ಕಠ್ಮಂಡು, ನೇಪಾಳ: ನೇಪಾಳದಲ್ಲಿ ಎರಡು ಗಂಟೆಗಳ ಅಂತರಲ್ಲಿ ಭೂಮಿ ಮೂರು ಬಾರಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.4, 5.0 ಮತ್ತು 3.6 ತೀವ್ರತೆಯ ಭೂಕಂಪನ ದಾಖಲಾಗಿದೆ. ಬಜುರಾದ ದಹಕೋಟ್‌ನಲ್ಲಿ ಭೂಕಂಪನಗಳ ಕೇಂದ್ರ ಬಿಂದುಗಳು ಪತ್ತೆಯಾಗಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.
ಹೌದು, ಕಳೆದ ರಾತ್ರಿ 11.43 ಗಂಟೆಗೆ 4.4 ತೀವ್ರತೆಯ ಭೂಕಂಪ ಮೊದಲು ಅಪ್ಪಳಿಸಿತು. ಬಳಿಕ ರಾತ್ರಿ 1.15 ಗಂಟೆಗೆ (ಇಂದು ನಸುಕಿನ ಜಾವ) 5.0 ತೀವ್ರತೆಯ ಭೂಕಂಪನ ಸಂಭವಿಸಿತು. ಇದಾದ 21 ನಿಮಿಷದ ಬಳಿಕ ಅಂದ್ರೆ ರಾತ್ರಿ 1.36 ಗಂಟೆಗೆ 3.6 ತೀವ್ರತೆಯಲ್ಲಿ ಭೂಮಿ ಕಂಪಿಸಿತು. ಈ ಬಗ್ಗೆ ನೇಪಾಳದ ಸುರ್ಖೆತ್ ಜಿಲ್ಲೆಯ ಭೂಕಂಪನ ಕೇಂದ್ರದ ಅಧಿಕಾರಿ ರಾಜೇಶ್ ಶರ್ಮಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಆದ್ರೆ ಇದುವರೆಗೆ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
-
Earthquake of Magnitude:5.0, Occurred on 28-04-2023, 01:15:57 IST, Lat: 29.49 & Long: 81.56, Depth: 10 Km ,Location: Nepal for more information Download the BhooKamp App https://t.co/Um7wqUnxS3@Indiametdept @ndmaindia @Dr_Mishra1966 pic.twitter.com/XMqpVOred8
— National Center for Seismology (@NCS_Earthquake) April 27, 2023 " class="align-text-top noRightClick twitterSection" data="
">Earthquake of Magnitude:5.0, Occurred on 28-04-2023, 01:15:57 IST, Lat: 29.49 & Long: 81.56, Depth: 10 Km ,Location: Nepal for more information Download the BhooKamp App https://t.co/Um7wqUnxS3@Indiametdept @ndmaindia @Dr_Mishra1966 pic.twitter.com/XMqpVOred8
— National Center for Seismology (@NCS_Earthquake) April 27, 2023Earthquake of Magnitude:5.0, Occurred on 28-04-2023, 01:15:57 IST, Lat: 29.49 & Long: 81.56, Depth: 10 Km ,Location: Nepal for more information Download the BhooKamp App https://t.co/Um7wqUnxS3@Indiametdept @ndmaindia @Dr_Mishra1966 pic.twitter.com/XMqpVOred8
— National Center for Seismology (@NCS_Earthquake) April 27, 2023
ಎರಡೆರಡು ಪ್ರಬಲ ಭೂಕಂಪಕ್ಕೆ ತತ್ತರಿಸಿದ ನ್ಯೂಜಿಲೆಂಡ್: ನ್ಯೂಜಿಲೆಂಡ್ನಲ್ಲಿ ಇತ್ತಿಚೇಗೆ ಎರಡೆರಡು ಪ್ರಬಲ ಭೂಕಂಪ ಸಂಭವಿಸಿದ್ದವು. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 7.2 ಎಂದು ಅಳೆಯಲಾಗಿತ್ತು. ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ಬೆಳಗ್ಗೆ 6.11ಕ್ಕೆ ಭೂಕಂಪನದ ಅನುಭವವಾಗಿತು. ಈ ಭೂಕಂಪನ ಬಳಿಕ ಸುಮಾರು 40 ನಿಮಿಷಗಳ ನಂತರ, ಅಂದರೆ 6:53ಕ್ಕೆ, ಕೆರ್ಮಾಡೆಕ್ ದ್ವೀಪದಲ್ಲಿ ಮತ್ತೆ ಭೂಕಂಪ ಸಂಭವಿಸಿತ್ತು. ಈ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 5.4 ಎಂದು ಅಳೆಯಲಾಗಿತ್ತು. ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಸಂಭವಿಸಿದ ಭೂಕಂಪವು ಸುಮಾರು 10 ಕಿ.ಮೀ ಆಳದಲ್ಲಿ ನಡೆದಿದೆ ಎಂದು ಹೇಳಲಾಗಿತ್ತು. ಭೂಕಂಪನದಿಂದ ನ್ಯೂಜಿಲೆಂಡ್‌ಗೆ ಯಾವುದೇ ಸುನಾಮಿ ಭಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.
