ETV Bharat / international

ಇಸ್ರೇಲ್‌ಗೆ 14.3 ಶತಕೋಟಿ ಡಾಲರ್ ನೆರವು ನೀಡಲು ಮುಂದಾದ ಅಮೆರಿಕ - ಇಸ್ರೇಲ್ ಮತ್ತು ಹಮಾಸ್ ಯುದ್ಧ

ಹಮಾಸ್‌ನೊಂದಿಗೆ ನಡೆಯುತ್ತಿರುವ ಯುದ್ಧದ ಮಧ್ಯೆ ಇಸ್ರೇಲ್‌ಗೆ 14.3 ಶತಕೋಟಿ ನೆರವು ನೀಡುವ ಮಸೂದೆಯನ್ನು ಅಮೆರಿಕ ಸಂಸತ್ತು ಗುರುವಾರ ಅಂಗೀಕರಿಸಿತು. ಈ ಕ್ರಮವು ಡೆಮಾಕ್ರಟಿಕ್ ಶಾಸಕರೊಂದಿಗೆ ಘರ್ಷಣೆಗೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ.

US House
US ಹೌಸ್
author img

By ETV Bharat Karnataka Team

Published : Nov 3, 2023, 12:50 PM IST

Updated : Nov 3, 2023, 1:06 PM IST

ವಾಷಿಂಗ್ಟನ್: ಗಾಜಾದಲ್ಲಿ ಹಮಾಸ್ ಉಗ್ರಗಾಮಿ ಗುಂಪಿನೊಂದಿಗೆ ನಡೆಸುತ್ತಿರುವ ಯುದ್ಧದ ನಡುವೆಯೇ ಇಸ್ರೇಲ್‌ಗೆ 14.3 ಶತಕೋಟಿ ಡಾಲರ್ ನೆರವು ನೀಡುವ ಮಹತ್ವದ ಮಸೂದೆಯನ್ನು ರಿಪಬ್ಲಿಕನ್ ಬಹುಮತದ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿತು. ಈ ಮಸೂದೆಯನ್ನು ಗುರುವಾರ 226 ರಿಂದ 196 ಮತಗಳಿಂದ ಅಂಗೀಕರಿಸಲಾಯಿತು. ಇಬ್ಬರು ರಿಪಬ್ಲಿಕನ್ ಸದಸ್ಯರು​ ಮಸೂದೆ ವಿರೋಧಿಸಿದ್ದು, 12 ಡೆಮಾಕ್ರಟಿಕ್​ ಸದಸ್ಯರು ಬೆಂಬಲಿಸಿದರು ಎಂದು ಅಲ್ಲಿನ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇಸ್ರೇಲ್‌ಗೆ ನೆರವು ನೀಡುವ ಕುರಿತು ಅಮೆರಿಕದಲ್ಲಿ ಗದ್ದಲ ಎದ್ದಿದೆ. ಇಸ್ರೇಲ್‌ಗೆ ಸಹಾಯ ಮಾಡಲು ಅಮೆರಿಕದ ಹೌಸ್ ಆಫ್ ಕಾಮನ್ಸ್‌ನಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತಾದರೂ ಸೆನೆಟ್‌ನಲ್ಲಿ ಈ ಮಸೂದೆಯ ವಿರುದ್ಧ ಸಾಕಷ್ಟು ವಾಗ್ದಾಳಿಗಳು ನಡೆದವು. ಹೀಗಾಗಿ, ಈ ಕ್ರಮವು ಡೆಮಾಕ್ರಟಿಕ್ ಶಾಸಕರೊಂದಿಗೆ ಘರ್ಷಣೆಗೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇತ್ತೀಚೆಗೆ, ಮೈಕ್ ಜಾನ್ಸನ್ ಅವರನ್ನು ಸೆನೆಟ್​ ಸ್ಪೀಕರ್ ಆಗಿ ನೇಮಿಸಲಾಗಿತ್ತು.

