ETV Bharat / international

ಅಮೆರಿಕದಲ್ಲಿ ಚೀನಾದಿಂದ ಬರುವವರಿಗೆ ಕೊರೊನಾ ನಿಯಮ ಪಾಲನೆ ಕಡ್ಡಾಯ: ವರದಿ - ಕೋವಿಡ್ 19

ಚೀನಾದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಗಾಗಬೇಕು ಎಂದು ಅಮೆರಿಕದಲ್ಲೂ ನಿಯಮ ಜಾರಿಗೆ ತರಲಾಗಿದೆ ಎಂದು ವರದಿಯಾಗಿದೆ.

ಕೊರೊನಾ
ಕೊರೊನಾ
author img

By

Published : Dec 28, 2022, 7:20 PM IST

ವಾಷಿಂಗ್ಟನ್: ಹೊಸ ಕೋವಿಡ್ ಪ್ರಕರಣಗಳ ಉಲ್ಬಣದ ಮಧ್ಯೆ ಯುನೈಟೆಡ್ ಸ್ಟೇಟ್ಸ್​ನಲ್ಲಿ ಚೀನಾದಿಂದ ಬರುವ ಪ್ರಯಾಣಿಕರ ಮೇಲೆ ಹೊಸ ಕೋವಿಡ್ 19 ಕ್ರಮಗಳನ್ನು ವಿಧಿಸಬಹುದು ಎಂದು ಅಮೆರಿಕದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಚೀನಾದಲ್ಲಿ ಕೋವಿಡ್​-19 ಉಲ್ಬಣವಾಗುತ್ತಿರುವ ಹಿನ್ನೆಲೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಕಳವಳ ಹೆಚ್ಚಾಗಿದೆ. ವೈರಲ್ ಜೀನೋಮಿಕ್ ಅನುಕ್ರಮ ಡೇಟಾ ಸೇರಿದಂತೆ ಪಾರದರ್ಶಕ ಡೇಟಾದ ಕೊರತೆಯನ್ನು PRC ಯಿಂದ ವರದಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಪಾನ್, ಭಾರತ ಮತ್ತು ಮಲೇಷ್ಯಾ ಕಳೆದ 24 ಗಂಟೆಗಳಲ್ಲಿ ಚೀನಾದಿಂದ ಬರುವ ಪ್ರಯಾಣಿಕರ ಮೇಲೆ ಹೊಸ ಕೊರೊನಾ ನಿರ್ಬಂಧಗಳನ್ನು ಹೇರಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿ ಸೋಂಕುಗಳ ಹೆಚ್ಚಳವನ್ನು ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವಿಯಾ ಅವರು ಆರ್‌ಟಿ - ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಶನಿವಾರ ಘೋಷಿಸಿದ್ದಾರೆ. ಚೀನಾ ಸೇರಿದಂತೆ ಐದು ದೇಶಗಳಿಂದ ಬರುವ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗುವುದು.

ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಕಾಂಗ್ ಮತ್ತು ಥಾಯ್ಲೆಂಡ್​ನಿಂದ ಬರುವವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ. ಆಗಮನದ ನಂತರ, ಈ ದೇಶಗಳ ಯಾವುದೇ ಪ್ರಯಾಣಿಕರಿಗೆ ರೋಗಲಕ್ಷಣ ಕಂಡು ಬಂದರೆ ಅಥವಾ ಕೋವಿಡ್ -19 ಸೋಂಕಿಗೆ ಧನಾತ್ಮಕ ಪರೀಕ್ಷೆ ಕಂಡು ಬಂದರೆ, ಅವನು/ಅವಳು ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು ಎಂದು ಆರೋಗ್ಯ ಸಚಿವ ಮಾಂಡವಿಯಾ ಸುದ್ದಿ ಸಂಸ್ಥೆಯೊಂದಿಗಿನ ಸಂವಾದದಲ್ಲಿ ತಿಳಿಸಿದ್ದಾರೆ.

ಜಾಗತಿಕವಾಗಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನಿಸಿರುವ ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವಿಯಾ ಅವರು, ಕೇಂದ್ರ ಮತ್ತು ರಾಜ್ಯಗಳು ಹಿಂದಿನ ಅಲೆಯ ಸಮಯದಲ್ಲಿ ಸಹಕರಿಸಿದಂತೆ ಈ ಬಾರಿಯೂ ಸಹಕರಿಸಬೇಕು ಎಂದು ಶುಕ್ರವಾರ ಹೇಳಿದ್ದಾರೆ. ಚೀನಾದಿಂದ ಬರುವ ಪ್ರಯಾಣಿಕರಿಗೆ ಡಿಸೆಂಬರ್ 30 ರಿಂದ COVID-19 ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ಕೊರೊನಾ ಮುನ್ನೆಚ್ಚರಿಕೆ: ಜೀನೋಮ್​ ಸೀಕ್ವೆನ್ಸಿಂಗ್ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ಈ ಕೋವಿಡ್​ ನಿಯಮಗಳು ಚೀನಾದ ಮುಖ್ಯ ಪ್ರಯಾಣಿಕರಿಗೆ ಮತ್ತು ಕಳೆದ ಏಳು ದಿನಗಳಲ್ಲಿ ಅದನ್ನು ಭೇಟಿ ಮಾಡಿ ಬಂದವರಿಗೆ ಅನ್ವಯಿಸುತ್ತದೆ. ಅವರು ಜಪಾನ್‌ಗೆ ಆಗಮಿಸಿದ ನಂತರ COVID-19 ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರನ್ನು ಏಳು ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತದೆ. ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮಂಗಳವಾರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ನವೆಂಬರ್‌ ತಿಂಗಳಿನಲ್ಲಿ ಚೀನಾದಲ್ಲಿ COVID-19 ಪ್ರಕರಣಗಳು ಏಕಾಏಕಿ ದಾಖಲೆ ಮಟ್ಟದಲ್ಲಿ ಹೆಚ್ಚಾಗಿವೆ. ಸಾಂಕ್ರಾಮಿಕದಿಂದ ಪರಿಸ್ಥಿತಿ ಹದಗೆಟ್ಟ ಕಾರಣ, ಅಧಿಕಾರಿಗಳು ಕೆಲವು ಪ್ರದೇಶಗಳಲ್ಲಿ ಭಾಗಶಃ ಲಾಕ್‌ಡೌನ್‌ಗಳನ್ನು ಮಾಡಿದ್ದಾರೆ. ಅಲ್ಲದೇ ಅದರ ನಿವಾಸಿಗಳನ್ನು ನಿತ್ಯವೂ ಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ. ನಿರ್ದಿಷ್ಟವಾಗಿ, ನವೆಂಬರ್ 24 ರಿಂದ ಬೀಜಿಂಗ್ ಮತ್ತು ಶಾಂಘೈ ಸೇರಿದಂತೆ ಚೀನಾದ ಹಲವಾರು ಪ್ರಮುಖ ನಗರಗಳಲ್ಲಿ ನಿರ್ಬಂಧಿತ ಕ್ರಮಗಳನ್ನು ಬಿಗಿಗೊಳಿಸಲಾಯಿತು.

ಈ ಹಿನ್ನೆಲೆಯಲ್ಲಿ ಕೆಲವು ಚೀನಾದ ನಗರಗಳಾದ ಶಾಂಘೈ, ಬೀಜಿಂಗ್, ಗುವಾಂಗ್‌ಝೌ, ವುಹಾನ್ ಮತ್ತು ಇತರ ಕಡೆ ಸಾಮೂಹಿಕ ಪ್ರತಿಭಟನೆ ನಡೆದಿದೆ. ಗಲಭೆಕೋರರು ತಕ್ಷಣವೇ ಲಾಕ್‌ಡೌನ್‌ ಅನ್ನು ತೆಗೆದುಹಾಕಬೇಕು, ನಿಯಮಿತ ಪಿಸಿಆರ್ ಪರೀಕ್ಷೆ ರದ್ದುಗೊಳಿಸಬೇಕು ಮತ್ತು COVID-19 ನಿರ್ಬಂಧಗಳನ್ನು ಸಡಿಲಿಸಬೇಕು ಎಂದು ಒತ್ತಾಯಿಸಿದರು.

ಕಳೆದ ವಾರ ಒಂದೇ ದಿನದಲ್ಲಿ ಚೀನಾದಲ್ಲಿ ಸುಮಾರು 37 ಮಿಲಿಯನ್ ಜನರು ಕೋವಿಡ್-19 ಸೋಂಕಿಗೆ ಒಳಗಾಗಬಹುದು ಎಂದು ಶುಕ್ರವಾರ ಮಾಧ್ಯಮಗಳು ವರದಿ ಮಾಡಿದ್ದವು. 248 ಮಿಲಿಯನ್ ಅಥವಾ ಸುಮಾರು 18 ಪ್ರತಿಶತದಷ್ಟು ಜನರು ಕೊರೊನಾಗೆ ಒಳಗಾಗಿದ್ದಾರೆ. ಡಿಸೆಂಬರ್ ಮೊದಲ 20 ದಿನಗಳಲ್ಲಿ ಕೊರೊನಾ ವೈರಸ್ ಸೋಂಕಿಗೆ ಜನರು ಒಳಗಾಗುವ ಸಾಧ್ಯತೆಯಿದೆ.

ಬೀಜಿಂಗ್‌ನಲ್ಲಿರುವ ಜಪಾನ್‌ನ ರಾಯಭಾರ ಕಚೇರಿಯು ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಪಾನಿನ ಸಂಸ್ಥೆಗಳ ಅನೇಕ ಉದ್ಯೋಗಿಗಳು COVID-19 ಸೋಂಕಿಗೆ ಒಳಗಾಗುತ್ತಿದ್ದಾರೆ ಮತ್ತು ಮನೆಯಿಂದಲೇ ಕೆಲಸ ಮಾಡಲು ಕೇಳಿಕೊಳ್ಳುತ್ತಿದ್ದಾರೆ ಎಂದು NHK ವರ್ಲ್ಡ್ ವರದಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.