ಲಂಡನ್: ಯುನೈಟೆಡ್ ಕಿಂಗ್‌ಡಂನಲ್ಲಿ (ಯುಕೆ) ಓದುತ್ತಿರುವ ಭಾರತೀಯರೂ ಸೇರಿದಂತೆ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಹೊಸ ವಲಸೆ ನೀತಿಯನ್ನು ಯುಕೆ ಸರ್ಕಾರ ಮಂಗಳವಾರ ಪ್ರಕಟಿಸಿದೆ. ಬ್ರಿಟಿಷ್ ಸಂಸ್ಥೆಗಳಲ್ಲಿ ದಾಖಲಾಗಿರುವಾಗ ಅವಲಂಬಿತ ಕುಟುಂಬ ಸದಸ್ಯರನ್ನು ದೇಶಕ್ಕೆ ಕರೆತರುವ ವಲಸಿಗರ ವೀಸಾ ಹಕ್ಕುಗಳ ಮೇಲೆ ಅಲ್ಲಿನ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಯುಕೆ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್‌ಮನ್ ಅವರು, "ಪ್ರಸ್ತುತ ಸಂಶೋಧನಾ ಕಾರ್ಯಗಳಿಗೆ ಗೊತ್ತುಪಡಿಸಲಾದ ಸ್ನಾತಕೋತ್ತರ ಕೋರ್ಸ್‌ಗಳಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಮಾತ್ರ ಅವರ ಮಕ್ಕಳು, ಪೋಷಕರನ್ನು ಒಳಗೊಂಡಂತೆ ಕುಟುಂಬ ಸದಸ್ಯರನ್ನು ಕರೆತರಲು ಅನುಮತಿ ನೀಡಲಾಗುವುದು" ಎಂದು ಹೇಳಿದ್ದಾರೆ.
2022 ರ ಒಂದೇ ವರ್ಷದಲ್ಲಿ ಪ್ರಾಯೋಜಿತ ವಿದ್ಯಾರ್ಥಿಗಳ ಅವಲಂಬಿತರಿಗೆ ಸುಮಾರು 136,000 ವೀಸಾಗಳನ್ನು ನೀಡಲಾಗಿದೆ. 2019 ರಲ್ಲಿ 16,000 ವೀಸಾ ನೀಡಲಾಗಿದ್ದು, ಇದು ಎಂಟು ಪಟ್ಟು ಹೆಚ್ಚಳವಾಗಿದೆ. ಹೀಗಾಗಿ, ವೀಸಾ ವ್ಯವಸ್ಥೆಯ ದುರುಪಯೋಗ ತಡೆಗಟ್ಟಲು ನೂತನ ಕ್ರಮಗಳ ಪ್ಯಾಕೇಜ್ ಅಗತ್ಯವಿದೆ ಎಂದು ಭಾರತೀಯ ಮೂಲದ ಸಚಿವರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : ಅಮೆರಿಕ ವೀಸಾ ಪಡೆಯಲು ಕಾಯುವ ಅವಧಿ ಅರ್ಧದಷ್ಟು ಕಡಿತ
ಯುಕೆಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ: ಇನ್ನು ಉನ್ನತ ಶಿಕ್ಷಣ ಪಡೆಯುಬೇಕೆಂಬ ಭಾರತೀಯ ವಿದ್ಯಾರ್ಥಿಗಳಿಗೆ ಲಂಡನ್ ಬಹಳ ಹಿಂದಿನಿಂದಲೂ ಜನಪ್ರಿಯ ತಾಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯುಕೆಯಲ್ಲಿ ಅಧ್ಯಯನ ಮಾಡುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. ಅದರಲ್ಲೂ, ಉನ್ನತ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುವ ಭಾರತೀಯ ವಿದ್ಯಾರ್ಥಿಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
ಇದನ್ನೂ ಓದಿ : ವೀಸಾ ಅವಧಿ ಮುಗಿದರೂ ವಾಪಸ್ ಆಗದ ವಿದೇಶಿ ವಿದ್ಯಾರ್ಥಿಗಳು: ಅಪರಾಧ ಕೃತ್ಯದಲ್ಲಿ ಭಾಗಿಯಾದವರೆಷ್ಟು ಗೊತ್ತಾ..?
ಇಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮವಾಗಿದೆ. ಯುಕೆ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ವ್ಯಾಪಕ ಶ್ರೇಣಿಯ ಪದವಿಪೂರ್ವ ಮತ್ತು ಪದವಿ ಕಾರ್ಯಕ್ರಮಗಳನ್ನು ನೀಡುತ್ತವೆ. ಹೀಗಾಗಿ, ಉನ್ನತ ದರ್ಜೆಯ ಶಿಕ್ಷಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಲಂಡನ್‌ನಾದ್ಯಂತ ಇರುವಂಥ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಕೌಶಲ್ಯಗಳನ್ನು ಒದಗಿಸುತ್ತವೆ.
ಇದನ್ನೂ ಓದಿ : ಹೆಚ್ 1ಬಿ ವೀಸಾ ಹೊಂದಿರುವವರ ಸಂಗಾತಿಗೆ ಅಮೆರಿಕದಲ್ಲಿ ಉದ್ಯೋಗಕ್ಕೆ ಅವಕಾಶ: ಯುಎಸ್ ಕೋರ್ಟ್
ಜೊತೆಗೆ, ಯುಕೆ ಸರ್ಕಾರ ಮತ್ತು ವಿಶ್ವವಿದ್ಯಾನಿಲಯಗಳು ಭಾರತೀಯ ವಿದ್ಯಾರ್ಥಿಗಳಿಗೆ ವ್ಯಾಪಕ ಶ್ರೇಣಿಯ ವಿದ್ಯಾರ್ಥಿ ವೇತನವನ್ನು ನೀಡುತ್ತವೆ. ಈ ವಿದ್ಯಾರ್ಥಿ ವೇತನವನ್ನು ಬೋಧನಾ ಶುಲ್ಕಗಳು ಮತ್ತು ಜೀವನ ವೆಚ್ಚವನ್ನು ಸರಿದೂಗಿಸಲು ಸಹಾಯ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಯುಕೆ ಯಲ್ಲಿ ಅಧ್ಯಯನ ಮಾಡಲು ಸಹಕಾರಿಯಾಗುತ್ತದೆ. ಇದರ ಜೊತೆಗೆ, ಯುಕೆ ಪದವಿಗಳು ಜಾಗತಿಕವಾಗಿ ಹೆಚ್ಚು ಗೌರವಾನ್ವಿತವಾಗಿವೆ ಮತ್ತು ಹೆಚ್ಚು ಗುರುತಿಸಲ್ಪಟ್ಟಿವೆ. ಸಹಜವಾಗಿಯೇ ಇದು ಭಾರತೀಯ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಆಸ್ತಿಯಾಗಿದೆ.
ಇದನ್ನೂ ಓದಿ : ದುಬೈ ಗೋಲ್ಡನ್ ವೀಸಾ ಪಡೆದ ಕೇರಳದ ವಿದ್ಯಾರ್ಥಿ