ETV Bharat / international

ಭಾರತೀಯ ಅಕ್ರಮ ವಲಸಿಗರಿಗೆ ಇನ್ನು ಆಶ್ರಯ ನೀಡಲ್ಲ ಯುಕೆ; ಭಾರತ, ಜಾರ್ಜಿಯಾ ಸೇಫ್ ಕಂಟ್ರಿ ಲಿಸ್ಟ್​ಗೆ ಸೇರ್ಪಡೆ - ಆಧಾರ ರಹಿತವಾಗಿ ಸುರಕ್ಷತೆ ಬೇಡುವುದನ್ನು

ಬ್ರಿಟನ್ ಇನ್ನು ಮುಂದೆ ಅಕ್ರಮ ಭಾರತೀಯ ವಲಸಿಗರಿಗೆ ಆಶ್ರಯ ನೀಡುವುದಿಲ್ಲ ಎಂದು ಹೇಳಿದೆ.

UK to add India to safe states list; no asylum rights for Indian illegal migrants

author img

By ETV Bharat Karnataka Team

Published : Nov 9, 2023, 7:39 PM IST

ಲಂಡನ್ : ಅಕ್ರಮವಾಗಿ ತನ್ನ ದೇಶಕ್ಕೆ ಪ್ರವೇಶಿಸುವ ಭಾರತೀಯರಿಗೆ ಇನ್ನು ಮುಂದೆ ಪೌರತ್ವ ನೀಡುವುದಿಲ್ಲ ಎಂದು ಯುನೈಟೆಡ್ ಕಿಂಗ್​ಡಮ್ ಘೋಷಿಸಿದೆ. ದೇಶದ ಅಕ್ರಮ ವಲಸೆ ಕಾಯ್ದೆಯಲ್ಲಿ ಪ್ರಮುಖ ಬದಲಾವಣೆ ಮಾಡುವ ನಿಟ್ಟಿನಲ್ಲಿ ಭಾರತ ಮತ್ತು ಜಾರ್ಜಿಯಾಗಳನ್ನು ಸುರಕ್ಷಿತ ದೇಶಗಳ ಪಟ್ಟಿಗೆ ಸೇರಿಸಲು ಬ್ರಿಟನ್​ ಸರ್ಕಾರ ಯೋಜಿಸಿದೆ.

ಭಾರತವನ್ನು ಸುರಕ್ಷಿತ ದೇಶವೆಂದು ಪರಿಗಣಿಸುವುದು ಎಂದರೆ ಯಾವುದೇ ಒಬ್ಬ ವ್ಯಕ್ತಿಯು ಅಕ್ರಮವಾಗಿ ದೇಶದೊಳಗೆ ಬಂದರೆ, ಬ್ರಿಟನ್ ದೇಶದ ಆಶ್ರಯ ವ್ಯವಸ್ಥೆಯಡಿ ಆ ವ್ಯಕ್ತಿಯ ಹಕ್ಕನ್ನು ಮಾನ್ಯ ಮಾಡಲಾಗುವುದಿಲ್ಲ ಎಂದರ್ಥ ಎಂದು ಗೃಹ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಬುಧವಾರ ಸಂಸತ್ತಿನಲ್ಲಿ ಮಂಡಿಸಲಾದ ಕರಡು ಶಾಸನದ ಪ್ರಕಾರ, ಈ ಕ್ರಮವು ಬ್ರಿಟನ್​​ನ ವಲಸೆ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಆಧಾರ ರಹಿತವಾಗಿ ಸುರಕ್ಷತೆ ಬೇಡುವುದನ್ನು ಹಾಗೂ ಕಾಯ್ದೆಯ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ತಮ್ಮ ದೇಶಗಳಲ್ಲಿ ತಮ್ಮ ಜೀವಕ್ಕೆ ಯಾವುದೇ ಅಪಾಯವಿಲ್ಲದಿದ್ದರೂ ಹಲವಾರು ಭಾರತೀಯ ಮತ್ತು ಜಾರ್ಜಿಯಾ ನಾಗರಿಕರು ಸಣ್ಣ ದೋಣಿಗಳ ಮೂಲಕ ದೇಶದೊಳಗೆ ಪ್ರವೇಶಿಸುತ್ತಿರುವುದು ಹೆಚ್ಚಾಗುತ್ತಿದೆ ಎಂದು ಅಲ್ಲಿನ ಗೃಹ ಕಚೇರಿ ತಿಳಿಸಿದೆ. "ಮುಖ್ಯವಾಗಿ ತಾವು ಸುರಕ್ಷಿತವಾಗಿರುವ ದೇಶಗಳಿಂದ ಜನರು ಅಪಾಯಕಾರಿಯಾಗಿ ಹಾಗೂ ಕಾನೂನುಬಾಹಿರವಾಗಿ ಯುಕೆಗೆ ಪ್ರಯಾಣ ಮಾಡುವುದನ್ನು ನಿಲ್ಲಿಸುವುದು ನಮ್ಮ ಆದ್ಯತೆ" ಎಂದು ಬ್ರಿಟಿಷ್ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೇವರ್ಮನ್ ಹೇಳಿದರು.

