ETV Bharat / international

ಮೆಕ್ಸಿಕೋ: 2 ಖಾಸಗಿ ವಿಮಾನಗಳ ನಡುವೆ ಅಪಘಾತ, ಮಗು ಸೇರಿ 5 ಮಂದಿ ಸಾವು

ಮೆಕ್ಸಿಕೋ ಸಿಟಿಯಲ್ಲಿ ಖಾಸಗಿ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ.

Etv Bharat
Etv Bharat
author img

By PTI

Published : Sep 26, 2023, 8:30 AM IST

ಮೆಕ್ಸಿಕೋ ಸಿಟಿ: ಮೆಕ್ಸಿಕೊದ ಉತ್ತರ ರಾಜ್ಯ ಡುರಾಂಗೊದಲ್ಲಿ ಎರಡು ಖಾಸಗಿ ವಿಮಾನಗಳು ಡಿಕ್ಕಿಯಾಗಿ ಪತನಗೊಂಡಿದೆ. ಘಟನೆಯಲ್ಲಿ ಒಂದು ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ ಪಶ್ಚಿಮ ಡುರಾಂಗೊದಲ್ಲಿರುವ ಲಾ-ಗಲಾನ್ಸಿಟಾ ಪಟ್ಟಣದಲ್ಲಿ ಘಟನೆ ನಡೆದಿದೆ.

ಎರಡು ಸೆಸ್ನಾ ಲಘು ವಿಮಾನಗಳಾಗಿದ್ದು ಒಂದು ಟೇಕ್ ಆಫ್ ಆಗುವಾಗ ಮತ್ತು ಇನ್ನೊಂದು ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಅವಘಡ ಘಟಿಸಿದೆ. ತಕ್ಷಣವೇ ಎರಡೂ ವಿಮಾನಗಳಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಸಾವುನೋವು ಉಂಟಾಯಿತು ಎಂದು ಭದ್ರತಾ ಸಚಿವಾಲಯ ಮಾಧ್ಯಮಕ್ಕೆ ಮಾಹಿತಿ ನೀಡಿದೆ.

ಪ್ರವಾಹಕ್ಕೆ 7 ಮಂದಿ ಬಲಿ: ಪಶ್ಚಿಮ ಮೆಕ್ಸಿಕೋ ರಾಜ್ಯ ಜಲಿಸ್ಕೋದಲ್ಲಿ ಭೀಕರ ಪ್ರವಾಹ ಸಂಭವಿಸಿ ಏಳು ಜನ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಜಲಿಸ್ಕೋ ರಾಜ್ಯ ಸರ್ಕಾರ ತಿಳಿಸಿದೆ. ಜಲೋಕೋಟ್ ಪ್ರದೇಶದಲ್ಲಿ ಪ್ರವಾಹ ಅತಿಯಾದ ನಂತರ ತುರ್ತು ಸಿಬ್ಬಂದಿ ಸೋಮವಾರ ಮಧ್ಯಾಹ್ನ ರಕ್ಷಣಾ ಕಾರ್ಯ ಆರಂಭಿಸಿದರು.

ಜಲೋಕೋಟ್ ಕಡಿಮೆ ನಿವಾಸಿಗಳನ್ನು ಹೊಂದಿರುವ ಪ್ರದೇಶ. ಇಲ್ಲಿ ಉಂಟಾಗಿರುವ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ರಸ್ತೆ ಮತ್ತು ಮನೆಗಳು ಹಾನಿಗೊಳಗಾಗಿವೆ. ಅಗ್ನಿಶಾಮಕ ದಳ, ರೆಡ್ ಕ್ರಾಸ್, ತುರ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಕ್ಷಣಾ ಶ್ವಾನಗಳು, ಡ್ರೋನ್‌ಗಳು ಮತ್ತು ವೈದ್ಯಕೀಯ ಹೆಲಿಕಾಪ್ಟರ್‌ಗಳ ಸಹಾಯದಿಂದ ಕಾಣೆಯಾದವರಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಜಲಿಸ್ಕೋ ಗವರ್ನರ್ ಎನ್ರಿಕ್ ಅಲ್ಫಾರೊ ತಿಳಿಸಿದ್ದಾರೆ. (ಎಪಿ)

