ETV Bharat / international

ಸುಡಾನ್ ಸಂಘರ್ಷ: 72 ಗಂಟೆಗಳ ಕದನವಿರಾಮ ಜಾರಿ

author img

By

Published : Apr 25, 2023, 12:38 PM IST

ಸುಡಾನ್​ನಲ್ಲಿ ಯುದ್ಧನಿರತವಾಗಿರುವ ಸಶಸ್ತ್ರ ಸೇನಾಪಡೆಗಳು ಕೊನೆಗೂ ಯುದ್ಧವಿರಾಮಕ್ಕೆ ಒಪ್ಪಿಕೊಂಡಿವೆ. ಸೌದಿ ಅರೇಬಿಯಾ ಹಾಗೂ ಅಮೆರಿಕಗಳ ಮಧ್ಯಸ್ಥಿಕೆಯಿಂದ 72 ಗಂಟೆಗಳ ಕದನವಿರಾಮ ಜಾರಿಗೆ ಬಂದಿದೆ.

Sudan crisis: Warring factions agree to 72-hour ceasefire

ಖಾರ್ಟೂಮ್ (ಸುಡಾನ್) : ಸುಡಾನ್​ನಲ್ಲಿ ಅಧಿಕಾರಕ್ಕಾಗಿ ಸಂಘರ್ಷ ನಡೆಸುತ್ತಿರುವ ಎರಡೂ ಸಶಸ್ತ್ರ ಪಡೆಗಳು 72 ಗಂಟೆಗಳ ಯುದ್ಧವಿರಾಮಕ್ಕೆ ಒಪ್ಪೊಕೊಂಡಿವೆ. ಸೋಮವಾರ ಅಮೆರಿಕ ಮತ್ತು ಸೌದಿ ಅರೇಬಿಯಾ ದೇಶಗಳ ಮಧ್ಯಸ್ಥಿಕೆಯಿಂದ ಕದನವಿರಾಮ ಸಾಧ್ಯವಾಗಿದೆ. ಸುಡಾನ್​ನಲ್ಲಿ ನಡೆದಿರುವ ಭೀಕರ ಸಂಘರ್ಷದ ಮಧ್ಯೆ ವಿಶ್ವದ ಹಲವಾರು ರಾಷ್ಟ್ರಗಳು ತಮ್ಮ ನಾಗರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿರುವುದು ಗಮನಾರ್ಹ. "ನಿರಂತರವಾದ ಮಾತುಕತೆಗಳ ನಂತರ, ಏಪ್ರಿಲ್ 24 ರ ಮಧ್ಯರಾತ್ರಿಯಿಂದ 72 ಗಂಟೆಗಳ ರಾಷ್ಟ್ರವ್ಯಾಪಿ ಕದನ ವಿರಾಮವನ್ನು ಜಾರಿಗೆ ತರಲು ಮತ್ತು ಅದನ್ನು ಪಾಲಿಸಲು SAF ಮತ್ತು RSF ಒಪ್ಪಿಕೊಂಡಿವೆ. ಮಾನವೀಯ ಬಿಕ್ಕಟ್ಟನ್ನು ಕೊನೆಗಾಣಿಸಲು ಎರಡೂ ಬಣಗಳು ಕದನವಿರಾಮಕ್ಕೆ ಒಪ್ಪಿಕೊಂಡಿರುವುದನ್ನು ನಾವು ಸ್ವಾಗತಿಸುತ್ತೇವೆ" ಎಂದು ಯುಎಸ್ ಸ್ಟೇಟ್ ಸೆಕ್ರೆಟರಿ ಆಂಟೋನಿ ಬ್ಲಿಂಕೆನ್ ಟ್ವೀಟ್ ಮಾಡಿದ್ದಾರೆ.

ಕದನವಿರಾಮ ಜಾರಿಗೆ ತರಲು ಯುಎಸ್ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆ ವಹಿಸಿವೆ ಎಂದು ಸುಡಾನ್ ಸಶಸ್ತ್ರ ಪಡೆ (SAF) ಹೇಳಿದೆ. ಕದನವಿರಾಮ ಸ್ಥಳೀಯ ಸಮಯ ಮಧ್ಯರಾತ್ರಿ (22:00 GMT ಸೋಮವಾರ) ಪ್ರಾರಂಭವಾಗಲಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸೋಮವಾರ ಆರ್​ಎಸ್​ಎಫ್​ ಜಾರಿ ಮಾಡಿದ ಲಿಖಿತ ಹೇಳಿಕೆಯಲ್ಲಿ, ಮಾನವೀಯ ಕಾರಿಡಾರ್‌ಗಳನ್ನು ತೆರೆಯಲು, ನಾಗರಿಕರು ಮತ್ತು ನಿವಾಸಿಗಳ ಸಂಚಾರವನ್ನು ಸುಗಮಗೊಳಿಸಲು, ಅವರ ಅಗತ್ಯಗಳನ್ನು ಪೂರೈಸಲು, ಆಸ್ಪತ್ರೆಗಳು ಮತ್ತು ಸುರಕ್ಷಿತ ಪ್ರದೇಶಗಳನ್ನು ತಲುಪಲು ಮತ್ತು ರಾಜತಾಂತ್ರಿಕ ಕಾರ್ಯಗಳನ್ನು ಸ್ಥಳಾಂತರಿಸಲು ಕದನವಿರಾಮಕ್ಕೆ ತಾನು ಒಪ್ಪಿಕೊಂಡಿದ್ದೇನೆ ಎಂದು ಹೇಳಿದೆ.

