ವಾಷಿಂಗ್ಟನ್(ಅಮೆರಿಕ): ಪೂರ್ವ ಸಿರಿಯಾದಲ್ಲಿ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಬೆಂಬಲಿತ ಗುಂಪುಗಳು ಬಳಸುವ ಸೌಲಭ್ಯದ ವಿರುದ್ಧ ಯುನೈಟೆಡ್ ಸ್ಟೇಟ್ಸ್ (ಯುಎಸ್‌ಎ) ಆತ್ಮರಕ್ಷಣಾ ವೈಮಾನಿಕ ದಾಳಿ ನಡೆಸಿದೆ ಎಂದು ಶ್ವೇತಭವನ ಗುರುವಾರ ಹೇಳಿದೆ.
ಇರಾಕ್ ಮತ್ತು ಸಿರಿಯಾದಲ್ಲಿನ ಅಮೆರಿಕ ಮತ್ತು ಒಕ್ಕೂಟದ ನೆಲೆಗಳ ವಿರುದ್ಧ ಐಆರ್‌ಜಿಸಿ ಮತ್ತು ಸಂಯೋಜಿತ ಗುಂಪುಗಳು ನಡೆಸಿದ ಇತ್ತೀಚಿನ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ವೈಮಾನಿಕ ದಾಳಿ ನಡೆಸಲಾಯಿತು ಎಂದು ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ಒಲಿವಿಯಾ ಡಾಲ್ಟನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. "ಅಧ್ಯಕ್ಷ ಜೋ ಬೈಡನ್ ಅವರು ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಅಂಗಸಂಸ್ಥೆ ಗುಂಪುಗಳು ಬಳಸುವ ಸೌಲಭ್ಯದ ವಿರುದ್ಧ ಪೂರ್ವ ಸಿರಿಯಾದಲ್ಲಿ ಸ್ವಯಂ-ರಕ್ಷಣಾ ವೈಮಾನಿಕ ದಾಳಿ ನಡೆಸಲು ಯುಎಸ್ ಮಿಲಿಟರಿಗೆ ನಿರ್ದೇಶಿಸಿದ್ದಾರೆ" ಎಂದು ಡಾಲ್ಟನ್ ಹೇಳಿದರು.
ಐಸಿಸ್ ಅನ್ನು ಸೋಲಿಸುವ ಕಾರ್ಯಾಚರಣೆಯ ಭಾಗವಾಗಿ ಇರಾಕ್ ಮತ್ತು ಸಿರಿಯಾದಲ್ಲಿರುವ ಯುಎಸ್ ಪಡೆಗಳ ಮೇಲೆ ದಾಳಿ ಮಾಡಲು ನೇರವಾಗಿ ಜವಾಬ್ದಾರರಾಗಿರುವ ಈ ಗುಂಪುಗಳನ್ನು ಕುಗ್ಗಿಸುವ ಗುರಿಯಿಂದ ಯುಎಸ್ ಈ ದಾಳಿ ನಡೆದಿದೆ. ಯುನೈಟೆಡ್ ಸ್ಟೇಟ್ಸ್ ಸರ್ಕಾರವು ನಮ್ಮ ಜನರನ್ನು ಮತ್ತು ನಮ್ಮ ಸೌಲಭ್ಯಗಳನ್ನು ರಕ್ಷಿಸಲು ಮತ್ತಷ್ಟು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧ ಎಂದು ಅವರು ತಿಳಿಸಿದರು.
ಐಆರ್‌ಜಿಸಿ ಮತ್ತು ಸಂಬಂಧಿತ ಗುಂಪುಗಳಿಂದ ಸಿರಿಯಾ ಮತ್ತು ಇರಾಕ್ ಎರಡರಲ್ಲೂ ಯುಎಸ್ ನೆಲೆಗಳ ಮೇಲೆ ನಡೆಯುತ್ತಿರುವ ಬೆದರಿಕೆಗಳು ಮತ್ತು ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಸಂಘರ್ಷ ಹೆಚ್ಚಿಸುವ ಉದ್ದೇಶವನ್ನು ನಾವು ಹೊಂದಿಲ್ಲ. ಆತ್ಮರಕ್ಷಣೆ ಮತ್ತು ಯುಎಸ್ ಸಿಬ್ಬಂದಿಗಳ ರಕ್ಷಣೆ ನಮ್ಮ ಬದ್ಧತೆ ಎಂದು ಉಪ ಪೆಂಟಗನ್ ಪ್ರೆಸ್ ಸೆಕ್ರೆಟರಿ ಸಬ್ರಿನಾ ಸಿಂಗ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗಾಜಾ ಪಟ್ಟಿಯನ್ನು ಎರಡು ಭಾಗಗಳಾಗಿ ವಿಂಗಡಿಸಿ ದಾಳಿ ಮುಂದುವರೆಸಿದ ಇಸ್ರೇಲ್ ಸೇನೆ
"ಅಕ್ಟೋಬರ್ 17 ಮತ್ತು ನವೆಂಬರ್ 9ರ ನಡುವೆ ಯುಎಸ್ ಮತ್ತು ಸಮ್ಮಿಶ್ರ ಪಡೆಗಳು ಇಲ್ಲಿಯವರೆಗೆ ಕನಿಷ್ಠ 46 ಬಾರಿ, ಇರಾಕ್‌ನಲ್ಲಿ ಪ್ರತ್ಯೇಕವಾಗಿ 24 ಬಾರಿ ಮತ್ತು ಸಿರಿಯಾದಲ್ಲಿ ಪ್ರತ್ಯೇಕವಾಗಿ 22 ಬಾರಿ ಏಕಮುಖ ಡ್ರೋನ್ ಮತ್ತು ರಾಕೆಟ್ ದಾಳಿ ನಡೆಸಿವೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ಹಮಾಸ್ ಹತ್ತಿಕ್ಕಲು ಇಸ್ರೇಲ್ ಶಪಥ : ಗಾಜಾದ ನಿರಾಶ್ರಿತ ಶಿಬಿರದ ಮೇಲೆ ವೈಮಾನಿಕ ದಾಳಿ, 52 ಸಾವು