ಮಸೂದೆಗೆ ಡೆಮಾಕ್ರಾಟ್‌ಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಏಕೆಂದರೆ, ಉಕ್ರೇನ್‌ಗೆ ಸಹಾಯ ಮಾಡುವ ಬಗ್ಗೆ ಅದರಲ್ಲಿ ಏನನ್ನೂ ಹೇಳಲಾಗಿಲ್ಲ. ರಷ್ಯಾದ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಹೆಚ್ಚುವರಿ ಭದ್ರತಾ ನೆರವಿನೊಂದಿಗೆ ಇಸ್ರೇಲ್‌ಗೆ ಬೆಂಬಲ ನೀಡಬೇಕೆಂದು ಸದಸ್ಯರು ಕರೆ ನೀಡಿದ್ದಾರೆ. ವರದಿಗಳ ಪ್ರಕಾರ, ಸೆನೆಟ್‌ನಲ್ಲಿರುವ ಅನೇಕ ರಿಪಬ್ಲಿಕನ್‌ಗಳು ಉಕ್ರೇನ್‌ಗೆ ಹೆಚ್ಚಿನ ನೆರವು ನೀಡುವುದನ್ನು ವಿರೋಧಿಸುತ್ತಿದ್ದಾರೆ. ಇದರಿಂದಾಗಿ ಎರಡೂ ಪಕ್ಷಗಳ ಸಂಸದರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೆನೆಟ್ ಬಹುಮತದ ನಾಯಕ ಚಕ್ ಶುಮರ್, ಈ ಮಸೂದೆಯು ದೋಷಪೂರಿತ ಪ್ರಸ್ತಾಪ ಎಂದು ಕರೆದಿದ್ದಾರೆ. ಜೊತೆಗೆ ಸೆನೆಟ್ ಅದನ್ನು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧ: ಮಾನವೀಯ ವಿರಾಮಕ್ಕೆ ಕರೆ ನೀಡಿದ ಜೋ ಬೈಡನ್

ಇಸ್ರೇಲ್-ಹಮಾಸ್ ಯುದ್ಧ: ಇನ್ನೊಂದೆಡೆ, ಇಸ್ರೇಲ್ ಮತ್ತು ಹಮಾಸ್ ನಡುವೆ ಕಳೆದ 27 ದಿನಗಳಿಂದ ಯುದ್ಧ ನಡೆಯುತ್ತಿದ್ದು, ಇದು ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಕಂಡುಬರುತ್ತಿದೆ. ಇಸ್ರೇಲ್​ ಸೇನೆಯು ಹಮಾಸ್ ಹೋರಾಟಗಾರರನ್ನು ನಿರ್ಮೂಲನೆ ಮಾಡಲು ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದೆ. ಇಸ್ರೇಲ್​ ಸೇನೆಯು ಗಾಜಾದ ಎಲ್ಲಾ ಕಡೆಯಿಂದ ಹಮಾಸ್ ಅನ್ನು ಸುತ್ತುವರೆದಿದೆ. ವೈಮಾನಿಕ ದಾಳಿಯ ಜೊತೆಗೆ ಸೇನೆಯು ಭೂ ದಾಳಿಯನ್ನು ಸಹ ಪ್ರಾರಂಭಿಸಿದೆ. ಇಸ್ರೇಲಿ ಸೇನೆಯ ದಾಳಿಯಲ್ಲಿ ಇದುವರೆಗೆ ಸಾವಿರಾರು ಪ್ಯಾಲೆಸ್ಟೈನ್​ ನಾಗರಿಕರು ಸಾವನ್ನಪ್ಪಿದ್ದಾರೆ. ಹಾಗೆಯೇ ಇಸ್ರೇಲ್‌ನಲ್ಲಿ ಸಹ ಸುಮಾರು 1400 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹತ್ತು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಮತ್ತು ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ಈ ಮಧ್ಯೆ ಪ್ಯಾಲೆಸ್ಟೈನ್​ ಜನಸಾಮಾನ್ಯರು ಕೆಟ್ಟ ಪರಿಣಾಮ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: Israel - Palestine war : ಇದುವರೆಗೆ 8,525 ಪ್ಯಾಲೇಸ್ಟೈನಿಯನ್​ಗಳ ಸಾವು... ಗಾಜಾದಿಂದ ಈಜಿಪ್ಟ್‌ಗೆ ಬಂದ ವಿದೇಶಿಗರು

Last Updated : Nov 3, 2023, 1:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.