ETV Bharat / international

Ukraine Russia war: ರಷ್ಯಾ ವಿರುದ್ಧ ಪ್ರತಿದಾಳಿ ಆರಂಭಿಸಿದ ಉಕ್ರೇನ್ - Ukraine launched a counterattack

ಉಕ್ರೇನ್ ಪಡೆಗಳು ಕೊನೆಗೂ ರಷ್ಯಾ ವಿರುದ್ಧ ಮತ್ತೊಂದು ಹಂತದ ಪ್ರತಿದಾಳಿಯನ್ನು ಆರಂಭಿಸಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

Ukraine's long-awaited counter-offensive against Russia has started

author img

By

Published : Jun 11, 2023, 2:02 PM IST

ಕೀವ್ (ಉಕ್ರೇನ್) : ರಷ್ಯಾ ವಿರುದ್ಧ ತನ್ನ ದೇಶವು ಬಹುನಿರೀಕ್ಷಿತ ಪ್ರತಿದಾಳಿಯನ್ನು ಪ್ರಾರಂಭಿಸಿರುವುದನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೃಢಪಡಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರತಿದಾಳಿ ಮತ್ತು ರಕ್ಷಣಾತ್ಮಕ ದಾಳಿಗಳು ನಡೆಯುತ್ತಿವೆ ಎಂದು ಝೆಲೆನ್ಸ್ಕಿ ಶನಿವಾರ ಹೇಳಿದ್ದಾರೆ. ಆದರೆ ಪ್ರತಿದಾಳಿಗಳು ಯಾವ ಹಂತದಲ್ಲಿವೆ ಅಥವಾ ಯಾವ ಪ್ರದೇಶದಲ್ಲಿ ನಡೆಯುತ್ತಿವೆ ಎಂಬುದನ್ನು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಉಕ್ರೇನ್‌ನ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಹೋರಾಟ ಉಲ್ಬಣಗೊಂಡ ನಂತರ ಮತ್ತು ಉಕ್ರೇನ್ ಪಡೆಗಳು ಮುನ್ನುಗ್ಗಿವೆ ಎಂಬ ವರದಿಗಳ ನಂತರ ಉಕ್ರೇನ್ ಅಧ್ಯಕ್ಷರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಉಕ್ರೇನಿಯನ್ ಪಡೆಗಳು ಪೂರ್ವದಲ್ಲಿ ಬಖ್ಮುಟ್ ಬಳಿ ಮತ್ತು ದಕ್ಷಿಣದಲ್ಲಿ ಝಪೊರಿಝಿಯಾ ಬಳಿ ಮುನ್ನಡೆ ಸಾಧಿಸಿವೆ ಮತ್ತು ರಷ್ಯಾದ ಗುರಿಗಳ ಮೇಲೆ ದೂರದಿಂದ ದಾಳಿಗಳನ್ನು ನಡೆಸಿದೆ ಎಂದು ವರದಿಯಾಗಿದೆ.

ಆದರೆ ಯುದ್ಧಭೂಮಿಯಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದನ್ನು ನಿರ್ಣಯಿಸುವುದು ಕಷ್ಟಕರವಾಗಿದೆ. ಯುದ್ಧ ನಿರತ ಉಕ್ರೇನ್ ಹಾಗೂ ರಷ್ಯಾ ದೇಶಗಳು ಯುದ್ಧದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವರದಿ ನೀಡುತ್ತಿವೆ. ತಾನು ರಷ್ಯಾ ವಿರುದ್ಧ ಮೇಲುಗೈ ಸಾಧಿಸಿದ್ದೇನೆ ಎಂದು ಉಕ್ರೇನ್ ಪ್ರತಿಪಾದಿಸುತ್ತಿದ್ದರೆ, ಉಕ್ರೇನ್ ದಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದೇವೆ ಎಂದು ರಷ್ಯಾ ಹೇಳುತ್ತಿದೆ. ಯುದ್ಧ ಪರಿಸ್ಥಿತಿಯ ಬಗ್ಗೆ ವೀಡಿಯೊ ಸಂದರ್ಶನದಲ್ಲಿ ಮಾತನಾಡಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನಿಯನ್ ಪಡೆಗಳು ಖಂಡಿತವಾಗಿಯೂ ತಮ್ಮ ಆಕ್ರಮಣ ಪ್ರಾರಂಭಿಸಿವೆ. ಆದರೆ ಅವರ ಹೋರಾಟ ವಿಫಲವಾಗಿದ್ದು, ಅವರಿಗೆ ಭಾರಿ ಸಾವು ನೋವು ಉಂಟಾಗಿವೆ ಎಂದಿದ್ದಾರೆ.

