ಹೊನೊಲುಲು( ಹವಾಯಿ ದ್ವೀಪ): ಹವಾಯಿಯಲ್ಲಿರುವ ವಿಶ್ವದ ಅತಿದೊಡ್ಡ ಸಕ್ರಿಯ ಜ್ವಾಲಾಮುಖಿ ಮೌನಾ ಲೊವಾ ಸುಮಾರು 40 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1984ರ ನಂತರ ಮೊದಲ ಬಾರಿಗೆ 11.30 ಗಂಟೆಗೆ ಕ್ಯಾಲ್ಡೆರಾವಾದ ಮೊಕುವೊವೆಯೊದಲ್ಲಿ ಜ್ವಾಲಾಮುಖಿಯ ಸ್ಫೋಟ ಪ್ರಾರಂಭವಾಯಿತು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜ್ವಾಲಾಮುಖಿಯ ಅಲರ್ಟ್ ಮಟ್ಟವನ್ನು ಸೂಚನೆ ಹಂತದಿಂದ ಎಚ್ಚರಿಕೆ ಹಂತಕ್ಕೆ ಏರಿಸಲಾಗಿದೆ. ಶಿಖರದ ತುದಿಯಲ್ಲಿ ಜ್ವಾಲಾಮುಖಿ ಪುಟಿಯುತ್ತಿದ್ದು, ಸುತ್ತಮುತ್ತಲಿನ ಎಲ್ಲ ದಾರಿಗಳನ್ನು ಬಂದ್ ಮಾಡಲಾಗಿದೆ.
ಮೌನಾ ಲೋವಾ ವಿಶ್ವದ ಅತಿದೊಡ್ಡ ಸಕ್ರಿಯ ಜ್ವಾಲಾಮುಖಿಯಾಗಿದೆ. ಇತರ ಅನೇಕ ದೊಡ್ಡ ಜ್ವಾಲಾಮುಖಿಗಳಿದ್ದರೂ ಅವುಗಳನ್ನು ಸುಪ್ತ ಜ್ವಾಲಾಮುಖಿಗಳು ಎಂದು ವರ್ಗೀಕರಿಸಲಾಗಿದೆ. ಅಂದರೆ, ಅವು ದೀರ್ಘಕಾಲದವರೆಗೆ ಸ್ಫೋಟಿಸಿಲ್ಲ ಅಥವಾ ಸುಪ್ತವಾಗಿವೆ ಎಂದರ್ಥ. ಅಂದರೆ ಭವಿಷ್ಯದಲ್ಲಿ ಅವು ಸ್ಫೋಟಗೊಳ್ಳುವುದಿಲ್ಲ ಎಂದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ: ಐಸ್‌ಲ್ಯಾಂಡ್‌ನ ಮೌಂಟ್ ಫಾಗ್ರಾಡಾಲ್ಸ್‌ಫ್ಜಾಲ್ ಬಳಿಯ ಕಣಿವೆಯಲ್ಲಿ ಉಕ್ಕಿ ಹರಿಯುತ್ತಿರುವ ಲಾವಾ ರಸ