ಲಂಡನ್ (ಬ್ರಿಟನ್): ಶಂಕಿತ ಖಲಿಸ್ತಾನ್ ಪರ ಬೆಂಬಲಿಗರು ಮತ್ತೆ ಉದ್ಧಟತನ ತೋರಿದ್ದಾರೆ. ಬ್ರಿಟನ್ನಲ್ಲಿರುವ ಭಾರತೀಯ ಹೈಕಮಿಷನ್ ಹೊರಗೆ ಬುಧವಾರ ಮತ್ತೊಮ್ಮೆ ಪ್ರತಿಭಟನೆ ನಡೆಸಲಾಗಿದೆ. ಇದೇ ವೇಳೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಇದರಿಂದ ಈ ಬಾರಿ ಪ್ರತಿಭಟನೆಯು ಪೊಲೀಸ್ ಬ್ಯಾರಿಕೇಡ್‌ಗಳ ಹಿಂದೆಕ್ಕೆ ಸೀಮಿತವಾಗಿತ್ತು.
ಇದನ್ನೂ ಓದಿ: ಖಲಿಸ್ತಾನಿಗಳ ಉದ್ಧಟತನಕ್ಕೆ ದಿಟ್ಟ ಪ್ರತಿಕ್ರಿಯೆ! ಹೈಕಮಿಷನ್ ಕಟ್ಟಡದಲ್ಲಿ ಮತ್ತೆ ಹಾರಾಡಿದ ಬೃಹತ್ 'ತಿರಂಗಾ'
ಭಾರತದಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ, ವಾರಿಸ್ ಪಂಬಾಬ್ ಸಂಘಟನೆಯ ಮುಖ್ಯಸ್ಥ ಅಮೃತ್ ಪಾಲ್ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಬ್ರಿಟನ್ನಲ್ಲಿರುವ ಭಾರತೀಯ ಹೈಕಮಿಷನ್‌ನ ಹೊರಗೆ ಶಂಕಿತ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಸೋಮವಾರ ನಡೆದ ಪ್ರತಿಭಟನೆ ಸಮಯದಲ್ಲಿ ಹೈಕಮಿಷನ್ ಕಟ್ಟಡದ ಮೇಲಿದ್ದ ತ್ರಿವರ್ಣ ಧ್ವಜ ಕೆಳಗಡೆ ಇಳಿದಿದ್ದರು. ಅಲ್ಲದೇ, ಖಲಿಸ್ತಾನ್ ಧ್ವಜವನ್ನು ಹಾರಿಸುವ ಪ್ರಯತ್ನವನ್ನು ಪ್ರತಿಭಟನಾಕಾರರು ಮಾಡಿದ್ದರು. ಈ ಬಗ್ಗೆ ಭಾರತದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಭಾರತದ ಖಂಡನೆ: ಭಾರತದ ಪ್ರತಿಭಟನೆ ನಂತರ ಲಂಡನ್‌ನ ಭಾರತೀಯ ಹೈಕಮಿಷನ್ ಇರುವ ಆಲ್ಡ್‌ವಿಚ್ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಮೆಟ್ರೋಪಾಲಿಟನ್ ಪೊಲೀಸ್ ವ್ಯಾನ್‌ಗಳನ್ನು ನಿಲ್ಲಿಸಲಾಗಿದೆ. ಅಲ್ಲದೇ, ಪೊಲೀಸ್ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಹೀಗಾಗಿ ಶಂಕಿತ ಖಲಿಸ್ತಾನ್ ಉಗ್ರಗಾಮಿ ಮತ್ತು ಪ್ರತ್ಯೇಕತಾವಾದಿಗಳು ಪ್ರತಿಭಟನೆಯು ಈ ಬಾರಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟಿ ಬರಲು ಸಾಧ್ಯವಾಗಲಿಲ್ಲ. ಇದರ ನಡುವೆ ಬುಧವಾರ ನವದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್‌ನ ಹೊರಗಿನ ಬ್ಯಾರಿಕೇಡ್‌ಗಳನ್ನು ಕೇಂದ್ರ ಸರ್ಕಾರ ತೆಗೆದು ಹಾಕಿಸಿದೆ.
