ETV Bharat / international

ಯುದ್ಧ ಪೀಡಿತ ಉಕ್ರೇನ್​ಗೆ ಬ್ರಿಟನ್​ ಪ್ರಧಾನಿ ಭೇಟಿ.. ಇತರ ದೇಶಗಳು ಜಾನ್ಸನ್ ನಡೆ ಅನುಸರಿಸಲಿ ಎಂದ ಝೆಲೆನ್ಸ್ಕಿ

UK PM Johnson meets Ukrainian President.. ಉಕ್ರೇನ್​ಗೆ ಬ್ರಿಟನ್​ನಿಂದ ನರೆವು ನೀಡುವ ಬಗ್ಗೆಯೂ ಬೋರಿಸ್ ಜಾನ್ಸನ್ ಅಭಯ ನೀಡಿದ್ದಾರೆ. ಇತ್ತ, ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್‌ಗೆ ಮಿಲಿಟರಿ ನೆರವು ನೀಡುವಲ್ಲಿ ಹಾಗೂ ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರುವಲ್ಲಿ ಬ್ರಿಟನ್​ ಮಾದರಿಯನ್ನು ಇತರ ಪಾಶ್ಚಿಮಾತ್ಯ ಪ್ರಜಾಪ್ರಭುತ್ವ ರಾಷ್ಟ್ರಗಳು ಸಹ ಅನುಸರಿಸಬೇಕೆಂದು ಕರೆ ನೀಡಿದರು..

ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ - ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್ ಭೇಟಿ

author img

By

Published : Apr 10, 2022, 12:40 PM IST

ಕೀವ್(ಉಕ್ರೇನ್​) : ಯುದ್ಧ ಪೀಡಿತ ಉಕ್ರೇನ್​ಗೆ ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್ ಭೇಟಿ ನೀಡಿದ್ದಾರೆ. ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗೂಡಿ ಬ್ರಿಟನ್​ ಪ್ರಧಾನಿ ರಾಜಧಾನಿ ಕೀವ್​ನಲ್ಲಿ ಪರಿಶೀಲನೆ ನಡೆಸಿದರಲ್ಲದೆ, ಉಕ್ರೇನ್​ ನಾಗರಿಕರನ್ನು ಮಾತನಾಡಿಸಿ ಧೈರ್ಯ ತುಂಬಿದರು. ಜಾನ್ಸನ್ ರಷ್ಯಾ ದಾಳಿ ನಂತರ ಉಕ್ರೇನ್​ಗೆ ಇತ್ತೀಚಿಗೆ ಭೇಟಿ ನೀಡಿದ ಯುರೋಪಿಯನ್ ನಾಯಕರಾಗಿದ್ದಾರೆ.

ಉಕ್ರೇನಿಯನ್ ಪಟ್ಟಣಗಳಲ್ಲಿ ಪತ್ತೆಯಾದ ನಾಗರಿಕರ ಮೃತದೇಹಗಳು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಖ್ಯಾತಿಯನ್ನು ಶಾಶ್ವತವಾಗಿ ಕಲುಷಿತಗೊಳಿಸಿದೆ. ಬುಕಾ ಮತ್ತು ಇರ್ಪಿನ್‌ನಂತಹ ಸ್ಥಳಗಳಲ್ಲಿ ಪುಟಿನ್ ಯುದ್ಧಾಪರಾಧಗಳನ್ನು ಮಾಡಿದ್ದಾರೆ.

ಇದು ಅವರ ಸರ್ಕಾರದ ಖ್ಯಾತಿಯನ್ನೂ ಕಲುಷಿತಗೊಳಿಸಿದೆ ಎಂದು ಬ್ರಿಟನ್​ ಪ್ರಧಾನಿ ಜಾನ್ಸನ್ ಹೇಳಿದ್ದಾರೆ. ಅಲ್ಲದೇ, ಕೀವ್ ಮೇಲೆ ರಷ್ಯಾದ ಆಕ್ರಮಣ ಮತ್ತು ವಿರೋಧಾಭಾಸಗಳನ್ನು ಹಿಮೆಟ್ಟಿಸಿದ ಉಕ್ರೇನ್ ಬಗ್ಗೆ ಅವರು ಹೊಗಳಿದ್ದಾರೆ.

  • Today I met my friend President @ZelenskyyUa in Kyiv as a show of our unwavering support for the people of Ukraine.

