ETV Bharat / international

ಇಸ್ರೇಲ್​ ವೈಮಾನಿಕ ದಾಳಿಯಲ್ಲಿ ಗಾಯಗೊಂಡ ಸಿರಿಯಾ ಜನ - ಸಿರಿಯಾದ ವಾಯು ರಕ್ಷಣಾ ವ್ಯವಸ್ಥೆ

ಸಿರಿಯಾದ ಮೇಲೆ ಇಸ್ರೇಲ್​ ದಾಳಿ ಮುಂದುವರಿದಿದೆ. ಇತ್ತಿಚೇಗೆ ನಡೆದ ಇಸ್ರೇಲ್​ ವೈಮಾನಿಕ ದಾಳಿಯಲ್ಲಿ ಗಾಯಗೊಂಡ ಸಿರಿಯಾದ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

civilians wounded in Israeli strikes  Syrian state media  Israeli airstrikes over central Syrian  Syrian air defense systems  militant Hezbollah group  Syrian President Bashar Assad  ಇಸ್ರೇಲ್​ನಿಂದ ವೈಮಾನಿಕ ದಾಳಿ  ಇಸ್ರೇಲ್​ ವೈಮಾನಿಕ ದಾಳಿಯಲ್ಲಿ ಗಾಯಗೊಂಡ ಸಿರಿಯಾದ ಜನ  ಸಿರಿಯಾದ ವಾಯು ರಕ್ಷಣಾ ವ್ಯವಸ್ಥೆ  ಇಸ್ರೇಲ್​ ವೈಮಾನಿಕ ದಾಳಿ
ಇಸ್ರೇಲ್​ ವೈಮಾನಿಕ ದಾಳಿಯಲ್ಲಿ ಗಾಯಗೊಂಡ ಸಿರಿಯಾದ ಜನ
author img

By

Published : Aug 26, 2022, 8:10 AM IST

ಡಮಾಸ್ಕಸ್, ಸಿರಿಯಾ: ಮಧ್ಯ ಸಿರಿಯಾದ ಹಮಾ ಪ್ರಾಂತ್ಯದ ಪಟ್ಟಣದ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಸಿರಿಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಸಿರಿಯಾದ ವಾಯು ರಕ್ಷಣಾ ವ್ಯವಸ್ಥೆಗಳು ಮೆಡಿಟರೇನಿಯನ್ ಸಮುದ್ರದಿಂದ ಬರುತ್ತಿದ್ದ ಕೆಲವು ಕ್ಷಿಪಣಿಗಳನ್ನು ತಮ್ಮ ಗುರಿಗಳನ್ನು ಹೊಡೆಯುವ ಮೊದಲು ಹೊಡೆದುರುಳಿಸಿದವು ಎಂದು ವರದಿಗಳು ತಿಳಿಸಿವೆ. ಯಾವುದೇ ಸಾವುನೋವುಗಳ ಬಗ್ಗೆ ವರದಿಗಳಿಲ್ಲ ಮತ್ತು ಇದುವರೆಗೆ ಇಸ್ರೇಲ್​ನಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ.

ಇಸ್ರೇಲ್ ತನ್ನ ಅಂತರ್ಯುದ್ಧದ ಕಳೆದ ದಶಕದಲ್ಲಿ ಸಿರಿಯಾದ ಸರ್ಕಾರಿ - ನಿಯಂತ್ರಿತ ಭಾಗಗಳೊಳಗಿನ ಗುರಿಗಳ ಮೇಲೆ ನೂರಾರು ಸ್ಟ್ರೈಕ್‌ಗಳನ್ನು ಮಾಡಿದೆ. ಲೆಬನಾನ್‌ನ ಉಗ್ರಗಾಮಿ ಹಿಜ್ಬುಲ್ಲಾ ಗುಂಪು ಮತ್ತು ಇತರ ಇರಾನ್ ಬೆಂಬಲಿತ ಸೇನಾಪಡೆಗಳು ಸೇರಿದಂತೆ ಸಿರಿಯನ್ ಅಧ್ಯಕ್ಷ ಬಶರ್ ಅಸ್ಸಾದ್ ಅವರ ಮಿತ್ರರಾಷ್ಟ್ರಗಳ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಇಸ್ರೇಲ್​ ಒಪ್ಪಿಕೊಂಡಿದೆ.

ಜುಲೈನಲ್ಲಿ ಡಮಾಸ್ಕಸ್ ಬಳಿ ಇಸ್ರೇಲ್​ ವೈಮಾನಿಕ ದಾಳಿಯು ಏಳು ಸಿರಿಯನ್ ಸೈನಿಕರನ್ನು ಕೊಂದಿತು. ಪೂರ್ವ ಸಿರಿಯಾದ ಆಯಕಟ್ಟಿನ ಡೀರ್ ಎಲ್-ಜೌರ್ ಪ್ರಾಂತ್ಯದಲ್ಲಿ ಅಮೆರಿಕ ಮಿಲಿಟರಿ ಮತ್ತು ಇರಾನ್ ಬೆಂಬಲಿತ ಸೇನಾಪಡೆಗಳು ಮಧ್ಯೆ ಕಳೆದ ಎರಡು ದಿನಗಳಲ್ಲಿ ದಾಳಿಗಳು ನಡೆದಿವೆ.

ಓದಿ: ಸಿರಿಯಾ ಹಡಗು ಮುಳುಗಡೆ ಪ್ರಕರಣ.. ತೈಲ ಸೋರಿಕೆ ತಡೆಗೆ ಗುಜರಾತ್​​ನಿಂದ ಬಂದಿದೆ 'ಸಮುದ್ರ ಪಾವಕ್'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.