ETV Bharat / international

ಭಾರತೀಯ ಅಮೆರಿಕನ್ನರ ಮೇಲೆ ಹಲ್ಲೆ ನಡೆಸಿದ ಮೆಕ್ಸಿಕನ್ ಮಹಿಳೆ.. ವಿಡಿಯೋ ವೈರಲ್​ - ಇಂಡೋ ಅಮೆರಿಕನ್ ಮಹಿಳೆಯರ ಮೇಲೆ ಹಲ್ಲೆ

ಮೆಕ್ಸಿಕನ್ ಅಮೆರಿಕನ್ ಮಹಿಳೆಯೊಬ್ಬರು ಭಾರತೀಯ ಅಮೆರಿಕನ್ನರ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ​ಟೆಕ್ಸಾಸ್ ಪೊಲೀಸರು ಅವರನ್ನು ಬಂಧಿಸಿದ್ದಾರೆ.

indian americans
ಭಾರತೀಯ ಅಮೆರಿಕನ್ನರ ಮೇಲೆ ಹಲ್ಲೆ ನಡೆಸಿದ ಮೆಕ್ಸಿಕನ್ ಮಹಿಳೆ
author img

By

Published : Aug 26, 2022, 10:30 AM IST

ವಾಷಿಂಗ್ಟನ್: ನಾಲ್ವರು ಇಂಡೋ ಅಮೆರಿಕನ್ ಮಹಿಳೆಯರ ಗುಂಪಿನ ಮೇಲೆ ಮೆಕ್ಸಿಕನ್ ಅಮೆರಿಕನ್ ಮಹಿಳೆಯೊಬ್ಬರು ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಟೆಕ್ಸಾಸ್ ಪೊಲೀಸರು ಗುರುವಾರ ಮಹಿಳೆಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.

ವಿಡಿಯೋದಲ್ಲಿ ಮೆಕ್ಸಿಕನ್ ಮಹಿಳೆಯು ಭಾರತೀಯರನ್ನು ನಿಂದಿಸಿರುವುದಲ್ಲೇ ಹಲ್ಲೆ ಕೂಡ ನಡೆಸಿದ್ದಾರೆ. ಜೊತೆಗೆ ನೀವು ಭಾರತಕ್ಕೆ ವಾಪಸ್ ಹೋಗಿ. ನಾನು ಭಾರತೀಯರನ್ನು ದ್ವೇಷಿಸುತ್ತೇನೆ. ಎಲ್ಲ ಭಾರತೀಯರು ಉತ್ತಮ ಜೀವನ ನಡೆಸಲು ಅಮೆರಿಕಕ್ಕೆ ಬರುತ್ತಾರೆ ಎಂದು ನಿಂದಿಸಿದ್ದಾರೆ. ಮೆಕ್ಸಿಕನ್ ಅಮೆರಿಕನ್ ಮಹಿಳೆಯ ಈ ವರ್ತನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಕೈ ಮುರಿದ ವ್ಯಕ್ತಿ ಮೇಲೆ ಹಲ್ಲೆ: ವಿಡಿಯೋ ವೈರಲ್ ಬೆನ್ನಲ್ಲೇ ಹೆಚ್ಚಿನ ತನಿಖೆಗೆ ಸೂಚಿಸಿದ ಎಸ್​ಪಿ

ಟೆಕ್ಸಾಸ್‌ನ ಡಲ್ಲಾಸ್‌ ಪಾರ್ಕಿಂಗ್ ಸ್ಥಳದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಹಲ್ಲೆ ನಡೆಸಿದ ಮೆಕ್ಸಿಕನ್ - ಅಮೆರಿಕನ್ ಮಹಿಳೆಯನ್ನು ಪ್ಲಾನೋದ ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಪೋಸ್ಟ್ ಮಾಡಿರುವ ವ್ಯಕ್ತಿ, 'ನನ್ನ ತಾಯಿ ಮತ್ತು ಅವರ ಮೂವರು ಸ್ನೇಹಿತರು ಊಟಕ್ಕೆ ಹೋದಾಗ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಮೆಕ್ಸಿಕನ್ - ಅಮೆರಿಕನ್ ಮಹಿಳೆಯೊಬ್ಬಳು ಇಂಡೋ ಅಮೆರಿಕನ್ ಗುಂಪಿನ ಮೇಲೆ ಜನಾಂಗೀಯ ನಿಂದನೆಗಳನ್ನು ಮಾಡಿ, ತಾಯಿ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಾರೆ' ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕೂಲಿ ಕಾರ್ಮಿಕರ ಕೈ ಕಾಲು ಕಟ್ಟಿ ಗುತ್ತಿಗೆದಾರನಿಂದ ಅಮಾನುಷ ಥಳಿತ: ವಿಡಿಯೋ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.