ಬ್ಯಾಂಕಾಕ್ (ಥೈಲ್ಯಾಂಡ್): ಸುಮಾರು ಒಂದು ದಶಕದ ಕಾಲ ಆಗ್ನೇಯ ಏಷ್ಯಾದ ದೇಶವನ್ನು ಆಳಿದ ಮಿಲಿಟರಿ ಬೆಂಬಲಿತ ಪಕ್ಷಗಳನ್ನು ಮತದಾರರು ಈ ಬಾರಿ ತಿರಸ್ಕರಿಸಿದ್ದಾರೆ. ಥೈಲ್ಯಾಂಡ್‌ನ ಸುಧಾರಣಾವಾದಿ ವಿರೋಧ ಪಕ್ಷಗಳು ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ನಿನ್ನೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, 500 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪ್ರಗತಿಪರ ಮೂವ್ ಫಾರ್ವರ್ಡ್ ಪಾರ್ಟಿ (ಎಂಎಫ್‌ಪಿ) ಮತ್ತು ಜನಪ್ರಿಯ ಫ್ಯೂ ಥಾಯ್ ಪಕ್ಷವು ಸುಮಾರು 286 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.
ಆದರೆ ಮಿಲಿಟರಿ ನೇಮಿಸಿದ ಸೆನೆಟ್‌ನ 250 ಸದಸ್ಯರು ಪ್ರಧಾನ ಮಂತ್ರಿ ಆಯ್ಕೆಗೆ ಮತ ಚಲಾಯಿಸಲು ಅನುಮತಿಸುವ ಹೊಸ ಸಂಸದೀಯ ನಿಯಮಗಳಿಂದಾಗಿ ಅವರು ನೂತನ ಸರ್ಕಾರವನ್ನು ರಚಿಸಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ಅನಿಶ್ಚಿತತೆ ಉಳಿದಿದೆ. ಅಂದರೆ ಎಂಎಫ್‌ಪಿ ಮತ್ತು ಫ್ಯೂ ಥಾಯ್ ಹೊಸ ಆಡಳಿತವನ್ನು ಸ್ಥಾಪಿಸಲು ಸಣ್ಣ ಪಕ್ಷಗಳ ಬೆಂಬಲದ ಅಗತ್ಯವಿದೆ.
ಯುವ ನೇತೃತ್ವದ ಎಂಎಫ್‌ಪಿ ರಾಜಪ್ರಭುತ್ವವನ್ನು ಸುಧಾರಿಸುವ, ದೇಶದ ಸಂವಿಧಾನವನ್ನು ಪುನಃ ಬರೆಯುವ ಮತ್ತು ಸೈನ್ಯದ ಶಕ್ತಿಯನ್ನು ಕಡಿಮೆ ಮಾಡುವ ದಿಟ್ಟ ಭರವಸೆಯ ಮೇರೆಗೆ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದರು. ಒಟ್ಟು 147 ಸ್ಥಾನಗಳೊಂದಿಗೆ ಕೆಳಮನೆಯ ಅತಿದೊಡ್ಡ ಪಾಲನ್ನು ಎಂಎಫ್‌ಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಿದ್ಧವಾಗಿದೆ ಎಂದು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಪ್ರಾಥಮಿಕ ಫಲಿತಾಂಶಗಳು ತೋರಿಸಿವೆ. ಈ ಅಂಕಿ ಅಂಶವು ನೇರವಾಗಿ ಚುನಾಯಿತರಾದ 400 ಸ್ಥಾನಗಳಲ್ಲಿ 112 ಮತ್ತು ಅನುಪಾತದ ಆಧಾರದ ಮೇಲೆ ಪಕ್ಷಗಳಿಗೆ ಹಂಚಿಕೆಯಾದ 100 ಸ್ಥಾನಗಳಲ್ಲಿ 35 ಅನ್ನು ಹೊಂದಿದೆ.
ವಿಶ್ಲೇಷಕರು ಎಂಎಫ್‌ಪಿಯ ಫಲಿತಾಂಶವನ್ನು "ಅತ್ಯುತ್ತಮ" ಎಂದು ವಿವರಿಸಿದ್ದಾರೆ. 2014 ರ ದಂಗೆಯಲ್ಲಿ ಸೇನಾ ಮುಖ್ಯಸ್ಥರಾಗಿ ಅಧಿಕಾರವನ್ನು ವಶಪಡಿಸಿಕೊಂಡ ಪ್ರಧಾನ ಮಂತ್ರಿ ಪ್ರಯುತ್ ಚಾನ್-ಓಚಾ ಅವರ ಯುನೈಟೆಡ್ ಥಾಯ್ ನೇಷನ್ ಪಾರ್ಟಿ 36 ಸ್ಥಾನಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಅವರ ಹಿಂದಿನ ಪಕ್ಷವಾದ ಪಲಂಗ್ ಪ್ರಚಾರತ್ ಸುಮಾರು 40 ಸ್ಥಾನಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿತ್ತು. ಥಾಯ್ಲೆಂಡ್‌ನಲ್ಲಿ ಗಾಂಜಾವನ್ನು ಕಾನೂನುಬದ್ಧಗೊಳಿಸುವ ಅಭಿಯಾನದ ನೇತೃತ್ವ ವಹಿಸಿದ್ದ ಭೂಮ್‌ಜೈತೈ ಪಕ್ಷವು ಮೂರನೇ ಸ್ಥಾನದಲ್ಲಿದೆ. ಪ್ರಸ್ತುತ ಆಡಳಿತರೂಢ ಒಕ್ಕೂಟದ ಭಾಗವಾಗಿರುವ ಭೂಮ್ ಜೈಥಾಯ್ ಸುಮಾರು 70 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
"ಫಲಿತಾಂಶವು ಮೂವ್ ಫಾರ್ವರ್ಡ್ ಪಾರ್ಟಿಗೆ ಅತ್ಯಂತ ಪ್ರಭಾವಶಾಲಿ ವಿಜಯವಾಗಿದೆ" ಎಂದು ಪೂರ್ವ ಥೈಲ್ಯಾಂಡ್‌ನ ಉಬೊನ್ ರಾಟ್ಚಥಾನಿ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನದ ಪ್ರಾಧ್ಯಾಪಕ ಟಿಟಿಪೋಲ್ ಫಕ್ದೀವಾನಿಚ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾಸಿಗರ ಸ್ವರ್ಗ ಥಾಯ್ಲೆಂಡ್‌ನಲ್ಲಿಂದು ಸಾರ್ವತ್ರಿಕ ಚುನಾವಣೆ: ಯುವ ಮತದಾರರಿಂದ ಬದಲಾವಣೆಗೆ ಕರೆ