ETV Bharat / international

US Gay nightclub: ಭೀಕರ ಗುಂಡಿನ ದಾಳಿ.. ಐವರು ಸಾವು.. 18 ಮಂದಿಗೆ ಗಾಯ - ನೈಟ್‌ ಕ್ಲಬ್​ನಲ್ಲಿ ಭೀಕರ ಗುಂಡಿನ ದಾಳಿ

ಅಮೆರಿಕದ ನೈಟ್‌ ಕ್ಲಬ್​ನಲ್ಲಿ ನಡೆದ ಗುಂಡಿನ ದಾಳಿದಲ್ಲಿ ಐವರು ಮೃತಪಟ್ಟಿದ್ದಾರೆ. ಇದೇ ವೇಳೆ ಓರ್ವ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

us-5-killed-18-injured-in-gay-nightclub-shooting-in-colorado
'ಗೇ' ನೈಟ್‌ ಕ್ಲಬ್​ನಲ್ಲಿ ಭೀಕರ ಗುಂಡಿನ ದಾಳಿ: ಐವರು ಸಾವು, 18 ಮಂದಿಗೆ ಗಾಯ
author img

By

Published : Nov 20, 2022, 8:48 PM IST

ವಾಷಿಂಗ್ಟನ್ (ಅಮೆರಿಕ): ಅಮೆರಿಕದ ಸಲಿಂಗಿಗಳ ನೈಟ್‌ ಕ್ಲಬ್​ನಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿ, 18 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕೊಲೊರಾಡೋ ರಾಜ್ಯದ ಗೇ (ಸಲಿಂಗಿ) ನೈಟ್‌ ಕ್ಲಬ್ ಆಗಿರುವ ಕ್ಲಬ್ ​ಕ್ಯೂನಲ್ಲಿ ಈ ಗುಂಡಿನ ದಾಳಿ ಮಾಡಲಾಗಿದೆ. ಗುಂಡಿನ ದಾಳಿ ಕುರಿತು ಸಹಾಯವಾಣಿ 911ಕ್ಕೆ ಹಲವು ಕರೆಗಳನ್ನು ಬಂದಿದ್ದವು. ತಕ್ಷಣ ಸ್ಥಳಕ್ಕೆ ತೆರಳಿ ಒಳಗಡೆಯಿದ್ದ ಓರ್ವ ಶಂಕಿತನನ್ನು ವಶಕ್ಕೆ ಪಡೆಯಲಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಕ್ಲಬ್ ಕ್ಯೂ ಸಾಮಾಜಿಕ ಜಾಲತಾಣದಲ್ಲಿ ತನ್ನ ಹೇಳಿಕೆ ಬಿಡುಗಡೆ ಮಾಡಿದ್ದು, ನಮ್ಮ ಸಮುದಾಯದ ಮೇಲೆ ಗುಂಡಿನ ದಾಳಿ ಮಾಡಿ ಧ್ವಂಸಗೊಳಿಸಲಾಗಿದೆ ಎಂದು ಹೇಳಿದೆ. ಅಲ್ಲದೇ, ಬಂದೂಕುಧಾರಿಯನ್ನು ಸದೆಬಡಿಯಲು ಮತ್ತು ಈ ದ್ವೇಷದ ದಾಳಿಯನ್ನು ಹಿಮ್ಮೆಟ್ಟಿಸಿದ ನಮ್ಮ ಗ್ರಾಹಕರ ವೀರೋಚಿತ ಪ್ರಯತ್ನಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದೂ ತಿಳಿಸಿದೆ. ಆದರೆ, ಈ ಗುಂಡಿನ ದಾಳಿ ಹೇಗೆ ಆರಂಭ ಮತ್ತು ಹೇಗೆ ಕೊನೆಗೊಂಡಿತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಉತ್ತರ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಟರ್ಕಿ: ಸೈನಿಕರು ಸೇರಿ 12 ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.