ರೆಹೋಬೋತ್ ಬೀಚ್: ಉಕ್ರೇನ್‌ನಲ್ಲಿ ರಷ್ಯಾದ ಯುದ್ಧ ಕೊನೆಗೊಳಿಸಲು ಮಾತುಕತೆ ಮೂಲಕ ಇತ್ಯರ್ಥ ಪಡಿಸುವುದು ಅಗತ್ಯ ಎಂದು ಅಧ್ಯಕ್ಷ ಜೋ ಬೈಡನ್ ಅಭಿಪ್ರಾಯಪಟ್ಟಿದ್ದಾರೆ. ಯುದ್ಧವನ್ನು ಕೊನೆಗೊಳಿಸಲು ಮತ್ತು ಈ ಪ್ರದೇಶದಲ್ಲಿ ಶಾಂತಿ ತರಲು ಉಕ್ರೇನ್ ತನ್ನ ಕೆಲವು ಪ್ರದೇಶವನ್ನು ರಷ್ಯಾಕ್ಕೆ ಬಿಟ್ಟುಕೊಡಬೇಕೇ ಎಂದು ಪ್ರಶ್ನಿಸಿದಾಗ, ಉಕ್ರೇನ್ ಇಲ್ಲದೇ ಯುನೈಟೆಡ್ ಸ್ಟೇಟ್ಸ್ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಬೈಡನ್ ಉತ್ತರಿಸಿದರು.
ಓದಿ: ಶಸ್ತ್ರಾಸ್ತ್ರಗಳನ್ನು ಖರೀದಿಸಲು ಕನಿಷ್ಠ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸಬೇಕು : ಜೋ ಬೈಡನ್
ಇದು ಅವರ ಪ್ರದೇಶವಾಗಿದೆ. ಅವರು ಏನು ಮಾಡಬೇಕು.. ಏನು ಮಾಡಬಾರದು.. ಎಂದು ನಾನು ಅವರಿಗೆ ಹೇಳಲು ಹೋಗುವುದಿಲ್ಲ. ಆದರೆ, ಕೆಲವು ಹಂತದಲ್ಲಿ ಇಲ್ಲಿ ಸಂಧಾನ ಸಭೆ ಅಥವಾ ಮಾತುಕತೆ ಮೂಲಕ ಯುದ್ಧವನ್ನು ಕೊನೆಗೊಳಿಸಬೇಕು ಎಂದು ನನಗೆ ತೋರುತ್ತದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು.
ಓದಿ: ರಷ್ಯಾದ ಬ್ಯುಸಿನೆಸ್ ಸೆಂಟರ್ಗೆ ಬೆಂಕಿ: ಜನರ ರಕ್ಷಣಾ ಕಾರ್ಯಕ್ಕೆ 3 ಹೆಲಿಕಾಪ್ಟರ್ ಬಳಕೆ
ಅಂತಹ ಒಪ್ಪಂದವು ಹೇಗಿರುತ್ತದೆ ಎಂದು ತನಗೆ ತಿಳಿದಿಲ್ಲ. ಆದರೆ, ಉಕ್ರೇನಿಯನ್ನರು ತಮ್ಮನ್ನು ರಕ್ಷಿಸಿಕೊಳ್ಳಲು ಅಮೆರಿಕ ಸಹಾಯ ಮಾಡುವುದನ್ನು ಮುಂದುವರಿಸುತ್ತದೆ ಎಂದು ಬೈಡನ್ ತಮ್ಮ ಮನದಾಳದ ಮಾತುಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡರು.