ನ್ಯೂಯಾರ್ಕ್: ಬಂಗಾರದ ಬೆಲೆ ಎಂದಿಗೂ ಸ್ಥಿರ ಮತ್ತು ಅಚಲ. ಇದೇ ಕಾರಣಕ್ಕೆ ಬಂಗಾರ ಷೇರು ವಾಹಿವಾಟಿಗಿಂತಲೂ ಸುರಕ್ಷಿತ ಹೂಡಿಕೆಯಾಗಿದೆ. ಇದರ ಮೇಲೆ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ವ್ಯಾಮೋಹವಿದೆ. ಅದರಲ್ಲೂ ಭಾರತೀಯರಲ್ಲಿ ಬಂಗಾರದ ಒಡವೆಗಳತ್ತ ಆಕರ್ಷಣೆ ಕಡಿಮೆಯೇ ಆಗದು. ಅವರು ಭಾರತದಲ್ಲೇ ಇರಲಿ ಅಥವಾ ಜಗತ್ತಿನ ಎಲ್ಲೇ ನೆಲೆಸಿದ್ದರೂ ವಂಶಪಾರಂಪರ್ಯವಾಗಿ ಬಂದಿರುವ ಒಡವೆಗಳನ್ನು ಜೊತೆಯಲ್ಲಿ ಜತನದಿಂದ ಸಂರಕ್ಷಿಸಿಕೊಂಡು ಹಬ್ಬ ಹರಿದಿನದಲ್ಲಿ ತೊಟ್ಟು ಖುಷಿ ಪಡುತ್ತಾರೆ.
ಆದರೆ, ಸಾಗರೋತ್ತರ ಭಾರತೀಯರ ಈ ಬಂಗಾರದ ಒಡವೆಗಳು ಇದೀಗ ಅಮೆರಿಕನ್ ಕಳ್ಳರ ಕಣ್ಣು ಕುಕ್ಕುತ್ತಿದೆ. ಮೆಸಾಚ್ಯೂಸೆಟ್ನಲ್ಲಿ ಕಳ್ಳರು ಭಾರತೀಯರು ಮತ್ತು ದಕ್ಷಿಣ ಏಷ್ಯಾದ ಜನರ ಮನೆಗಳನ್ನೇ ಗುರಿಯಾಗಸಿಕೊಂಡು ಆಭರಣಗಳನ್ನು ದೋಚುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಿಬಿಸಿ ಸುದ್ದಿಸಂಸ್ಥೆಯ ಪ್ರಕಾರ, ಈ ದರೋಡೆ ಪ್ರಕರಣಗಳನ್ನು ಎಫ್‌ಬಿಐ ಸೇರಿದಂತೆ ಕಾನೂನು ಜಾರಿ ಇಲಾಖೆಗಳೊಂದಿಗೆ ತನಿಖೆ ನಡೆಸಲಾಗುತ್ತಿದೆ. ಮೆಸಾಚ್ಯೂಸೆಟ್ನ ಬಿಲೆರಿಕಾ, ನಾಟಿಕ್, ವೆಸ್ಟೊನ್, ವೆಲೆಸ್ಲೆ, ಈಸ್ಒನ್ ಮತ್ತು ನಾರ್ಥ್ ಆಟ್ಲೆಬೊರೊ ಪ್ರದೇಶದಲ್ಲಿ ಇಂಥ ಅನೇಕ ಕಳ್ಳತನ ಪ್ರಕರಣಗಳು ವರದಿಯಾಗಿವೆ.
ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ನಡೆಯುವ ಕಳ್ಳತನ ಪ್ರಕರಣಗಳನ್ನು ಅಮೆರಿಕದಲ್ಲಿ ಅವಕಾಶ ಅಪರಾಧ ಎಂದು ಕರೆಯಲಾಗುತ್ತದೆ. ಮಿಡಲ್ಸೆಕ್ಸ್ ಡಿಸ್ಟ್ರಿಕ್ಟ್ ಅಟಾರ್ನಿ ಮರಿಯನ್ ರೇಯನ್ ಹೇಳುವಂತೆ, ಅತ್ಯಾಧುನಿಕ ಕಳ್ಳರು ಮನೆ ಮಾಲೀಕರು ಕೆಲವು ಕಾಲದವರೆಗೆ ಹೊರಹೋದಾಗ ಗುರಿಯಾಗಿಸಿ, ದರೋಡೆಗೆ ಸಂಚು ರೂಪಿಸುತ್ತಿದ್ದಾರೆ. ಇವರ ಮನೆಗಳನ್ನು ಗಮನಿಸಲಾಗುತ್ತಿದೆ. ಅವರ ಚಲನವಲನವನ್ನು ಸಾಮಾಜಿಕ ಜಾಲತಾಣದಲ್ಲಿ ಕಳ್ಳರು ಗಮನಿಸುತ್ತಾರೆ ಎಂದರು.
