಟೊರೆಸ್ ಮುರಿದ ಚಮಚದಿಂದ ಗಗನಸಖಿಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾನೆ. ಗಗನಸಖಿಯ ಗಂಟಲಿಗೆ ಗಾಯವಾಗಿದೆ.

ಇದಾದ ಬಳಿಕ ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ವಿಮಾನವನ್ನು ಬೋಸ್ಟನ್‌ನಲ್ಲಿ ಇಳಿಸಿದ ನಂತರ ಟೊರೆಸ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಬಂಧಿಸಿದ್ದಾರೆ. ಮುರಿದ ಚಮಚದಿಂದ ಗಗನಸಖಿ ಮೇಲೆ ಮೂರು ಬಾರಿ ಟೊರೆಸ್​ ದಾಳಿ ಮಾಡಿದ್ದಾನೆ. ಇದಕ್ಕೂ ಮುನ್ನ ತುರ್ತು ಬಾಗಿಲಿನ ಹ್ಯಾಂಡಲ್ ಸ್ಥಳ ಇರುವುದರ ಬಗ್ಗೆ ಟೊರೆಸ್ ಸಹ-ಪ್ರಯಾಣಿಕನನ್ನು ಕೇಳಿದ್ದ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ. ಒಂದು ವೇಳೆ ಟೊರೆಸ್​ ಮೇಲಿರುವ ಆರೋಪ ಸಾಬೀತಾದ್ರೆ ಪ್ರಕರಣದಲ್ಲಿ ಆತನಿಗೆ 5 ವರ್ಷಗಳ ಶಿಕ್ಷೆ ಮತ್ತು 2.5 ಮಿಲಿಯನ್ ಯುಎಸ್ ಡಾಲರ್​ ದಂಡ ವಿಧಿಸಬಹುದು.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ; ವಿಮಾನಯಾನದಲ್ಲಿ ಮತ್ತೊಂದು ದುರ್ವರ್ತನೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.