ಈ ಹಿಂದೆ ಒಪ್ಪಿದ್ದ ಕದನ ವಿರಾಮಗಳು ಮುರಿದು ಬಿದ್ದಿವೆ. ಈಗ ಹೊಸದಾಗಿ ಮೂರು ದಿನಗಳ ಕಾಲ ಹೋರಾಟವನ್ನು ನಿಲ್ಲಿಸಿದರೆ, ಅಗತ್ಯವಿರುವವರಿಗೆ ಆಹಾರ ಮತ್ತು ವೈದ್ಯಕೀಯ ಸರಬರಾಜುಗಳಂತಹ ಹೆಚ್ಚು ಅಗತ್ಯವಿರುವ ಸಂಪನ್ಮೂಲಗಳನ್ನು ಪಡೆಯಲು ಅವಕಾಶ ನೀಡುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕದನ ವಿರಾಮದಿಂದ ವಿದೇಶಿಯರನ್ನು ಯಶಸ್ವಿಯಾಗಿ ಸ್ಥಳಾಂತರಿಸಲು ಅನುಕೂಲವಾಗುತ್ತದೆ. ಸ್ಪೇನ್, ಜೋರ್ಡಾನ್, ಇಟಲಿ, ಫ್ರಾನ್ಸ್, ಡೆನ್ಮಾರ್ಕ್ ಮತ್ತು ಜರ್ಮನಿ ಸೇರಿದಂತೆ ಕೆಲವು ದೇಶಗಳು ಈಗಾಗಲೇ ತಮ್ಮ ನಾಗರಿಕರನ್ನು ಯಶಸ್ವಿಯಾಗಿ ಸ್ಥಳಾಂತರಿಸಿವೆ. ಯುನೈಟೆಡ್ ಕಿಂಗ್‌ಡಮ್ ರಾಯಭಾರ ಕಚೇರಿ ಸಿಬ್ಬಂದಿಯನ್ನು ಸ್ಥಳಾಂತರಿಸಿದೆ. ಅಮೆರಿಕ ಕೂಡ ತನ್ನ ಎಲ್ಲ ಸಿಬ್ಬಂದಿಯನ್ನು ಸ್ಥಳಾಂತರಿಸಿದ್ದು, ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಿದೆ.

ಸೌದಿ ಅರೇಬಿಯಾ ತನ್ನ 10 ಸೌದಿ ಪ್ರಜೆಗಳು ಮತ್ತು ಅಮೆರಿಕನ್ನರು ಸೇರಿದಂತೆ 189 ವಿದೇಶಿಯರನ್ನು ಸುಡಾನ್‌ನಿಂದ ಸ್ಥಳಾಂತರಿಸಿದೆ ಎಂದು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯ ಹೇಳಿದೆ. ಏಪ್ರಿಲ್ 15 ರಂದು ಸುಡಾನ್ ಸೇನೆ ಮತ್ತು ಆರ್‌ಎಸ್‌ಎಫ್ ಅರೆಸೈನಿಕ ಗುಂಪಿನ ನಡುವೆ ಹೋರಾಟ ಆರಂಭವಾಗಿದ್ದು, ಹಿಂಸಾಚಾರದಲ್ಲಿ ಈವರೆಗೆ ಕನಿಷ್ಠ 427 ಜನ ಸಾವಿಗೀಡಾಗಿದ್ದಾರೆ. ಯುದ್ಧದಿಂದ ಹಲವಾರು ಆಸ್ಪತ್ರೆಗಳು ಹಾನಿಗೀಡಾಗಿವೆ. ರಾಜಧಾನಿ ಖಾರ್ಟೂಮ್‌ನಲ್ಲಿ ಲಕ್ಷಾಂತರ ಜನ ತಮ್ಮ ಮನೆಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಲಕ್ಷಾಂತರ ನಾಗರಿಕರು ಆಹಾರ ಮತ್ತು ನೀರಿನ ಕೊರತೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಔಷಧ ಹಾಗೂ ಇತರ ತುರ್ತುಸೇವೆಗಳಿಗಾಗಿ ನಾಗರಿಕರು ಪರದಾಡುತ್ತಿದ್ದಾರೆ.

ಇದನ್ನೂ ಓದಿ: ಸುಡಾನ್ ಸಂಘರ್ಷ: 413 ಸಾವು, 3,551ಕ್ಕೂ ಹೆಚ್ಚು ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.