ನ್ಯೂಯಾರ್ಕ್ (ಯುಎಸ್): ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಸೋಮವಾರ ಪಾಕಿಸ್ತಾನ ಮೂಲದ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿಯನ್ನು ತನ್ನ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಆ್ಯಂಡ್ ದಿ ಲ್ಯಾವಂಟ್ (ಐಎಸ್‌ಐಎಲ್) ಮತ್ತು ಅಲ್-ಖೈದಾ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ 'ಜಾಗತಿಕ ಭಯೋತ್ಪಾದಕ' ಎಂದು ಪಟ್ಟಿ ಮಾಡಿದೆ. ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ನಾಯಕನನ್ನು (ಮಕ್ಕಿ) ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಲು ಚೀನಾ ಕಳೆದ ವರ್ಷ ಭಾರತದ ಪ್ರಯತ್ನಕ್ಕೆ ಅಡ್ಡಗಾಲು ಹಾಕಿತ್ತು.
ಭಾರತಕ್ಕೆ ಚೀನಾ ಅಡ್ಡಗಾಲು: ಜೂನ್ 2022ರಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ 1267 ಸಮಿತಿ ಎಂದೂ ಕರೆಯಲ್ಪಡುವ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಪಟ್ಟಿ ಮಾಡುವ ಪ್ರಸ್ತಾಪವನ್ನು ತಡೆದ ನಂತರ ಭಾರತವು ಚೀನಾವನ್ನು ತರಾಟೆಗೆ ತೆಗೆದುಕೊಂಡಿತ್ತು. ಆದರೆ, ಜನವರಿ 16, 2023 ರಂದು ಭದ್ರತಾ ಮಂಡಳಿಯ ಸಮಿತಿಯು 1267 (1999), 1989 (2011) ಮತ್ತು 2253 (2015) ಐಎಸ್‌ಐಎಲ್, ಅಲ್-ಖೈದಾ ಮತ್ತು ಸಂಬಂಧಿತ ವ್ಯಕ್ತಿಗಳು, ಗುಂಪುಗಳು, ಉದ್ಯಮಗಳು ಮತ್ತು ಘಟಕಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ವಿಶ್ವಸಂಸ್ಥೆ ಅನುಮೋದಿಸಿದೆ.
ಭದ್ರತಾ ಮಂಡಳಿ ನಿರ್ಣಯ 2610 (2021) ರ ಪ್ಯಾರಾಗ್ರಾಫ್ 1 ರಲ್ಲಿ ಹೊಂದಿಸಲಾದ ಸ್ವತ್ತುಗಳು, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಒಳಪಟ್ಟಿರುವ ವ್ಯಕ್ತಿಗಳು ಮತ್ತು ಘಟಕಗಳ ಐಎಸ್‌ಐಎಲ್ ಮತ್ತು ಅಲ್-ಖೈದಾ ನಿರ್ಬಂಧಗಳ ಪಟ್ಟಿಗೆ ಕೆಳಗೆ ನಿರ್ದಿಷ್ಟಪಡಿಸಿದ ಪ್ರವೇಶವನ್ನು ಸೇರಿಸುವುದು ವಿಶ್ವಸಂಸ್ಥೆಯ ಚಾರ್ಟರ್‌ನ ಅಧ್ಯಾಯ VII ಅಡಿಯಲ್ಲಿ ಬರುತ್ತದೆ ಎಂದು ಯುಎನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಎಲ್‌ಇಟಿ ದುಷ್ಕೃತ್ಯಕ್ಕೆ ನಿಧಿ ಸಂಗ್ರಹ: ಭಾರತ ಮತ್ತು ಯುಎಸ್ ಈಗಾಗಲೇ ಮಕ್ಕಿಯನ್ನು ತಮ್ಮ ದೇಶೀಯ ಕಾನೂನಿನ ಅಡಿಯಲ್ಲಿ ಭಯೋತ್ಪಾದಕ ಎಂದು ಪಟ್ಟಿ ಮಾಡಿದೆ. ಆತ ಭಾರತದಲ್ಲಿ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಯುವಕರನ್ನು ನೇಮಿಸಿಕೊಳ್ಳುವುದು ಮತ್ತು ದಾಳಿಗಳನ್ನು ಯೋಜಿಸುವುದು ಮತ್ತು ನಿಧಿ ಸಂಗ್ರಹಿಸುವಲ್ಲಿ ತೊಡಗಿಸಿಕೊಂಡಿದ್ದ. ಮಕ್ಕಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಮುಖ್ಯಸ್ಥ ಮತ್ತು 26/11 ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ ಸೋದರ ಮಾವ. ಈತ ಅಮೆರಿಕ ಗೊತ್ತುಪಡಿಸಿದ ವಿದೇಶಿ ಭಯೋತ್ಪಾದಕ ಸಂಘಟನೆ (ಎಫ್‌ಟಿಒ) ಹಾಗೂ ಎಲ್‌ಇಟಿಯಲ್ಲಿ ವಿವಿಧ ನಾಯಕತ್ವ ವಹಿಸಿದ್ದ. ಎಲ್‌ಇಟಿ ಕಾರ್ಯಾಚರಣೆಗಳಿಗೆ ನಿಧಿ ಸಂಗ್ರಹಿಸುವಲ್ಲಿಯೂ ಈತ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಸಾಬೀತಾಗಿದೆ.
2020ರಲ್ಲಿ ಪಾಕಿಸ್ತಾನಿ ಭಯೋತ್ಪಾದನಾ-ವಿರೋಧಿ ನ್ಯಾಯಾಲಯವು ಮಕ್ಕಿಯನ್ನು ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಒಂದು ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿತ್ತು. ಮತ್ತು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಕಾರ ಜೈಲು ಶಿಕ್ಷೆಯನ್ನು ವಿಧಿಸಿದೆ. ಪಾಕಿಸ್ತಾನ ಮೂಲದ ಮತ್ತು ಯುಎನ್-ನಿಷೇಧಿತ ಭಯೋತ್ಪಾದಕ ಸಂಸ್ಥೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ಪಟ್ಟಿ ಮಾಡುವ ಅಮೆರಿಕ ಹಾಗೂ ಭಾರತದ ಪ್ರಸ್ತಾವನೆಗೆ ವಿಶ್ವಸಂಸ್ಥೆಯಲ್ಲಿ ಚೀನಾ ತಡೆ ನೀಡಿದೆ.
ಭಯೋತ್ಪಾದನೆ ಎಂದರೇನು?: ಸಮಾಜದಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ಕದಡಿ ಭಯ ಹುಟ್ಟಿಸುವುದು. ಇದು ಸಮಾಜ ವಿರೋಧಿ ಕೃತ್ಯ. ಇದರಿಂದ ಸಾಮಾಜಿಕ ಬದುಕು ದುಸ್ತರಗೊಳ್ಳುವುದು. ಅಪರಾಧವೆಂಬುದು ಸಮಾಜದಲ್ಲಿ ಅಸಹಜ ಪ್ರಕ್ರಿಯೆಯೇನಲ್ಲ. ದಮನ, ಮರ್ದನ, ಬಲಾತ್ಕಾರಗಳಿಗೆ ವಿರುದ್ಧ ಪ್ರತಿಕ್ರಿಯೆಯಾಗಿಯೂ ಅಪರಾಧ ಕೃತ್ಯ ನಡೆಯಬಹುದು.
ಇದನ್ನೂ ಓದಿ: ಜಾಗತಿಕ ಉಗ್ರ ಹಫೀಜ್ ಸಯೀದ್ ಬೆನ್ನಿಗೆ ನಿಂತ ಪಾಕ್..!