-
#WATCH | London Metropolitan Police patrols outside the Indian High Commission in London, UK. pic.twitter.com/rCId56lmdW
— ANI (@ANI) March 22, 2023 " class="align-text-top noRightClick twitterSection" data="
">#WATCH | London Metropolitan Police patrols outside the Indian High Commission in London, UK. pic.twitter.com/rCId56lmdW
— ANI (@ANI) March 22, 2023#WATCH | London Metropolitan Police patrols outside the Indian High Commission in London, UK. pic.twitter.com/rCId56lmdW
— ANI (@ANI) March 22, 2023
ಸೋಮವಾರ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಭಾರತೀಯ ಹೈಕಮಿಷನ್ ಬಳಿ ನಡೆದ ಘಟನೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ಬ್ರಿಟನ್ ಹಿರಿಯ ರಾಜತಾಂತ್ರಿಕರನ್ನು ಭಾನುವಾರ ರಾತ್ರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕರೆಸಿಕೊಂಡಿತ್ತು. ಶಂಕಿತ ಖಲಿಸ್ತಾನ್ ಪರವಾದ ಪ್ರತಿಭಟನಾಕಾರರಿಗೆ ಹೈಕಮಿಷನ್ ಆವರಣವನ್ನು ಪ್ರವೇಶಿಸಲು ಅನುಮತಿ ನೀಡಿದ ಬ್ರಿಟಿಷ್ ಭದ್ರತೆಯ ಲೋಪದ ವಿವರಣೆಯನ್ನು ಕೋರಲಾಗಿತ್ತು.
ಇದನ್ನೂ ಓದಿ: ಲಂಡನ್ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ತ್ರಿವರ್ಣ ಧ್ವಜ ಕೆಳಗಿಳಿಸಿ ಖಲಿಸ್ತಾನಿಗಳ ಅಟ್ಟಹಾಸ!
ಬ್ರಿಟನ್ಯಲ್ಲಿರುವ ಭಾರತೀಯ ರಾಜತಾಂತ್ರಿಕ ಆವರಣ ಮತ್ತು ಸಿಬ್ಬಂದಿ ಭದ್ರತೆಗೆ ಯುಕೆ ಸರ್ಕಾರದ ಉದಾಸೀನತೆಯನ್ನು ಭಾರತವು ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸುತ್ತದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದ್ದರು. ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಟ್ವೀಟ್ ಮಾಡಿ, ಭಾರತದ ಹೈಕಮಿಷನ್ ವಿರುದ್ಧ ನಡೆದ ಅವಮಾನಕರ ಕೃತ್ಯಗಳನ್ನು ನಾನು ಖಂಡಿಸುತ್ತೇನೆ. ಇದು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದಿದ್ದರು. ಇದರ ನಂತರ ಲಂಡನ್‌ನ ಆಲ್ಡ್‌ವಿಚ್ ಪ್ರದೇಶದ ಇಂಡಿಯಾ ಹೌಸ್ ಮೇಲೆ ಭಾರತದ ಬೃಹತ್ ತ್ರಿವರ್ಣ ಧ್ವಜವನ್ನು ಹಾಕಲಾಗಿದೆ.
ಪಂಜಾಬ್ನಲ್ಲಿ ನಾಲ್ವರು ಕೋರ್ಟ್ಗೆ ಹಾಜರು: ಮತ್ತೊಂದೆಡೆ, ವಾರಿಸ್ ಪಂಜಾಬ್ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್ ಬ್ರೆಝಾ ಕಾರಿನಲ್ಲಿ ಪರಾರಿಯಾಗಲು ಸಹಾಯ ಮಾಡಿದ ನಾಲ್ವರನ್ನು ಪೊಲೀಸರು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಮನ್‌ಪ್ರೀತ್, ಗುರುದೀಪ್, ಹರ್‌ಪ್ರೀತ್ ಮತ್ತು ಗುರ್ಪೇಜ್ ಎಂಬುವವರೇ ಬಂಧಿತರಾಗಿದ್ದು, ಇವರನ್ನು ಜಲಂಧರ್‌ನ ಶಾಕೋಟ್ ಪೊಲೀಸ್ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಇದನ್ನೂ ಓದಿ: ನವದೆಹಲಿಯ ಬ್ರಿಟಿಷ್ ಹೈಕಮಿಷನ್ ಕಚೇರಿಗೆ ಅಳವಡಿಸಿದ್ದ ಭದ್ರತಾ ಬ್ಯಾರಿಕೇಡ್‌ಗಳ ತೆರವು