ETV Bharat / international

ಇಸ್ರೇಲ್ 'ಭಯೋತ್ಪಾದಕ ರಾಷ್ಟ್ರ'ವೆಂದ ಟರ್ಕಿ ಅಧ್ಯಕ್ಷ: ತಿರುಗೇಟು ಕೊಟ್ಟ ಇಸ್ರೇಲ್ ಪ್ರಧಾನಿ

Turkish President labels Israel a terrorist state: ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಇಸ್ರೇಲ್ ದೇಶವನ್ನು "ಭಯೋತ್ಪಾದಕ ರಾಷ್ಟ್ರ" ಎಂದು ಕರೆದಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್‌ ಆ್ಯಪ್‌ನಲ್ಲಿ ಇಸ್ರೇಲ್ ಪ್ರಧಾನಿ ತಿರುಗೇಟು ಕೊಟ್ಟಿದ್ದಾರೆ.

author img

By ANI

Published : Nov 16, 2023, 8:25 AM IST

Turkish President
ಇಸ್ರೇಲ್ ಪಿಎಂ

ಟೆಲ್ ಅವಿವ್(ಇಸ್ರೇಲ್): ಗಾಜಾದಲ್ಲಿ ಯುದ್ಧಾಪರಾಧ ಎಸಗುತ್ತಿರುವ ಮತ್ತು ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸುತ್ತಿರುವ ಇಸ್ರೇಲ್ 'ಭಯೋತ್ಪಾದಕ ರಾಷ್ಟ್ರ'ವಾಗಿದೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಅಲ್ಲಿನ ನಗರ ಮತ್ತು ಜನರ ಸಂಪೂರ್ಣ ವಿನಾಶದ ಕಾರ್ಯತಂತ್ರವನ್ನು ಇಸ್ರೇಲ್ ಜಾರಿಗೆ ತರುತ್ತಿದೆ ಎಂದು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಆರೋಪಿಸಿದ್ದಾರೆ.

ಇತ್ತೀಚೆಗೆ ಮಾಡಿದ ಭಾಷಣದಲ್ಲಿ, "ಗಾಜಾದಲ್ಲಿ ತುಳಿತಕ್ಕೊಳಗಾದ ಜನರನ್ನು ಕ್ರೂರವಾಗಿ ಕೊಂದ ಇಸ್ರೇಲ್‌ನ ರಾಜಕೀಯ ಮತ್ತು ಮಿಲಿಟರಿ ನಾಯಕರು ಅಂತರರಾಷ್ಟ್ರೀಯ ನ್ಯಾಯಾಲಯಗಳಲ್ಲಿ ವಿಚಾರಣೆ ಎದುರಿಸುತ್ತಾರೆ. ಈ ಕುರಿತು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಅವರು ಹೇಳಿದ್ದರು.

ಎರ್ಡೊಗನ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್‌ ಆ್ಯಪ್​ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಎರ್ಡೊಗನ್ ಅವರು, "ಹಮಾಸ್ ಭಯೋತ್ಪಾದಕ ರಾಜ್ಯ"ವನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಭಯೋತ್ಪಾದಕರನ್ನು ಬೆಂಬಲಿಸುವ ಶಕ್ತಿಗಳಿವೆ. ಅವರಲ್ಲಿ ಟರ್ಕಿಯ ಅಧ್ಯಕ್ಷ ಎರ್ಡೊಗನ್ ಕೂಡ ಒಬ್ಬರು. ಅವರು ಇಸ್ರೇಲ್ ಅನ್ನು ಭಯೋತ್ಪಾದಕ ರಾಷ್ಟ್ರವೆಂದು ಕರೆಯುತ್ತಾರೆ. ಆದರೆ ಹಮಾಸ್ ಭಯೋತ್ಪಾದಕ ರಾಜ್ಯವನ್ನು ಬೆಂಬಲಿಸುತ್ತಾರೆ. ಅವರೇ ಟರ್ಕಿಯೊಳಗಿನ ಟರ್ಕಿಯ ಹಳ್ಳಿಗಳ ಮೇಲೆ ಬಾಂಬ್ ದಾಳಿ ನಡೆಸಿದ್ದರು. ಆದ್ದರಿಂದ, ನಾವು ಅವರಿಂದ ಪಾಠ ಕಲಿಯಲು ಹೋಗುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಇಸ್ರೇಲ್ ಮೇಲೆ ಹಿಜ್ಬುಲ್ಲಾ ದಾಳಿ: ಏಳು ಸೈನಿಕರು ಸೇರಿದಂತೆ 17 ಜನರಿಗೆ ಗಾಯ

