ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ 37 ದಿನಗಳಾಗಿವೆ. ಉಕ್ರೇನ್‌ನ ಪ್ರದೇಶಗಳ ಮೇಲೆ ಸತತವಾಗಿ ದಾಳಿ ಮುಂದುವರಿಸಿ ಕ್ರೌರ್ಯ ಸೃಷ್ಟಿಸಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ಸೇನಾಪಡೆಗಳು ರಷ್ಯಾದ ಇಂಧನ ಶೇಖರಣಾ ಕೇಂದ್ರದ ಮೇಲೆ ವೈಮಾನಿಕ ದಾಳಿ ಮಾಡಿ ಧ್ವಂಸ ಮಾಡಿದೆ. ಇದು ರಷ್ಯಾದ ಮೇಲೆ ಉಕ್ರೇನ್‌ನ ಮೊದಲ ವೈಮಾನಿಕ ದಾಳಿಯಾಗಿದೆ.
-
🇷🇺#Russia | 🇺🇦#Ukraine
— The RAGE X - Intel (@theragex) April 1, 2022 " class="align-text-top noRightClick twitterSection" data="
📍Belgorod this morning
Oil depot on fire after a Ukrainian Airstrike #Russia #Ukraine pic.twitter.com/leBNAFWkBB
">🇷🇺#Russia | 🇺🇦#Ukraine
— The RAGE X - Intel (@theragex) April 1, 2022
📍Belgorod this morning
Oil depot on fire after a Ukrainian Airstrike #Russia #Ukraine pic.twitter.com/leBNAFWkBB🇷🇺#Russia | 🇺🇦#Ukraine
— The RAGE X - Intel (@theragex) April 1, 2022
📍Belgorod this morning
Oil depot on fire after a Ukrainian Airstrike #Russia #Ukraine pic.twitter.com/leBNAFWkBB
ಈ ಬಗ್ಗೆ ಆರೋಪಿಸಿರುವ ರಷ್ಯಾ, ಉಕ್ರೇನ್ ಒಂದೆಡೆ ಯುದ್ಧ ಸಂಧಾನ ನಡೆಸುವ ಮಾತನ್ನಾಡುತ್ತಾ ತನ್ನ ದೇಶದ ಇಂಧನ ಶೇಖರಣಾ ಘಟಕದ ಮೇಲೆ ವೈಮಾನಿಕ ದಾಳಿ ಮಾಡಿ ಧ್ವಂಸ ಮಾಡಿದೆ. ಇದರಿಂದ ಘಟಕ ಭಾರಿ ಬೆಂಕಿಯಿಂದ ಹೊತ್ತಿ ಉರಿಯುತ್ತಿದೆ ಎಂದಿದೆ.
ಎರಡು ಉಕ್ರೇನಿಯನ್ ಸೇನಾ ಹೆಲಿಕಾಪ್ಟರ್‌ಗಳು ಇಂದು ಬೆಳಗ್ಗೆ 6 ಗಂಟೆಗೆ ನಡೆಸಿದ ವಾಯುದಾಳಿಯಿಂದಾಗಿ ಪೆಟ್ರೋಲ್ ಶೇಖರಣಾ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಉಕ್ರೇನ್ ವಿಮಾನಗಳು ಕಡಿಮೆ ಎತ್ತರದಲ್ಲಿ ಹಾರಿ ಬಂದು ಈ ದಾಳಿ ನಡೆಸಿವೆ. ಇಬ್ಬರು ಉದ್ಯೋಗಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಂಕಿಯನ್ನು ನಂದಿಸಲು 170 ಅಗ್ನಿಶಾಮಕ ಸಿಬ್ಬಂದಿ ಹೋರಾಡುತ್ತಿದ್ದಾರೆ ಎಂದು ಬೆಲ್ಗೊರೊಡ್ ಪ್ರದೇಶದ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ಟೆಲಿಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೇ ಇಂಧನ ಸಂಸ್ಕರಣಾ ಘಟಕ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ವಿಡಿಯೋವನ್ನು ರಷ್ಯಾ ಸರ್ಕಾರ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ದಾಳಿಗೊಳಗಾದ ರಷ್ಯಾ ಪ್ರದೇಶವಾದ ಬೆಲ್ಗೊರೊಡ್ ಉಕ್ರೇನ್‌ನ ಗಡಿಯಿಂದ ಸುಮಾರು 40 ಕಿಲೋಮೀಟರ್, ಖಾರ್ಕಿವ್‌ನಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿದೆ.
ಓದಿ: ದೇಶದ ಶೇ 93 ಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ ಮೊಬೈಲ್ ಬ್ರಾಡ್‌ಬ್ಯಾಂಡ್: ಚೌಹಾಣ್