ನ್ಯೂಯಾರ್ಕ್(ಅಮೆರಿಕ): ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಎಂಬಾತನ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ವಿರುದ್ಧ ಅಮೆರಿಕ ಕಾನೂನು ಕ್ರಮ ಕೈಗೊಂಡಿದೆ. ನ್ಯೂಯಾರ್ಕ್‌ನಲ್ಲಿ ಭಾರತೀಯ ಮೂಲದ ಅಮೆರಿಕನ್ ಪ್ರಜೆ ಪನ್ನು ಹತ್ಯೆಗೆ ಭಾರತೀಯನೊಬ್ಬ ಸಂಚು ರೂಪಿಸಿದ್ದಾನೆ ಎಂದು ನ್ಯಾಯಾಂಗ ಇಲಾಖೆ ಆರೋಪಿಸಿದೆ. ಈ ವ್ಯಕ್ತಿಯ ಹೆಸರು ನಿಖಿಲ್ ಗುಪ್ತಾ ಅಲಿಯಾಸ್ ನಿಕ್. ಈತನನ್ನು ಜೆಕ್ ಗಣರಾಜ್ಯದಲ್ಲಿ ಬಂಧಿಸಲಾಗಿದೆ. ನಿಖಿಲ್ ಗುಪ್ತಾ ಅವರು ಪನ್ನು ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಆರೋಪಿಸಿದೆ.
ಈ ಕುರಿತು ನ್ಯೂಯಾರ್ಕ್‌ನಲ್ಲಿರುವ ಯುಎಸ್ ಅಟಾರ್ನಿ ಡೇಮಿಯನ್ ವಿಲಿಯಮ್ಸ್ ಹೇಳಿಕೆ ಬಿಡುಗಡೆಗೊಳಿಸಿದ್ದು, "ಆರೋಪಿಯು ಭಾರತದಿಂದ ನ್ಯೂಯಾರ್ಕ್ ನಗರಕ್ಕೆ ಪ್ರಯಾಣಿಸುತ್ತಿದ್ದ ಭಾರತೀಯ-ಅಮೆರಿಕನ್ ಪ್ರಜೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಹತ್ಯೆಗೊಳಗಾದ ವ್ಯಕ್ತಿ ಸಿಖ್ಖರಿಗೆ ಪ್ರತ್ಯೇಕ ಖಲಿಸ್ಥಾನ ರಚನೆಗಾಗಿ ಸಾರ್ವಜನಿಕವಾಗಿ ಪ್ರತಿಪಾದಿಸಿದ್ದಾರೆ" ಎಂದು ತಿಳಿಸಿದರು.
ಹೇಳಿಕೆಯಲ್ಲಿ ಗುರುಪತ್ವಂತ್ ಸಿಂಗ್ ಪನ್ನು ಅವರ ಹೆಸರನ್ನು ಉಲ್ಲೇಖಿಸಿಲ್ಲ. ಹೆಸರು ಬಹಿರಂಗಪಡಿಸುವಿಕೆಯಿಂದ ಈ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ನ್ಯಾಯಾಂಗ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ್ದು, ''ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರು, ನಿಖಿಲ್ ಗುಪ್ತಾ ಹತ್ಯೆಯ ಸಂಚುಗಾಗಿ ನೇಮಕವಾಗುವ ಮುನ್ನ, ಮಾದಕ ವಸ್ತುಗಳು ಮತ್ತು ಶಸ್ತ್ರಾಸ್ತ್ರಗಳ ಅಂತರರಾಷ್ಟ್ರೀಯ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ಪನ್ನು ಎಂಬವರು ಸಿಖ್ ಪ್ರತ್ಯೇಕತಾವಾದಿ ಖಲಿಸ್ತಾನಿ ಚಳುವಳಿಯ ಪ್ರಮುಖ ಸದಸ್ಯರಾಗಿದ್ದಾರೆ. ಭಾರತದಿಂದ ಪಂಜಾಬ್ ಅನ್ನು ಪ್ರತ್ಯೇಕಿಸಬೇಕೆಂದು ಅವರು ಪ್ರತಿಪಾದಿಸುತ್ತಾರೆ. ಈತ ಭಾರತದಲ್ಲಿಯೂ ಗೊತ್ತುಪಡಿಸಿದ ಭಯೋತ್ಪಾದಕ'' ಎಂದು ತಿಳಿಸಿದೆ.