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಕೀವ್‌ನಲ್ಲಿ ಮಾತನಾಡಿಸ ಝೆಲೆನ್ಸ್ಕಿ, ರಷ್ಯಾದ ನಾಯಕನ ಮಾತುಗಳು ಆಸಕ್ತಿದಾಯಕವಾಗಿವೆ ಎಂದು ವ್ಯಂಗ್ಯವಾಡಿದರು. ತಮ್ಮದೇ ಶೈಲಿಯಲ್ಲಿ ಭುಜಗಳನ್ನು ಅಲ್ಲಾಡಿಸುತ್ತ ಹುಬ್ಬುಗಳನ್ನು ಮೇಲಕ್ಕೆತ್ತಿ ಮಾತನಾಡಿದ ಅವರು ಪುಟಿನ್ ಯಾರೆಂಬುದೇ ಗೊತ್ತಿಲ್ಲ ಎನ್ನುವಂತೆ ನಟಿಸಿದರು. ರಷ್ಯಾ ಬಳಿ ಇನ್ನು ಹೆಚ್ಚು ಸಮಯವಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳುವುದು ಮುಖ್ಯ ಎಂದು ಹೇಳಿದರು. ಉಕ್ರೇನ್‌ನ ಮಿಲಿಟರಿ ಕಮಾಂಡರ್‌ಗಳು ಸಕಾರಾತ್ಮಕ ಮನಸ್ಥಿತಿಯಲ್ಲಿದ್ದಾರೆ ಮತ್ತು ಈ ವಿಷಯವನ್ನು ಪುಟಿನ್‌ಗೆ ಹೇಳಿ ಎಂದು ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಾಹಿತಿಯ ಪ್ರಕಾರ ರಷ್ಯಾ ಉಕ್ರೇನ್ ಯುದ್ಧದಲ್ಲಿ ಫೆಬ್ರವರಿವರೆಗೆ 8,006 ನಾಗರಿಕರು ಕೊಲ್ಲಲ್ಪಟ್ಟಿದ್ದು, ಸುಮಾರು 13,287 ಜನ ಗಾಯಗೊಂಡಿದ್ದಾರೆ. ಉಕ್ರೇನ್‌ನಲ್ಲಿ ನಡೆದಿರುವ ಯುದ್ಧವು ಈಗ ಸುಮಾರು 16 ತಿಂಗಳಿಗೂ ಹೆಚ್ಚು ಕಾಲದಿಂದ ಮುಂದುವರೆದಿದೆ. 24 ಫೆಬ್ರವರಿ 2022 ರಂದು ಉತ್ತರ, ಪೂರ್ವ ಮತ್ತು ದಕ್ಷಿಣದಿಂದ ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸಿತ್ತು. ಮುಂದಿನ ಎರಡು ದಿನಗಳಲ್ಲಿ ಎರಡು ದೊಡ್ಡ ನಗರಗಳಾದ ಕೈವ್ ಮತ್ತು ಖಾರ್ಕಿವ್ ಮೇಲೆ ತೀವ್ರ ಶೆಲ್ ದಾಳಿ ಮತ್ತು ಕ್ಷಿಪಣಿ ದಾಳಿ ನಡೆಸುವ ಮೂಲಕ ರಷ್ಯಾ ಯುದ್ಧವನ್ನು ಆರಂಭಿಸಿತ್ತು.

ಇದನ್ನೂ ಓದಿ : Cryptocurrency in India: ಕಾಯ್ದೆ ಜಾರಿಯ ನಂತರವೇ ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.