ನ್ಯೂಯಾರ್ಕ್: ಇಲ್ಲಿನ ಮೆಟ್ರೋ ರೈಲು ಸುರಂಗಮಾರ್ಗದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಕೇಳಿ ಬಂದಿದ್ದು, 15 ವರ್ಷದ ಬಾಲಕ ಬಲಿಯಾಗಿದ್ದಾನೆ. ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಈ ವೇಳೆ ಯುವಕನ ಎದೆಗೆ ಗುಂಡಿಟ್ಟು ಕೊಲೆ ಮಾಡಲಾಗಿದೆ. ನ್ಯೂಯಾರ್ಕ್ ಸುರಂಗಮಾರ್ಗದಲ್ಲಿ ಈ ವರ್ಷ ನಡೆದ ಹಿಂಸಾಚಾರದಲ್ಲಿ ಇದು 8 ನೇ ಹತ್ಯೆಯಾಗಿದೆ.
ಯಾವುದೋ ಕಾರಣಕ್ಕಾಗಿ ಎರಡು ಯುವಕರ ಗುಂಪುಗಳ ಮಧ್ಯೆ ಗಲಾಟೆ ಶುರುವಾಗಿದೆ. ಬಳಿಕ ಇದು ಹಿಂಸಾಚಾರಕ್ಕೆ ತಿರುಗಿದ್ದು, ರಾಕ್ವೇ ಕೊನೆಯ ನಿಲ್ದಾಣಕ್ಕೆ ರೈಲು ಬಂದಾಗ ಗುಂಪಿನಲ್ಲಿ ಒಬ್ಬಾತ ಬಂದೂಕಿನಿಂದ ಇನ್ನೊಂದು ಗುಂಪಿನ ಮೇಲೆ ದಾಳಿ ಮಾಡಿದ್ದಾನೆ. ಇದರಿಂದ 15 ವರ್ಷದ ಬಾಲಕನ ಎದೆಗೆ ಗುಂಡು ತಾಕಿ ಆತ ಮೃತಪಟ್ಟಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನಿಗೆ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಸಹಾಯಕ್ಕೆ ಬಂದು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಆತ ಉಸಿರು ಚೆಲ್ಲಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದು, ಹಂತಕನ ಪತ್ತೆಗೆ ಜಾಲಾಡುತ್ತಿದ್ದಾರೆ.
ಓದಿ: ಓವರ್ಟೇಕ್ ವಿಚಾರದಲ್ಲಿ ಶಾಸಕ ಹರೀಶ್ ಪೂಂಜಾಗೆ ತಲ್ವಾರ್ ಝಳಪಿಸಿದ ಆರೋಪಿ.. ಗನ್ಮ್ಯಾನ್ ವಾಪಸ್ ಕಳುಹಿಸಿದ ಶಾಸಕ