ಇಷ್ಟಕ್ಕೆ ಸುಮ್ಮನಾಗದ ಟರ್ಕಿ ಅಧ್ಯಕ್ಷ ಎರ್ಡೊಗನ್, "ನೆತನ್ಯಾಹು ಗಾಜಾಕ್ಕೆ ಪರಮಾಣು ಬಾಂಬ್‌ಗಳಿಂದ ಬೆದರಿಕೆ ಹಾಕುತ್ತಿದ್ದಾರೆ. ನಿಮ್ಮ ಬಳಿ ಪರಮಾಣು ಬಾಂಬ್‌ಗಳು, ಅಣುಬಾಂಬ್‌ಗಳಿವೆ. ಆದ್ಧರಿಂದ ನೀವು ಬೆದರಿಕೆ ಹಾಕುತ್ತಿದ್ದೀರಿ ಎಂದು ನಮಗೆ ತಿಳಿದಿದೆ. ನೀವು ಎಷ್ಟು ಬೇಕೋ ಅಷ್ಟು ಅಣುಬಾಂಬ್‌ಗಳನ್ನು ಹೊಂದಿರಬಹುದು. ನಿಮ್ಮ ಬಳಿ ಏನಿದ್ದರೂ ಪರವಾಗಿಲ್ಲ, ನಿಮ್ಮ ಅಂತ್ಯ ಹತ್ತಿರದಲ್ಲಿದೆ ಎಂದು ನಾನು ನೆತನ್ಯಾಹುಗೆ ಹೇಳುತ್ತಿದ್ದೇನೆ ಅಂತಾ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಶಿಫಾ ಆಸ್ಪತ್ರೆಯಲ್ಲಿ ಶಸ್ತ್ರಾಸ್ತ್ರ ಪತ್ತೆ, ಇದು ಹಮಾಸ್​ ಉಗ್ರರ ನೆಲೆ : ಐಡಿಎಫ್ ಆರೋಪ

ಪಾಶ್ಚಿಮಾತ್ಯ ರಾಷ್ಟ್ರಗಳು ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸುತ್ತವೆ. ಆದರೆ, ಹಮಾಸ್ ಭಯೋತ್ಪಾದಕ ಸಂಘಟನೆಯಲ್ಲ. ತನ್ನ ಭೂಮಿ ಮತ್ತು ನಾಗರಿಕರನ್ನು ರಕ್ಷಿಸಲು ಹೋರಾಡುವ ವಿಮೋಚನಾ ಗುಂಪು ಎಂದು ಪ್ರತಿಪಾದಿಸಿದರು. ಎರ್ಡೊಗನ್ ಹಿಂದಿನ ತಿಂಗಳು ಇಸ್ರೇಲ್‌ಗೆ ಯೋಜಿತ ಭೇಟಿಯನ್ನು ರದ್ದುಗೊಳಿಸಿದ್ದರು.

ಈ ಮಧ್ಯೆ ಗಾಜಾದಲ್ಲಿ "ವಿಸ್ತೃತ ಮಾನವೀಯ ವಿರಾಮಕ್ಕೆ" ಯುಎನ್ ಸೆಕ್ಯುರಿಟಿ ಕೌನ್ಸಿಲ್ (UNSC) ಕರೆ ನೀಡಿದೆ. ಆದರೆ, ಇಸ್ರೇಲ್​ ವಿದೇಶಾಂಗ ಸಚಿವಾಲಯವು "239 ಒತ್ತೆಯಾಳುಗಳು ಇನ್ನೂ ಹಮಾಸ್ ಭಯೋತ್ಪಾದಕರ ಕೈಯಲ್ಲಿ ಇರುವುದರಿಂದ ವಿಸ್ತೃತ ಮಾನವೀಯ ವಿರಾಮಗಳಿಗೆ ಅವಕಾಶ ನೀಡುವುದಿಲ್ಲ" ಎಂದು ಹೇಳಿದೆ.

ಇದನ್ನೂ ಓದಿ: ಶಿಫಾ ಸುತ್ತ ಇಸ್ರೇಲ್​ ಭೀಕರ ಬಾಂಬ್​ ದಾಳಿ : ಆಸ್ಪತ್ರೆಯೊಳಗೆ ಸಿಕ್ಕಿಬಿದ್ದ 20 ಸಾವಿರ ಜನರು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.