    We're setting out a new package of financial & military aid which is a testament of our commitment to his country's struggle against Russia’s barbaric campaign. pic.twitter.com/KNY0Nm6NQ3

    — Boris Johnson (@BorisJohnson) April 9, 2022 " class="align-text-top noRightClick twitterSection" data=" ">

ಕೆಲವೇ ದಿನಗಳಲ್ಲಿ ಇಡೀ ಉಕ್ರೇನ್​ ಅನ್ನು ಆವರಿಸಬಹುದೆಂದು ರಷ್ಯನ್ನರು ನಂಬಿದ್ದರು ಮತ್ತು ಕೆಲವೇ ಗಂಟೆಗಳಲ್ಲಿ ಕೀವ್ ಸೇನೆಗಳು ಶಸ್ತ್ರಗಳನ್ನು ತ್ಯಾಗ ಮಾಡುತ್ತಿವೆ ಎಂದೂ ಭಾವಿಸಿದ್ದರು. ಅವರ ಎಲ್ಲಾ ಉಲ್ಟಾ ಆಗಿದೆ. ಉಕ್ರೇನ್​ನ ಜನತೆ ಸಿಂಹದ ರೀತಿಯ ಧೈರ್ಯವನ್ನು ತೋರಿಸಿದ್ದಾರೆ. ಜತೆಗೆ ಜಗತ್ತು ಹೊಸ ವೀರರನ್ನು ಕಂಡುಕೊಂಡಿದೆ. ಆ ವೀರರೇ ಉಕ್ರೇನ್ ಜನತೆ ಎಂದೂ ಬ್ರಿಟನ್​ ಪ್ರಧಾನಿ ಬಣ್ಣಿಸಿದ್ದಾರೆ ಎಂದು ವರದಿಯಾಗಿದೆ.

ಮತ್ತಷ್ಟು ನೆರವು : ಉಕ್ರೇನ್​ಗೆ ಬ್ರಿಟನ್​ನಿಂದ ನೆರವು ನೀಡುವ ಬಗ್ಗೆಯೂ ಬೋರಿಸ್ ಜಾನ್ಸನ್ ಅಭಯ ನೀಡಿದ್ದಾರೆ. ಶಸ್ತ್ರಸಜ್ಜಿತ ವಾಹನಗಳು ಮತ್ತು ಹಡಗು ನಿರೋಧಕ ಕ್ಷಿಪಣಿಗಳನ್ನು ಒದಗಿಸುವ ಭರವಸೆಯನ್ನು ಬ್ರಿಟನ್​ ಪ್ರಧಾನಿ ಕೊಟ್ಟಿದ್ದಾರೆ.

ಇತ್ತ, ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಹ ಉಕ್ರೇನ್‌ಗೆ ಮಿಲಿಟರಿ ನೆರವು ನೀಡುವಲ್ಲಿ ಹಾಗೂ ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರುವಲ್ಲಿ ಬ್ರಿಟನ್​ ಮಾದರಿಯನ್ನು ಇತರ ಪಾಶ್ಚಿಮಾತ್ಯ ಪ್ರಜಾಪ್ರಭುತ್ವ ರಾಷ್ಟ್ರಗಳು ಸಹ ಅನುಸರಿಸಬೇಕೆಂದು ಹೇಳಿದ್ದಾರೆ.

  • The Ukrainians have the courage of a lion.

    President @ZelenskyyUa has given the roar of that lion.

    The UK stands unwaveringly with the people of Ukraine.

    Slava Ukraini 🇬🇧 🇺🇦 pic.twitter.com/u6vGYqmK4V

ಉಕ್ರೇನ್​ಗೆ ಹೆಚ್ಚುವರಿ 120 ಶಸ್ತ್ರಸಜ್ಜಿತ ವಾಹನಗಳು ಮತ್ತು ಹೊಸ ಹಡಗು ನಿರೋಧಕ ಕ್ಷಿಪಣಿಗಳನ್ನು ಬ್ರಿಟನ್​ ನೀಡಿದೆ. ಡ್ರೋನ್‌ಗಳ ಜೊತೆಗೆ 800 ಟ್ಯಾಂಕ್ ನಿರೋಧಕ ಕ್ಷಿಪಣಿಗಳು, ವಿಶ್ವ ಬ್ಯಾಂಕ್​ ಮೂಲಕ ಹೆಚ್ಚುವರಿಯಾಗಿ 500 ಮಿಲಿಯನ್ ಡಾಲರ್​ ಆರ್ಥಿಕ ನೆರವು ನೀಡಲು ಬ್ರಿಟನ್​ ಮುಂದಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅವಿಶ್ವಾಸ ಮತದಲ್ಲಿ ಸೋತ ಇಮ್ರಾನ್​ ಖಾನ್.. ಪಾಕ್​ ಇತಿಹಾಸದಲ್ಲೇ ಪ್ರಧಾನಿಗೆ ದೊಡ್ಡ ಮುಖಭಂಗ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.