ವಾಷಿಂಗ್ಟನ್ (ಅಮೆರಿಕ): ಭಾರತ ಮತ್ತು ಅಮೆರಿಕ ನಡುವಿನ 2+2 ಮಾತುಕತೆ ಮುಂಚಿತವಾಗಿ ಅಂತಾರಾಷ್ಟ್ರೀಯ ಅರ್ಥಶಾಸ್ತ್ರದ ಯುಎಸ್ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಇಂದು ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಮತ್ತು ನಾಳೆ ಅಂತಾರಾಷ್ಟ್ರೀಯ ಅರ್ಥಶಾಸ್ತ್ರದ ಅಮೆರಿಕಾದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಭಾರತ ಸರ್ಕಾರದೊಂದಿಗೆ ನಡೆಯುತ್ತಿರುವ ಸಮಾಲೋಚನೆಗಳನ್ನು ಮುಂದುವರಿಸಲು ಮತ್ತು ಯುಎಸ್-ಭಾರತದ ಆರ್ಥಿಕ ಸಂಬಂಧ ಹಾಗೂ ಕಾರ್ಯತಂತ್ರದ ಪಾಲುದಾರಿಕೆ ಬಲಗೊಳಿಸಲು ದೆಹಲಿಗೆ ತೆರಳಲಿದ್ದಾರೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಎಮಿಲಿ ಹಾರ್ನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಓದಿ: ರಷ್ಯಾ - ಉಕ್ರೇನ್ ಸಂಧಾನ ಸಭೆ ಬಹುತೇಕ ಯಶಸ್ವಿ .. ಆದಷ್ಟು ಬೇಗ ಝೆಲೆನ್ಸ್ಕಿ-ಪುಟಿನ್ ಭೇಟಿ ಸಾಧ್ಯತೆ!
ಸಮಗ್ರ ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಮತ್ತು ಮುಕ್ತ ಇಂಡೋ - ಪೆಸಿಫಿಕ್ ಅನ್ನು ಉತ್ತೇಜಿಸುವ ಸಹಕಾರವನ್ನು ಭದ್ರಗೊಳಿಸಲು ಸಿಂಗ್ ಭಾರತ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾದ ಅಸಮರ್ಥನೀಯ ಯುದ್ಧದ ಪರಿಣಾಮಗಳ ಬಗ್ಗೆ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಅದರ ಪರಿಣಾಮ ತಗ್ಗಿಸುವ ಬಗ್ಗೆ ಸಿಂಗ್ ಅವರು ಸಮಾಲೋಚಿಸುತ್ತಾರೆ ಎಂದು ಹೇಳಿಕೆ ತಿಳಿಸಿದೆ.
ಬಿಲ್ಡ್ ಬ್ಯಾಕ್ ಬೆಟರ್ ವರ್ಲ್ಡ್ ಮೂಲಕ ಉತ್ತಮ ಗುಣಮಟ್ಟದ ಮೂಲ ಸೌಕರ್ಯ ಉತ್ತೇಜಿಸುವುದು ಮತ್ತು ಇಂಡೋ - ಪೆಸಿಫಿಕ್ ಆರ್ಥಿಕ ಚೌಕಟ್ಟಿನ ಅಭಿವೃದ್ಧಿ ಸೇರಿದಂತೆ ಬೈಡನ್ ಆಡಳಿತದ ಆದ್ಯತೆಗಳನ್ನು ಸಿಂಗ್ ಚರ್ಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಓದಿ: ಕೀವ್‌ನಿಂದ ರಷ್ಯಾ ಸೇನಾ ಕಾರ್ಯಾಚರಣೆ ಕಡಿತ: ಸಂದೇಹ ವ್ಯಕ್ತಪಡಿಸಿದ ಅಮೆರಿಕ
ಭಾರತ ಮತ್ತು ಅಮೆರಿಕ ಏಪ್ರಿಲ್ 11 ರಂದು ವಾಷಿಂಗ್ಟನ್‌ನಲ್ಲಿ 2+2 ಮಾತುಕತೆ ನಡೆಸಲು ನಿರ್ಧರಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಸಹವರ್ತಿಗಳಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರನ್ನು ಭೇಟಿಯಾಗಲಿದ್ದಾರೆ. ಜೈಶಂಕರ್ ಮತ್ತು ರಾಜನಾಥ್ ಸಿಂಗ್ ಅವರು ಬದಿಯಲ್ಲಿ ನಿಗದಿತ ಇತರ ಸಭೆಗಳನ್ನು ಸಹ ಹೊಂದಿರುತ್ತಾರೆ.