ETV Bharat / international

ಕೀವ್‌ ಬಳಿ 410 ನಾಗರಿಕರ ಮೃತದೇಹ ಪತ್ತೆ: 'ಜನಾಂಗೀಯ ಹತ್ಯೆ' ಎಂದ ಉಕ್ರೇನ್ ಅಧ್ಯಕ್ಷ

ರಷ್ಯಾದಿಂದ ಹಿಂಪಡೆಯಲಾದ ಉಕ್ರೇನ್‌ನ ಕೀವ್ ಪ್ರದೇಶದಲ್ಲಿ 410 ನಾಗರಿಕರ ಮೃತದೇಹಗಳು ಕಂಡು ಬಂದಿವೆ. ಈ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಒತ್ತಾಯಿಸಿದ್ದಾರೆ.

410 civilian bodies found near Kyiv
ಕೀವ್ ಪ್ರದೇಶದಲ್ಲಿ 410 ಮೃತ ದೇಹಗಳು ಪತ್ತೆ
author img

By

Published : Apr 4, 2022, 7:25 AM IST

ಕೀವ್(ಉಕ್ರೇನ್‌): ರಷ್ಯಾದ ಪಡೆಗಳಿಂದ ಇತ್ತೀಚೆಗೆ ಹಿಂಪಡೆದ ಕೀವ್ ಪ್ರದೇಶದಲ್ಲಿ ಒಟ್ಟು 410 ನಾಗರಿಕರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಕ್ರೇನ್‌ನ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಹೇಳಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯನ್ನರು ಆಕ್ರಮಿಸಿಕೊಂಡಿರುವ ಪಟ್ಟಣಗಳಲ್ಲಿ ನಾಗರಿಕರ ಉದ್ದೇಶಿತ ಹತ್ಯೆಗಳನ್ನು ಖಂಡಿಸಿದ್ದಾರೆ. ಆದರೆ, ರಷ್ಯಾದ ರಕ್ಷಣಾ ಸಚಿವಾಲಯ ಬುಚಾ ಮತ್ತು ಕೀವ್‌ನ ಇತರ ಉಪನಗರಗಳಲ್ಲಿ ನಾಗರಿಕರ ಹತ್ಯೆಯ ಆರೋಪವನ್ನು ತಿರಸ್ಕರಿಸಿದೆ.

  • In a video address, Ukranian President Volodymyr Zelenskyy denounced the allegedly targeted killings of civilians in towns the Russians occupied. He warned that more atrocities may be revealed if Russian forces are driven from other occupied areas. https://t.co/pRHWdnhnhU

    — The Associated Press (@AP) April 3, 2022 " class="align-text-top noRightClick twitterSection" data=" ">

ಈ ವಾರಾಂತ್ಯದಲ್ಲಿ ರಷ್ಯಾ ಸೇನೆಯಿಂದ ಇಡೀ ಕೀವ್ ಪ್ರದೇಶದ ನಿಯಂತ್ರಣವನ್ನು ಮರಳಿ ಪಡೆದ ಉಕ್ರೇನ್, ರಾಜಧಾನಿಯ ವಾಯುವ್ಯಕ್ಕೆ 30 ಕಿ.ಮೀ (19 ಮೈಲುಗಳು) ದೂರದಲ್ಲಿರುವ ಬುಚಾ ಪಟ್ಟಣದಲ್ಲಿ 'ಉದ್ದೇಶಪೂರ್ವಕ ಹತ್ಯಾಕಾಂಡ' ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ. ಇಲ್ಲಿ 280 ಶವಗಳನ್ನು ಸಾಮೂಹಿಕ ಸಮಾಧಿಗಳಲ್ಲಿ ಹೂಳಲಾಗಿದೆ ಎಂದು ಬುಚಾ ಮೇಯರ್ ಅನಾಟೊಲಿ ಫೆಡೋರುಕ್ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ನಾಯಕರ ಖಂಡನೆ: ಉಕ್ರೇನಿಯನ್ ಪಡೆಗಳು ಪ್ರದೇಶವನ್ನು ಮರಳಿ ಪಡೆಯುತ್ತಿದ್ದಂತೆ ನಾಗರಿಕರ ಮೃತದೇಹಗಳು ಬೀದಿಯಲ್ಲಿ ಕಂಡುಬಂದವು. ಶನಿವಾರ, AFP ಪತ್ರಕರ್ತರು ಬುಚಾದ ಒಂದೇ ರಸ್ತೆಯಲ್ಲಿ ಕನಿಷ್ಠ 20 ಶವಗಳನ್ನು ನೋಡಿದ್ದಾರೆ. ಹಲವರ ಕೈಗಳನ್ನು ಬೆನ್ನ ಹಿಂದೆ ಕಟ್ಟಿ ಗುಂಡು ಹೊಡೆದು ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ. ಈ ಚಿತ್ರಗಳು ವರದಿಯಾದ ನಂತರ ಕೀವ್​​ ಪ್ರದೇಶದಲ್ಲಿನ ದಾಳಿಯನ್ನು ಅಂತರರಾಷ್ಟ್ರೀಯ ನಾಯಕರು ಖಂಡಿಸಿದ್ದಾರೆ.

ನಾಗರಿಕರ ಹತ್ಯೆಯ ತನಿಖೆಗೆ ಕರೆ: ಕೀವ್ ಬಳಿಯ ಬುಚಾ ಪಟ್ಟಣದಲ್ಲಿ ನಾಗರಿಕರ ಹತ್ಯೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಭಾನುವಾರ ಒತ್ತಾಯಿಸಿದ್ದಾರೆ. 'ಉಕ್ರೇನ್‌ನ ಬುಚಾದಲ್ಲಿ ಕೊಲ್ಲಲ್ಪಟ್ಟ ನಾಗರಿಕರ ಚಿತ್ರಗಳಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಈ ಬಗ್ಗೆ ಸ್ವತಂತ್ರ ತನಿಖೆ ಅತ್ಯಗತ್ಯ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಷ್ಯಾದ ರಕ್ಷಣಾ ಸಚಿವಾಲಯವು ಇದನ್ನು 'ಉಕ್ರೇನಿಯನ್ ಅಧಿಕಾರಿಗಳ ಒಂದು ಹಂತದ ಕಾರ್ಯಾಚರಣೆ' ಎಂದು ಕರೆದಿದೆ. ಮತ್ತೊಂದೆಡೆ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಘಟನೆಯನ್ನು ಜನಾಂಗೀಯ ಹತ್ಯೆ' ಎಂದು ಕರೆದಿದ್ದಾರೆ.

ಇದನ್ನೂ ಓದಿ: ಜಿಂಕೆ ಕೊಂಬಿನ ರಕ್ತದಿಂದ ಪುಟಿನ್ ಸ್ನಾನ.. ಯಾಕಾಗಿ ಈ ಜಳಕ.. ಕೇಳಿದ್ರೆ ನೀವೂ ಬಿಡಲ್ಲ ಅನ್ನಿ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.