ಜೂನ್​ನಲ್ಲಿ ಸಂಭವಿಸಿದ ಭೂಕಂಪ: ಜೂನ್​ನಲ್ಲಿ ಮಧ್ಯ ಮೆಕ್ಸಿಕೋದ ಕರಾವಳಿಯಲ್ಲಿ 6.3 ತೀವ್ರತೆಯ ಭಾರಿ ಭೂಕಂಪ ಸಂಭವಿಸಿತ್ತು. ಇದರ ತೀವ್ರತೆ 6.3ರಷ್ಟಿತ್ತು. ಜೂನ್​ 19ರ ಸೋಮವಾರ ನಡುರಾತ್ರಿ 2 ಗಂಟೆಗೆ ಕಂಪನ ಜರುಗಿದೆ. ಆಫ್ ಕೋಸ್ಟ್ ಆಫ್ ಸೆಂಟ್ರಲ್ ಮೆಕ್ಸಿಕೋದಲ್ಲಿ ಭೂಕಂಪನ ಕೇಂದ್ರವಿದ್ದು, 10 ಕಿಮೀ ಆಳದಲ್ಲಿ ಸಂಭವಿಸಿತ್ತು. ಭೂಕಂಪವು ಬಾಜಾ ಕ್ಯಾಲಿಫೋರ್ನಿಯಾ ಸುರ್ ಮತ್ತು ಸೊನೊರಾ ರಾಜ್ಯಗಳ ನಡುವಣ ಪ್ರದೇಶದ ಲೊರೆಟೊದ ಉತ್ತರ-ಈಶಾನ್ಯಕ್ಕೆ ಸುಮಾರು 48 ಮೈಲುಗಳು ಅಂದರೆ ಸುಮಾರು 78 ಕಿಲೋಮೀಟರ್‌ನಲ್ಲಿ ಕೇಂದ್ರೀಕೃತವಾಗಿತ್ತು.

ಬ್ರೆಜಿಲ್​ನಲ್ಲಿ ವಿಮಾನ ಪತನ: ಬ್ರೆಜಿಲ್​ನ ಬಾರ್ಸೆಲೋಸ್‌ನಲ್ಲಿ ಮಧ್ಯಮ ಗಾತ್ರದ ವಿಮಾನವೊಂದು ಸೆ.16 ರಂದು 3 ಗಂಟೆಯ ಸುಮಾರಿಗೆ ಧರೆಗಪ್ಪಳಿಸಿತ್ತು. ವಿಮಾನದಲ್ಲಿದ್ದ ಪ್ರಯಾಣಿಕರು, ಸಿಬ್ಬಂದಿ ಸೇರಿದಂತೆ ಒಟ್ಟು 14 ಮಂದಿ ಸಾವನ್ನಪ್ಪಿದ್ದರು. ​ಪೈಲಟ್, ಸಹ ಪೈಲಟ್, ಇಬ್ಬರು ಸಿಬ್ಬಂದಿ ಸೇರಿ ಹದಿನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು. ದುರ್ಘಟನೆಯಲ್ಲಿ ಯಾರೊಬ್ಬರೂ ಬದುಕಿರಲಿಲ್ಲ. ಈ ವಿಮಾನವು ಮನೌಸ್ ಟ್ಯಾಕ್ಸಿ ಏರಿಯೊ ಎಂಬ ಕಂಪನಿಗೆ ಸೇರಿದೆ. ಅಮೆಜಾನ್‌ನ ಅತಿದೊಡ್ಡ ನಗರ ಮನೌಸ್‌ನಿಂದ ಟೇಕ್ ಆಫ್ ಆಗಿತ್ತು. ಮನೌಸ್‌ನಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ನಗರದಲ್ಲಿ ಲ್ಯಾಂಡಿಂಗ್​ ವೇಳೆ ಪ್ರತಿಕೂಲ ಹವಾಮಾನದಿಂದಾಗಿ ಅಪಘಾತ ಸಂಭವಿಸಿತ್ತು. ವಿಮಾನದಲ್ಲಿದ್ದವರೆಲ್ಲ ಮೀನುಗಾರಿಕೆಗೆ ತೆರಳುತ್ತಿದ್ದ ಬ್ರೆಜಿಲ್ ಪ್ರವಾಸಿಗ ಪ್ರಯಾಣಿಕರಾಗಿದ್ದರು.

ಇದನ್ನೂ ಓದಿ: ಮೆಕ್ಸಿಕೋದಲ್ಲಿ ಕಂದಕಕ್ಕೆ ಉರಳಿದ ಬಸ್​ ಆರು ಭಾರತೀಯರು ಸೇರಿ 17 ಮಂದಿ ಸಾವು : 23 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.