ನವದೆಹಲಿ: ''ಭಾರತದಂತಹ ದೇಶ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಖಾಯಂ ಸದಸ್ಯತ್ವ ಪಡೆದರೆ ಟರ್ಕಿ ಹೆಮ್ಮೆ ಪಡುತ್ತದೆ'' ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಭಾನುವಾರ ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯರು ರೊಟೇಷನ್ (ಸರದಿ) ಮೂಲಕ ಭದ್ರತಾ ಮಂಡಳಿಯ ಸದಸ್ಯರಾಗಲು ಅವಕಾಶ ಹೊಂದಿರಬೇಕು ಎಂದು ಮಾಧ್ಯಮಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
-
#WATCH | G 20 in India: When asked about India's inclusion in the permanent seat for UNSC, President of Turkey, Recep Tayyip Erdogan says, "A country like India being there on the UN Security Council, we would be proud. But as you now, the world is bigger than larger than five.… pic.twitter.com/ptqJasLAuC
— ANI (@ANI) September 10, 2023 " class="align-text-top noRightClick twitterSection" data="
">#WATCH | G 20 in India: When asked about India's inclusion in the permanent seat for UNSC, President of Turkey, Recep Tayyip Erdogan says, "A country like India being there on the UN Security Council, we would be proud. But as you now, the world is bigger than larger than five.… pic.twitter.com/ptqJasLAuC
— ANI (@ANI) September 10, 2023#WATCH | G 20 in India: When asked about India's inclusion in the permanent seat for UNSC, President of Turkey, Recep Tayyip Erdogan says, "A country like India being there on the UN Security Council, we would be proud. But as you now, the world is bigger than larger than five.… pic.twitter.com/ptqJasLAuC
— ANI (@ANI) September 10, 2023
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 5 ಖಾಯಂ ಸದಸ್ಯರಾದ ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಯುಎಸ್ ದೇಶಗಳನ್ನು ಉಲ್ಲೇಖಿಸಿದ ಎರ್ಡೊಗನ್, "ಭಾರತದಂತಹ ದೇಶವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಾದರೆ ನಾವು ಹೆಮ್ಮೆಪಡುತ್ತೇವೆ. ಭದ್ರತಾ ಮಂಡಳಿಯಲ್ಲಿ ಐದು ದೇಶಗಳು ಮಾತ್ರ ಇರುವುದನ್ನು ನಾವು ಬಯಸುವುದಿಲ್ಲ" ಎಂದು ಅಭಿಪ್ರಾಯಪಟ್ಟರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳಾಗಿ ಅಲ್ಜೀರಿಯಾ, ಗಯಾನಾ, ಸಿಯೆರಾ ಲಿಯೋನ್, ಸ್ಲೊವೇನಿಯಾ ಮತ್ತು ದಕ್ಷಿಣ ಕೊರಿಯಾ ದೇಶವನ್ನು ಆಯ್ಕೆ ಮಾಡಲಾಗಿತ್ತು. ಇದೇ ವರ್ಷದ ಜೂನ್ 6ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಆಯ್ಕೆ ನಡೆದಿತ್ತು. ಹೊಸದಾಗಿ ಭದ್ರತಾ ಮಂಡಳಿಗೆ ಸೇರ್ಪಡೆಯಾಗಿರುವ ರಾಷ್ಟ್ರಗಳು ಜನವರಿ 1, 2024ರಿಂದ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿರುತ್ತವೆ. ಪ್ರತಿ ವರ್ಷ ಭದ್ರತಾ ಮಂಡಳಿಗೆ ಐದು ಹೊಸ ಸದಸ್ಯ ರಾಷ್ಟ್ರಗಳ ಆಯ್ಕೆ ನಡೆಯುತ್ತದೆ.
ಈ ಹಿಂದೆ, ಈ ಕುರಿತು ಟ್ವೀಟ್ ಮಾಡಿದ್ದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನದ ಅಧ್ಯಕ್ಷ ಸಿಸಾಬಾ ಕೊರೊಸಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯರಾಗಿ ಆಯ್ಕೆಯಾದ ದೇಶಗಳಿಗೆ ಅಭಿನಂದನೆಗಳು. ಚುನಾವಣೆಯಲ್ಲಿ ಭಾಗವಹಿಸಿ ಆಯ್ಕೆ ಮಾಡಿದ ಇತರ ದೇಶಗಳಿಗೂ ಧನ್ಯವಾದ ತಿಳಿಸಿದ್ದರು.
''ಅಸ್ತಿತ್ವದಲ್ಲಿರುವ ಭದ್ರತಾ ಮಂಡಳಿಗೆ ಸರ್ಜರಿ ಮಾಡುವ ಅಗತ್ಯವಿದೆ'' ಎಂದು ಈ ಸಂದರ್ಭದಲ್ಲಿ ಭಾರತ ಮತ್ತೊಮ್ಮೆ ಧ್ವನಿ ಎತ್ತಿತ್ತು. ಪ್ರಸ್ತುತ ಅವಧಿಯಲ್ಲಿ ಭದ್ರತಾ ಮಂಡಳಿ ವಿಶ್ವವನ್ನು ಪ್ರತಿನಿಧಿಸುವ ಮಂಡಳಿಯಾಗಿ ಉಳಿದಿಲ್ಲ, ಇತರ ರಾಷ್ಟ್ರಗಳಿಗೂ ಮಂಡಳಿಯಲ್ಲಿ ಸ್ಥಾನವನ್ನು ಕೊಡಬೇಕಿದೆ. ಆಗ ರಚನಾತ್ಮಕ ರೂಪ ಪಡೆಯುತ್ತದೆ" ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದ್ದರು.
''ವಿಶ್ವಸಂಸ್ಥೆಯ ಪ್ರಧಾನ ಅಂಗವಾದ ಭದ್ರತಾ ಮಂಡಳಿಗೆ ಮೇಜರ್ ಸರ್ಜರಿ ಆಗಬೇಕು. ಇದಕ್ಕೆ ತುರ್ತು ಸುಧಾರಣೆ ತರುವ ಅವಶ್ಯಕತೆ ಇದೆ. ಜಗತ್ತು ವಿಕಸನವಾಗುತ್ತಿದೆ. ಜಾಗತಿಕ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡುವಲ್ಲಿ ಹೆಚ್ಚು ಪ್ರಾತಿನಿಧಿಕ, ಅಂತರ್ಗತ, ಪರಿಣಾಮಕಾರಿಯಾದ ಕೌನ್ಸಿಲ್‌ನ ತುರ್ತು ಅವಶ್ಯಕತೆ ಇದೆ'' ಎಂದು ಭಾರತ ಒತ್ತಾಯಿಸಿತ್ತು.
ಇದನ್ನೂ ಓದಿ: ದೆಹಲಿ ಜಿ20 ವಿಶ್ವದ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಪ್ರಮುಖ ಹೆಜ್ಜೆ: ಶ್ವೇತಭವನ