ವಾಷಿಂಗ್ಟನ್ (ಅಮೆರಿಕ) : ದೇಶದಲ್ಲಿ ಇನ್ನೂ ಮಹಾಮಾರಿ ಕೊರೊನಾ ಆರ್ಭಟ ಕಡಿಮೆಯಾಗಿಲ್ಲ. ಈ ಬೆನ್ನಲ್ಲೇ ಅಮೆರಿಕದ ಆರೋಗ್ಯ ಸಂಸ್ಥೆಯೊಂದು ಹೊಸ ಕೋವಿಡ್ ವೈರಸ್ ಬೂಸ್ಟರ್ ಡೋಸ್ಗೆ ಅನುಮೋದನೆ ನೀಡಿದೆ. 6 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬರೂ ನವೀಕರಿಸಿದ ಈ COVID-19 ಬೂಸ್ಟರ್ ಅನ್ನು ಪಡೆಯಬಹುದು ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಶಿಫಾರಸು ಮಾಡಿದೆ.
ಸಿಡಿಸಿ ಹಾಗೂ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ತೆಗೆದುಕೊಂಡ ಬೂಸ್ಟರ್ ಡೋಸ್ ನೀಡುವ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಐತಿಹಾಸಿಕ ಮೈಲಿಗಲ್ಲು ಎಂದು ಕರೆದಿದ್ದಾರೆ. ಜೊತೆಗೆ, ನಾವು ಆಡಳಿತವನ್ನು ವಹಿಸಿಕೊಂಡ ಬಳಿಕ ಕೋವಿಡ್ - 19 ನಿರ್ವಹಣೆಯಲ್ಲಿ ಪ್ರಮುಖ ಕ್ರಮಗಳನ್ನು ಕೈಗೊಳ್ಳುವ ಮೂಲಕ ಐತಿಹಾಸಿಕ ಪ್ರಗತಿಯನ್ನು ಸಾಧಿಸಿದ್ದೇವೆ. ಆಹಾರ, ಔಷಧ ವಿತರಣೆ ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಲಾಗಿದೆ. ಇದೀಗ, ಶರತ್ಕಾಲ ಮತ್ತು ಚಳಿಗಾಲದಲ್ಲಿ ಅನಾರೋಗ್ಯದಿಂದ ಬಳಲುವವರ ಸಂಖ್ಯೆ ಕಡಿಮೆ ಮಾಡಲು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ನಿರ್ದೇಶಕರು ಬೂಸ್ಟರ್ ಪಡೆಯಬೇಕು ಎಂದು ಶಿಫಾರಸು ಮಾಡಿದ್ದಾರೆ. ಲಸಿಕೆಯ ಸ್ವತಂತ್ರ ವೈಜ್ಞಾನಿಕ ಪರಿಶೀಲನೆಯ ಬಳಿಕ ಅನುಮೋದನೆ ನೀಡಲಾಗಿದೆ. 6 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಕರು ನವೀಕರಿಸಿದ COVID - 19 ಲಸಿಕೆಯನ್ನು ಪಡೆಯಿರಿ" ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಅಮೆರಿಕದಲ್ಲಿ ಕೋವಿಡ್ ಸೋಂಕು ಏರಿಕೆ ; ಹೊಸ ಲಸಿಕೆಗೆ ಎಫ್‌ಡಿಎ ಅನುಮತಿ
ಕೋವಿಡ್ -19, ಫ್ಲೂ ಮತ್ತು ಆರ್‌ಎಸ್‌ವಿಗೆ (R S V) ಸಂಬಂಧಿಸಿದ ಲಸಿಕೆಗಳು ಈಗ ಲಭ್ಯವಿವೆ. ಎಲ್ಲಾ ಅಮೆರಿಕನ್ನರು ಈ ಹೊಸ ಕೋವಿಡ್ ಬೂಸ್ಟರ್‌ಗಳನ್ನು ಪಡೆಯಬೇಕು. ನಾವು ಶರತ್ಕಾಲ ಮತ್ತು ಚಳಿಗಾಲದ ಋತುಗಳನ್ನು ಪ್ರವೇಶಿಸುತ್ತಿದ್ದಂತೆ ಆರೋಗ್ಯದ ಕಡೆ ಗಮನಹರಿಸಿ, ಸುರಕ್ಷಿತ ಮತ್ತು ಪರಿಣಾಮಕಾರಿ ರೋಗನಿರೋಧಕಗಳನ್ನು ಪಡೆದುಕೊಳ್ಳಬೇಕು. COVID 19 ವಿರುದ್ಧ ವ್ಯಾಕ್ಸಿನೇಷನ್ ತೆಗೆದುಕೊಳ್ಳುವುದರಿಂದ ಆಸ್ಪತ್ರೆಗೆ ದಾಖಲಾಗುವುದು, ದೀರ್ಘಾವಧಿಯ ಆರೋಗ್ಯ ಪರಿಣಾಮಗಳು ಮತ್ತು ಮರಣವನ್ನು ತಪ್ಪಿಸಲು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : ಕೋವಿಡ್ ಅಕ್ರಮ ತನಿಖೆಗೆ ಆಯೋಗ ರಚನೆ ಹಿಂದೆ ದುರುದ್ದೇಶವಿದೆ : ಮಾಜಿ ಸಚಿವ ಸುಧಾಕರ್ ಕಿಡಿ
ಇನ್ನು, ಈ ಬೂಸ್ಟರ್ ಡೋಸ್ ಪಡೆಯುವುದರಿಂದ ಪ್ರಸ್ತುತ ಚಲಾವಣೆಯಲ್ಲಿರುವ ರೂಪಾಂತರಗಳ ವಿರುದ್ಧ ಹೆಚ್ಚುವರಿ ರಕ್ಷಣೆ ಒದಗಿಸುವುದಲ್ಲದೇ, ಗಂಭೀರವಾದ ಕಾಯಿಲೆಗಳು ಮತ್ತು ಸಾವಿನಿಂದ ರಕ್ಷಣೆ ನೀಡುತ್ತದೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ. ದೇಶದಲ್ಲಿ ಕೋವಿಡ್ -19 ರೂಪಾಂತರ EG.5 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹೊಸ ರೂಪಾಂತರವು ಒಮಿಕ್ರಾನ್ ಕುಟುಂಬದ XBB ಮರುಸಂಯೋಜಕ ತಳಿಯಿಂದ ಬಂದಿದೆ.
ಇದನ್ನೂ ಓದಿ : ಕೊರೊನಾ ಸಂಬಂಧಿತ ಸರ್ಚ್ ಬ್ಲಾಕ್ ಮಾಡಿದ ಥ್ರೆಡ್ಸ್; ಆರೋಗ್ಯ ತಜ್ಞರಿಂದ ಖಂಡನೆ