ETV Bharat / international

ಟರ್ಕಿಯಲ್ಲಿಂದು ಚುನಾವಣೆ: 20 ವರ್ಷಗಳ ಎರ್ಡೊಗನ್ ಅಧಿಕಾರ ಮುಕ್ತಾಯ?

author img

By

Published : May 14, 2023, 12:28 PM IST

ಟರ್ಕಿಯಲ್ಲಿಂದು ಚುನಾವಣೆ ನಡೆಯುತ್ತಿದೆ. ಪ್ರಸ್ತುತ ಅಧ್ಯಕ್ಷ ರೆಸೆಪ್​ ತಯ್ಯಿಪ್​ ಎರ್ಡೊಗನ್​ಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ.

Turkey
ಟರ್ಕಿ

ಅಂಕಾರಾ (ಟರ್ಕಿ): ಟರ್ಕಿಯಲ್ಲಿ ಇಂದು ಅಧ್ಯಕ್ಷೀಯ ಮತ್ತು ಸಂಸತ್ ಚುನಾವಣೆ ನಡೆಯುತ್ತಿದೆ. ಪ್ರಸ್ತುತ ಅಧ್ಯಕ್ಷ ರೆಸೆಪ್​ ತಯ್ಯಿಪ್​ ಎರ್ಡೊಗನ್ ಅವರ ಎರಡು ದಶಕಗಳ ಆಡಳಿತ ಇಂದಿಗೆ ಕೊನೆಗೊಳ್ಳುವ ಸಾಧ್ಯತೆ ಇದೆ ಎಂದು ​ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಎರ್ಡೋಗನ್ ಅವರು ಪ್ರಮುಖ ವಿರೋಧ ಪಕ್ಷದ ಅಭ್ಯರ್ಥಿ ಕೆಮಾಲ್ ಕಿಲಿಕ್‌ಡರೊಗ್ಲ ಅವರಿಗಿಂತ ಹಿನ್ನಡೆ ಸಾಧಿಸಿರುವುದಾಗಿ ಸಮೀಕ್ಷೆಗಳು ಹೇಳುತ್ತಿವೆ. ಯಾವುದೇ ಅಭ್ಯರ್ಥಿಗಳು ಶೇಕಡಾ 50 ಕ್ಕಿಂತ ಹೆಚ್ಚು ಮತಗಳನ್ನು ಗೆಲ್ಲದಿದ್ದರೆ, ಮೇ 28 ರಂದು ಎರಡನೇ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಫೆಬ್ರವರಿ 6ರಂದು ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ 50,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ದಕ್ಷಿಣ ಟರ್ಕಿ ಮತ್ತು ಉತ್ತರ ಸಿರಿಯಾದಾದ್ಯಂತ 5.9 ಮಿಲಿಯನ್‌ಗಿಂತಲೂ ಹೆಚ್ಚು ಜನರು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಈಗಾಗಲೇ ಘಟನೆ ನಡೆದು ಮೂರು ತಿಂಗಳುಗಳು ಕಳೆದಿದ್ದು ಪ್ರಜಾಪ್ರಭುತ್ವದ ಭವಿಷ್ಯವನ್ನು ಈಗಿರುವ ಮತದಾರರು ನಿರ್ಧರಿಸಲಿದ್ದಾರೆ.

ಚುನಾವಣೆಯು ಗಂಭೀರ ಆರ್ಥಿಕ ಬಿಕ್ಕಟ್ಟಿನ ನಡುವೆ ನಡೆಯುತ್ತಿದೆ. ಎರ್ಡೊಗಾನ್ ಸರ್ಕಾರದ ಅಡಿಯಲ್ಲಿ ಪ್ರಜಾಪ್ರಭುತ್ವದ ಸವೆತ ಆಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಶನಿವಾರ ಇಸ್ತಾನ್‌ಬುಲ್‌ನಲ್ಲಿ ತಮ್ಮ ಕೊನೆಯ ಚುನಾವಣಾ ಸಭೆಗಳನ್ನು ನಡೆಸಿದ್ದರು.

ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್​ಗೆ ಎರಡು ವಾರಗಳ ಜಾಮೀನು ಮಂಜೂರು

ವಿಶ್ಲೇಷಕರು ಈ ವರ್ಷ ದಾಖಲೆಯ ಮತದಾನದ ನಿರೀಕ್ಷೆ ಹೊಂದಿದ್ದಾರೆ. ಎರ್ಡೊಗನ್ ಮತ್ತು ಪ್ರಮುಖ ವಿರೋಧ ಪಕ್ಷದ ಅಭ್ಯರ್ಥಿ ಕೆಮಾಲ್ ಕಿಲಿಕ್‌ಡರೊಗ್ಲು ನಡುವೆ ತೀವ್ರ ಪೈಪೋಟಿ ಇರಲಿದೆ. ವಿದೇಶದಲ್ಲಿ ವಾಸಿಸುವ 1.8 ದಶಲಕ್ಷಕ್ಕೂ ಹೆಚ್ಚು ಮತದಾರರು ಈಗಾಗಲೇ ಏಪ್ರಿಲ್ 17 ರಂದು ತಮ್ಮ ಮತ ಚಲಾಯಿಸಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿವೆ.

ಫೆಬ್ರವರಿಯಲ್ಲಿ ಭೂಕಂಪದಿಂದ ಹಾನಿಗೊಳಗಾದ ಹೆಚ್ಚಿನ ಪ್ರಾಂತ್ಯಗಳು ಎರ್ಡೋಗನ್ ಮತ್ತು ಅವರ ಎಕೆ ಪಕ್ಷದ ಭದ್ರಕೋಟೆಗಳಾಗಿವೆ. ಆದರೆ ಭೂಕಂಪ ಪೀಡಿತ ವಲಯಗಳಲ್ಲಿ ಕನಿಷ್ಠ 1 ಮಿಲಿಯನ್ ಮತದಾರರು ಸ್ಥಳಾಂತರದ ಮಧ್ಯೆ ಈ ವರ್ಷ ಮತ ಚಲಾಯಿಸುವುದಿಲ್ಲ ಎಂದು ಹೇಳಿರುವುದಾಗಿ ಸುಪ್ರೀಂ ಎಲೆಕ್ಷನ್ ಕೌನ್ಸಿಲ್ (ವೈಎಸ್‌ಕೆ) ಮುಖ್ಯಸ್ಥ ಅಹ್ಮತ್ ಯೆನರ್ ತಿಳಿಸಿದ್ದಾರೆ.

ಕೆಲವು ವಿಶ್ಲೇಷಕರು ಹೇಳುವ ಪ್ರಕಾರ, ಕಿಲಿಕ್‌ಡರೊಗ್ಲು ಚುನಾವಣೆಯಲ್ಲಿ ಗೆದ್ದರೂ ಸಹ ಎರ್ಡೊಗನ್ ಯಾವುದೇ ಹೋರಾಟವಿಲ್ಲದೆ ಅಧಿಕಾರವನ್ನು ಹಸ್ತಾಂತರಿಸದಿರಬಹುದು ಎಂದು ಹೇಳಿದ್ದಾರೆ. ಎರ್ಡೊಗನ್ ಮತ್ತು ಕಿಲಿಕ್‌ಡಾರೊಗ್ಲು ಹೊರತುಪಡಿಸಿ, ರೈಟ್-ವಿಂಗ್ ಅನ್ಸೆಸ್ಟ್ರಾಲ್ ಅಲಯನ್ಸ್ (ಎಟಿಎ) ಅಭ್ಯರ್ಥಿ ಸಿನಾನ್ ಓಗನ್ ಕೂಡ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ: ಪ್ರವಾಸಿಗರ ಸ್ವರ್ಗ ಥಾಯ್ಲೆಂಡ್‌ನಲ್ಲಿಂದು ಸಾರ್ವತ್ರಿಕ ಚುನಾವಣೆ: ಯುವ ಮತದಾರರಿಂದ ಬದಲಾವಣೆಗೆ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.