-
Earthquake of Magnitude:4.4, Occurred on 27-04-2023, 23:43:53 IST, Lat: 29.43 & Long: 81.58, Depth: 10 Km ,Location: Nepal for more information Download the BhooKamp App https://t.co/ctH1ogNpeT @ndmaindia @Indiametdept @Dr_Mishra1966 @DDNewslive @DrJitendraSingh pic.twitter.com/1InJXldxOe
— National Center for Seismology (@NCS_Earthquake) April 27, 2023 " class="align-text-top noRightClick twitterSection" data="
">Earthquake of Magnitude:4.4, Occurred on 27-04-2023, 23:43:53 IST, Lat: 29.43 & Long: 81.58, Depth: 10 Km ,Location: Nepal for more information Download the BhooKamp App https://t.co/ctH1ogNpeT @ndmaindia @Indiametdept @Dr_Mishra1966 @DDNewslive @DrJitendraSingh pic.twitter.com/1InJXldxOe
— National Center for Seismology (@NCS_Earthquake) April 27, 2023Earthquake of Magnitude:4.4, Occurred on 27-04-2023, 23:43:53 IST, Lat: 29.43 & Long: 81.58, Depth: 10 Km ,Location: Nepal for more information Download the BhooKamp App https://t.co/ctH1ogNpeT @ndmaindia @Indiametdept @Dr_Mishra1966 @DDNewslive @DrJitendraSingh pic.twitter.com/1InJXldxOe
— National Center for Seismology (@NCS_Earthquake) April 27, 2023
ಭೂಕಂಪಕ್ಕೆ ನಲುಗಿದ ಟರ್ಕಿ, ಸಿರಿಯಾ: ಫೆಬ್ರವರಿ 6 ರಂದು ನಸುಕಿನ ಜಾವ ಆಗ್ನೇಯ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಪ್ರಬಲ ಭೂಮಿ ಕಂಪನಕ್ಕೆ ಜನರು ತತ್ತರಿಸಿ ಹೋಗಿದ್ದರು. ಕಲ್ಲು, ಮಣ್ಣು, ಸಿಮೆಂಟ್ ಸೇರಿದಂತೆ ಇತರ ಕಟ್ಟಡದ ಅವಶೇಷಗಳಡಿ ಸಿಲುಕಿ ಮಕ್ಕಳು, ವೃದ್ಧರು ಸೇರಿ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಅದಾದ ಬಳಿಕ ಮತ್ತೆರಡು ಬಾರಿ ಭೂಮಿ ನಡುಗಿತ್ತು. ಫೆಬ್ರವರಿ 21 ರಂದು 6.4 ತೀವ್ರತೆಯಲ್ಲಿ ಭೂಮಿ ನಲುಗಿ ಒಂದಿಷ್ಟು ಮಂದಿಯನ್ನು ಬಲಿ ಪಡೆದುಕೊಂಡಿತ್ತು.
ಮೃತರ ಸಂಖ್ಯೆ 47 ಸಾವಿರಕ್ಕೇರಿಕೆ: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭಾರಿ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 47,000 ದಾಟಿದೆ. ಬಹುಮಡಿ ಕಟ್ಟಡಗಳು ಕುಸಿದು ಅವಶೇಷಗಳ ಅಡಿಯಲ್ಲಿ ಮೃತದೇಹಗಳು ಪತ್ತೆಯಾಗಿದ್ದವು. ಮೃತಪಟ್ಟವರ ಸಂಖ್ಯೆ 47 ಸಾವಿರಕ್ಕೂ ಹೆಚ್ಚು ದಾಟಿದೆ ಎಂದು ಟರ್ಕಿಯ ಗೃಹ ಸಚಿವ ಸುಲೇಮನ್ ಸೊಯ್ಲು ತಿಳಿಸಿದ್ದರು. ಭೂಕಂಪನಿಂದಾಗಿ 1 ಲಕ್ಷಕ್ಕೂ ಹೆಚ್ಚು ಬಹುಮಡಿ ಕಟ್ಟಡಗಳು ಧ್ವಂಸಗೊಂಡಿದ್ದವು.