ಯಾರು ನಿಖಿಲ್ ಗುಪ್ತಾ?: 52 ವರ್ಷದ ನಿಖಿಲ್ ಗುಪ್ತಾ ಭಾರತೀಯ ಪ್ರಜೆಯಾಗಿದ್ದು, ಯುನೈಟೆಡ್ ಸ್ಟೇಟ್ಸ್ ಮತ್ತು ಜೆಕ್ ರಿಪಬ್ಲಿಕ್ ನಡುವಿನ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಈ ವರ್ಷ ಜೂನ್ 30ರಂದು ಜೆಕ್ ರಿಪಬ್ಲಿಕ್ ಅಧಿಕಾರಿಗಳು ಗುಪ್ತಾ ಅವರನ್ನು ಬಂಧಿಸಿದ್ದರು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಮಾಹಿತಿ ಒದಗಿಸಿದೆ.
''ಆಪಾದಿತ ಭಾರತೀಯ ಸರ್ಕಾರಿ ಉದ್ಯೋಗಿ. ದಾಖಲೆಗಳಲ್ಲಿ ಈತನ ಹೆಸರಿಲ್ಲ. ಆದರೆ, CC-1 ಎಂದು ಉಲ್ಲೇಖ ಮಾಡಲಾಗಿದೆ. ಗುರ್ಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಲು ಸಿಸಿ-1 ಭಾರತದಲ್ಲಿ ಮತ್ತು ಇತರೆಡೆಗಳಲ್ಲಿ ನಿಖಿಲ್ ಗುಪ್ತಾ ಸೇರಿದಂತೆ ಇತರರೊಂದಿಗೆ ಕೆಲಸ ಮಾಡಿದ್ದಾರೆ" ಎಂದು ವಿವರಿಸಲಾಗಿದೆ.
ನಿಜ್ಜರ್ ಹತ್ಯೆ ಪ್ರಕರಣದ ಪ್ರಸ್ತಾಪ: ಕೆನಡಾದಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯನ್ನು ದಾಖಲೆಯಲ್ಲಿ ಉಲ್ಲೇಖಿಸುತ್ತದೆ. ನಿಖಿಲ್ ಗುಪ್ತಾ, ಆಪಾದಿತ ಹಿಟ್‌ಮ್ಯಾನ್ (ಒಬ್ಬ ರಹಸ್ಯ ಅಧಿಕಾರಿ) ಸಂಚಿಗೆ ನಿಜ್ಜರ್ ಕೂಡ ಗುರಿಯಾಗಿದ್ದಾನೆ. ನಿಖಿಲ್ ಗುಪ್ತಾ ಜೂನ್ 30ರಂದು ಅಥವಾ ಅದರ ಆಸುಪಾಸಿನಲ್ಲಿ ಭಾರತದಿಂದ ಜೆಕ್ ಗಣರಾಜ್ಯಕ್ಕೆ ಪ್ರಯಾಣಿಸಿದ್ದರು. ಯುಎಸ್ ಕೋರಿಕೆಯ ಮೇರೆಗೆ ಆರೋಪಿ ನಿಖಿಲ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯ ಹಸ್ತಾಂತರ ಬಾಕಿ ಉಳಿದಿದೆ ಎಂದು ಅಮೆರಿಕ ನ್ಯಾಯಾಂಗ ಇಲಾಖೆ ಹೇಳಿದೆ.
ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ಮಾಡುತ್ತಿರುವ ಆರೋಪ ನಿರಾಧಾರ. ಈ ಆರೋಪಗಳನ್ನು ಭಾರತ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಅಡುಗೆ ಎಣ್ಣೆ ಬಳಸಿ ವಿಮಾನ ಹಾರಾಟ! ಇತಿಹಾಸ ಸೃಷ್ಟಿಸಿದ ವರ್ಜಿನ್ ಅಟ್ಲಾಂಟಿಕ್ ಏರ್ಲೈನ್ಸ್