"ಸುರಕ್ಷಿತ ದೆಶಗಳ ಪಟ್ಟಿಯನ್ನು ವಿಸ್ತರಿಸುವುದರಿಂದ ಇಲ್ಲಿರಲು ಯಾವುದೇ ಹಕ್ಕಿಲ್ಲದ ಜನರನ್ನು ತ್ವರಿತವಾಗಿ ಹೊರಗೆ ಹಾಕಲು ನಮಗೆ ಅನುವು ಮಾಡಿಕೊಡುತ್ತದೆ ಮತ್ತು ಅಷ್ಟಾಗಿಯೂ ನೀವು ಅಕ್ರಮವಾಗಿ ಇಲ್ಲಿಗೆ ಬಂದರೆ ನೀವು ಇಲ್ಲಿ ಉಳಿಯಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸುತ್ತದೆ" ಎಂದು ಸಚಿವರು ಹೇಳಿದರು. ಯುಕೆ ಸುರಕ್ಷಿತವೆಂದು ಪರಿಗಣಿಸುವ ಇತರ ದೇಶಗಳಲ್ಲಿ ಅಲ್ಬೇನಿಯಾ ಮತ್ತು ಸ್ವಿಟ್ಜರ್ಲೆಂಡ್, ಇಯು ಮತ್ತು ಇಇಎ ದೇಶಗಳು ಸೇರಿವೆ. ಯಾವುದೇ ದೇಶವು ತನ್ನ ಪ್ರಜೆಗಳಿಗೆ ಕಿರುಕುಳ ನೀಡುವಂತಹ ಗಂಭೀರ ಅಪಾಯವಿಲ್ಲ ಎಂದು ಗೃಹ ಕಾರ್ಯದರ್ಶಿ ತೃಪ್ತಿಪಟ್ಟರೆ ಮಾತ್ರ ಆ ದೇಶವನ್ನು ಸುರಕ್ಷಿತ ದೇಶಗಳ ಪಟ್ಟಿಗೆ ಸೇರಿಸಬಹುದು. ಇದನ್ನು ಶಾಸನಾತ್ಮಕವಾಗಿ ಸೆಕ್ಷನ್ 80 ಎಎ ಎಂದು ಕರೆಯಲಾಗುತ್ತದೆ.

ದೇಶದಲ್ಲಿ ಆಶ್ರಯ ಕೋರಿ ಸಣ್ಣ ದೋಣಿಗಳಲ್ಲಿ ಆಗಮಿಸುವ ಬೇರೆ ದೇಶಗಳ ನಾಗರಿಕರನ್ನು ತಡೆಗಟ್ಟುವುದು ಕನ್ಸರ್ವೇಟಿವ್ ಪಕ್ಷದ ಸರ್ಕಾರದ ಐದು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಈ ವರ್ಷದ ಆರಂಭದಿಂದ 26,000 ಕ್ಕೂ ಹೆಚ್ಚು ವಲಸಿಗರು ಅಪಾಯಕಾರಿ ಮಾರ್ಗಗಳ ಮೂಲಕ ಬಂದಿದ್ದಾರೆ ಎಂದು ಸರ್ಕಾರದ ಇತ್ತೀಚಿನ ಅಂಕಿ - ಅಂಶಗಳು ತಿಳಿಸಿವೆ.

ಇದನ್ನೂ ಓದಿ : ಇದೇ ಮೊದಲು! ಕೊಲೆ ಅಪರಾಧಿಗೆ ನೈಟ್ರೋಜನ್ ಹೈಪೋಕ್ಸಿಯಾ ಮೂಲಕ ಮರಣದಂಡನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.