ಕೀವ್: ಉಕ್ರೇನ್ ರಾಜಧಾನಿ ಕೀವ್ ಬಳಿ ಸೇನಾ ಕಾರ್ಯಾಚರಣೆ ಕಡಿತ ಮಾಡುವುದಾಗಿ ರಷ್ಯಾ ಮಂಗಳವಾರ ಘೋಷಿಸಿದ್ದು, ಇದು ರಷ್ಯಾ-ಉಕ್ರೇನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸುವ ಮುನ್ಸೂಚನೆ ಎಂತಲೇ ಹೇಳಲಾಗುತ್ತಿದೆ.
ಆದರೂ ರಷ್ಯಾದ ವಾಪಸಾತಿಯ ಘೋಷಣೆಯನ್ನು ಉಕ್ರೇನ್ ಸೇನೆ ನಂಬುವುದಿಲ್ಲ ಎಂದು ಹೇಳಿದೆ. ಪೂರ್ವ ಉಕ್ರೇನ್‌ನತ್ತ ಗಮನಹರಿಸಲು ರಷ್ಯಾದ ಪಡೆಗಳು ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿವೆ ಎಂಬುದನ್ನು ಈ ನಿರ್ಧಾರ ಸೂಚಿಸುತ್ತದೆ. ಉಕ್ರೇನ್ ಸೇನೆ ನಿನ್ನೆ ಕೀವ್ ಉಪನಗರ ಬ್ರೋವರಿ ಬಳಿಯ ಹಳ್ಳಿಗಳಲ್ಲಿ ನೆಲೆಸಿದ್ದು, ರಷ್ಯಾದ ಪಡೆಗಳು ಮೊದಲಿನಂತೆ ಸಕ್ರಿಯವಾಗಿಲ್ಲ ಎಂಬುದನ್ನು ಗಮನಿಸಿದ್ದೇವೆ ಎಂದಿದ್ದಾರೆ.
ರಷ್ಯಾ ಸೇನಾ ಬಲ ಕುಸಿತ!: ರಷ್ಯಾದ ಶಸ್ತ್ರಸಜ್ಜಿತ ವಾಹನಗಳ ಕಡಿಮೆ ಚಲನೆಯನ್ನು ಗಮನಿಸಿರುವುದಾಗಿ ಯೋಧನೊರ್ವ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಪುಟಿನ್ ಸೇನೆ ಅನುಭವಿಸಿದ ನಷ್ಟದಿಂದಾಗಿ ಇದೀಗ ಅವರು ಸಾಕಷ್ಟು ಪಡೆಗಳನ್ನು ಹೊಂದಿಲ್ಲ ಎಂತಲೂ ತಿಳಿಸಿದ್ದಾರೆ.
ಯುದ್ಧದ ಸಮಯದಲ್ಲಿ ನಾಶವಾದ ಕೆಲವು ರಷ್ಯಾದ ಸೇನಾ ವಾಹನಗಳನ್ನು ಸೇನಾ ಕಮಾಂಡರ್ ಮಾಧ್ಯಮಗಳಿಗೆ ತೋರಿಸಿದ್ದಾರೆ. ರಷ್ಯನ್ನರು ಕೀವ್‌ನಲ್ಲಿ ಮುನ್ನಡೆಯಲು ಪ್ರಯತ್ನಿಸಿದಾಗ ಬ್ರೋವರಿ ಬಳಿಯ ಹಳ್ಳಿಗಳಿಗೆ ಭಾರಿ ಹಾನಿಯನ್ನುಂಟುಮಾಡಿದ್ದಾರೆ. ರೈತನೊರ್ವ ತನ್ನ ಜಾನುವಾರುಗಳನ್ನು ಉಳಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನ ಮಾಡಿರುವುದಾಗಿ ಹೇಳಿದ್ದಾನೆ. ನನ್ನ ಬಳಿ ಇದೀಗ ಕೇವಲ 15 ಹಸುಗಳು ಮಾತ್ರ ಉಳಿದಿವೆ. ಮೇಕೆಗಳು ಹಾಗೂ ಹಸಿರುಮನೆಗಳನ್ನು ನಾಶ ಮಾಡಿದ್ದಾರೆಂದು ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯಾವಾಗ ಮುಗಿಯುತ್ತೋ ಯುದ್ಧ.. ರಷ್ಯಾ ದಾಳಿಯಿಂದ ಉಕ್ರೇನ್ಗೆ ಬರೋಬ್ಬರಿ 1 ಲಕ್ಷ ಕೋಟಿ ರೂ. ನಷ್ಟ!