ಕಳ್ಳತನದ ವೇಳೆ ಯಾವುದೇ ಕಲಾ ಪರಿಕರಣಗಳು ಅಥವಾ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತೆಗೆದುಕೊಂಡು ಹೋಗುತ್ತಿಲ್ಲ ಎಂದಿದ್ದಾರೆ. ಕಾನೂನು ಜಾರಿ ಇಲಾಖೆ ದರೋಡೆಕೋರರ ಪತ್ತೆಗೆ ಪ್ರಯತ್ನಿಸುತ್ತಿದೆ. ಅವರು ಕೇವಲ ಭಾರತೀಯ ಅಮೆರಿಕನ್ ಮನೆಗಳನ್ನು ಗುರಿಯಾಗಿಸಿ, ಕಳ್ಳತನ ಮಾಡುತ್ತಿದ್ದಾರೆ ಎಂದು ಸಮೀರ್ ದೇಸಾಯಿ ತಿಳಿಸಿದ್ದಾರೆ. ಲನ್ಕಾಯಿನ್ನಲ್ಲಿರುವ ಇವರ ಮನೆಯನ್ನು ಕಳೆದ ತಿಂಗಳು ದೋಚಲಾಗಿದೆ.
ಈ ಕುರಿತು ಮಾತನಾಡಿರುವ ಅವರು, ಜುಲೈನಲ್ಲಿ 10 ದಿನಗಳ ಕಾಲ ಕುಟುಂಬ ಸದಸ್ಯರು ಹೊರಗೆ ಹೋದಾಗ ಕಳ್ಳರು ಆಲರಾಂ ಇಲ್ಲದ, ಎರಡನೇ ಮಹಡಿಯ ಕಿಟಕಿ ಮೂಲಕ ಒಳಗೆ ನುಗ್ಗಿದ್ದಾರೆ. ಮೇಲಿನ ಮಹಡಿಯನ್ನು ಸಂಪೂರ್ಣವಾಗಿ ದೋಚಿದ್ದಾರೆ. ಆಭರಣ, ಪರ್ಸ್, ವಾಚ್ ಮತ್ತು ಇತರೆ ವಸ್ತುಗಳನ್ನು ಕಳುವು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನಾವು ಹೆಚ್ಚಾಗಿ ಆಭರಣಗಳೊಂದಿಗೆ ಕಾಣಿಸಿಕೊಳ್ಳುತ್ತೇವೆ. ನಮ್ಮ ಪರಂಪರೆಯನ್ನು ಈ ಮೂಲಕ ಆಚರಿಸುತ್ತೇವೆ. ಇದು ನಮಗೆ ಕೇವಲ ವಸ್ತುವಲ್ಲ. ಇದು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ ಆದ ಒಡವೆಗಳು ಎಂದು ದೇಸಾಯಿ ಸಿವಿಎಸ್ ನ್ಯೂಸ್ಗೆ ವಿವರಿಸಿದರು.
ಎಫ್‌ಬಿಐ ಎಚ್ಚರಿಕೆ: ದರೋಡೆ ಗ್ಯಾಂಡ್ಗಳಿಗೆ ಮನೆಯಲ್ಲಿ ಮಾಲೀಕರು ಯಾವಾಗ ಹೊರಗೆ ಹೋಗುತ್ತಾರೆ. ಮತ್ತು ಅವರು ಯಾವಾಗ ಪ್ರವೇಶಿಸುತ್ತಾರೆ ಎಂಬುದು ತಿಳಿದಿದೆ. ಯಾವುದನ್ನು ಕದ್ದು ಮಾಯಾವಾಗಬೇಕು ಎಂಬುದೂ ತಿಳಿದಿದೆ ಎಂದು ಎಫ್‌ಬಿಐ ಅಧಿಕಾರಿಗಳು ಹೇಳಿದ್ದಾರೆ. ಭಾರತೀಯರು ಅಥವಾ ಇತರೆ ಸಮುದಾಯವನ್ನು ಈ ಗ್ಯಾಂಗ್ ಗುರಿಯಾಗಿಸಿದ್ದು, ಇದನ್ನು ತಡೆಯಬೇಕಾಗಿದೆ ಎಂದು ತಿಳಿಸಿದೆ.
ಕಳೆದ ಜೂನ್ನಲ್ಲಿ ಎಫ್‌ಬಿಐ, ನ್ಯೂಜೆರ್ಸಿಯಲ್ಲಿರುವ ಏಷ್ಯಾನ್ ಅಮೆರಿಕನ್ ಸಮುದಾಯದಗಳಿಗೆ ಈ ಸಂಬಂಧ ಎಚ್ಚರಿಕೆ ನೀಡಿದೆ. ಭಾರತೀಯ ಅಮೆರಿಕನ್ಗಳನ್ನು ಗುರಿಯಾಗಿಸಿ, ಆಭರಣ ಮತ್ತು ಇತರೆ ಮೌಲ್ಯಯುತ ವಸ್ತುಗಳನ್ನು ದೋಚುತ್ತಿದ್ದು ಕೊಲಂಬಿಯನ್ ಮೂಲದ ನಾಲ್ಕು ದರೋಡೆಕೋರರನ್ನು 2022ರಲ್ಲಿ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: Food Price Inflation: ಭಾರತದ ಅಕ್ಕಿ ರಫ್ತು ನಿಷೇಧ ಕ್ರಮ; ಜಾಗತಿಕವಾಗಿ ಶೇ 10-15ರಷ್ಟು ಧಾನ್ಯಗಳ ಬೆಲೆ ಏರಿಕೆ ಸಾಧ್ಯತೆ