ನೈರೋಬಿ: ಹವಾಮಾನ ವೈಪರೀತ್ಯದಿಂದಾಗಿ ತಾಂಜಾನಿಯಾದ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವೊಂದು ಇಂದು ಬೆಳಗ್ಗೆ ಅಲ್ಲಿನ ವಿಕ್ಟೋರಿಯಾ ಸರೋವರದಲ್ಲಿ ಪತನಗೊಂಡಿದೆ. ಈ ದುರ್ಘಟನೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು, ಸುಮಾರು 26 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ವಿಮಾನದಲ್ಲಿ ಅಂದಾಜು 40 ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ. ಉಳಿದವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
-
Precision Air plane crashes into Lake Victoria while trying to land in Tanzania; no word on casualties pic.twitter.com/EpRrgPvAVB
— BNO News (@BNONews) November 6, 2022 " class="align-text-top noRightClick twitterSection" data="
">Precision Air plane crashes into Lake Victoria while trying to land in Tanzania; no word on casualties pic.twitter.com/EpRrgPvAVB
— BNO News (@BNONews) November 6, 2022Precision Air plane crashes into Lake Victoria while trying to land in Tanzania; no word on casualties pic.twitter.com/EpRrgPvAVB
— BNO News (@BNONews) November 6, 2022
ತಾಂಜಾನಿಯಾದ ಕರಾವಳಿ ನಗರವಾದ ದಾರ್ ಎಸ್ ಸಲಾಮ್‌ನಿಂದ ಹೊರಟಿದ್ದ ವಿಮಾನ ಬುಕೋಬಾ ವಿಮಾನ ನಿಲ್ದಾಣಕ್ಕೆ ಬರುತ್ತಿತ್ತು ಎಂದು ವಿಮಾನಯಾನ ಸಂಸ್ಥೆ ಪ್ರೆಸಿಷನ್ ಏರ್ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಗೇರಾ ಪ್ರಾಂತ್ಯದ ಪೊಲೀಸ್ ಕಮಾಂಡರ್ ವಿಲಿಯಂ ಮ್ವಾಂಪಘಲೆ, ಘಟನೆಯಲ್ಲಿ ನಾವು ಸಾಕಷ್ಟು ಜನರನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ವಿಮಾನವು ಸುಮಾರು 100 ಮೀಟರ್ ಎತ್ತರದಲ್ಲಿ ಸಂಚರಿಸುತ್ತಿದ್ದಾಗ ಹವಾಮಾನ ಸಮಸ್ಯೆ ಎದುರಿಸಿತು. ಇಲ್ಲಿನ ಪ್ರಾಂತ್ಯದಲ್ಲಿ ಮಳೆಯಾಗುತ್ತಿದ್ದು, ವಿಮಾನ ನೀರಿನಲ್ಲಿ ಮುಳುಗಿದೆ. ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ ಎಂದರು.
ಇದನ್ನೂ ಓದಿ : ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ: 12 ಜನರಿಗೆ ತೀವ್ರ ಗಾಯ