ETV Bharat / international

ಸುಡಾನ್​: ಸಂಪೂರ್ಣ ಕದನವಿರಾಮಕ್ಕೆ ಒಪ್ಪದ ಸೇನಾ ಮುಖ್ಯಸ್ಥರು, ವಿನಾಶದತ್ತ ದೇಶ

ಸದ್ಯ ಸುಡಾನ್​ನಲ್ಲಿ ತಾತ್ಕಾಲಿಕ ಯುದ್ಧವಿರಾಮ ಜಾರಿಯಲ್ಲಿದೆ. ಆದರೆ ಸಂಪೂರ್ಣ ಯುದ್ಧವಿರಾಮಕ್ಕೆ ಇಬ್ಬರೂ ಸೇನಾ ಜನರಲ್​ಗಳು ಒಪ್ಪುತ್ತಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.

Sudan's warring military leaders not ready for complete ceasefire: UN envoy

author img

By

Published : Apr 26, 2023, 12:16 PM IST

ವಿಶ್ವಸಂಸ್ಥೆ : ಉತ್ತರ ಆಫ್ರಿಕಾದ ಸುಡಾನ್​ ದೇಶದಲ್ಲಿ ಯುದ್ಧನಿರತವಾಗಿರುವ ಸುಡಾನ್ ಸಶಸ್ತ್ರ ಸೇನಾಪಡೆ ಮತ್ತು ಸುಡಾನ್​ ಕ್ಷಿಪ್ರ ಬೆಂಬಲ ಪಡೆ ಈ ಎರಡೂ ಗುಂಪುಗಳ ನಾಯಕರು ಸಂಪೂರ್ಣ ಯುದ್ಧವಿರಾಮಕ್ಕೆ ಒಪ್ಪುತ್ತಿಲ್ಲ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. "ಇಬ್ಬರೂ ನಾಯಕರು ಸಂಪೂರ್ಣ ಕದನ ವಿರಾಮಕ್ಕೆ ಸಂಪೂರ್ಣವಾಗಿ ಬದ್ಧರಾಗಲು ಅಥವಾ ಯುದ್ಧ ವಿರಾಮ ಜಾರಿಗೆ ತರಲು ಒಮ್ಮತಕ್ಕೆ ಬರುತ್ತಿಲ್ಲ. ಇಬ್ಬರೂ ಸೇನಾ ಜನರಲ್‌ಗಳು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ದೇಶದ ಪ್ರಮುಖ ನೆಲೆಗಳ ಮೇಲೆ ತಾವು ಅಧಿಕಾರ ಸ್ಥಾಪಿಸಿರುವುದಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಅವರ ವಿಶೇಷ ಪ್ರತಿನಿಧಿ ಮತ್ತು ಸುಡಾನ್​ನಲ್ಲಿ ವಿಶ್ವಸಂಸ್ಥೆಯ ಇಂಟಿಗ್ರೇಟೆಡ್ ಟ್ರಾನ್ಸಿಶನ್ ಅಸಿಸ್ಟೆನ್ಸ್ ಮಿಷನ್ ಮುಖ್ಯಸ್ಥ ವೋಲ್ಕರ್ ಪರ್ಥೆಸ್ ಹೇಳಿದರು.

ಇಬ್ಬರು ಸೇನಾ ಜನರಲ್​ಗಳಾದ ಎಸ್​ಎಎಫ್​​ ಮುಖ್ಯಸ್ಥ ಅಬ್ದೆಲ್ ಫತ್ತಾಹ್ ಅಲ್ ಬುರ್ಹಾನ್ ಮತ್ತು ಇವರ ಕೆಳಹಂತದ ನಾಯಕ ಜನರಲ್ ಮೊಹಮ್ಮದ್ ಹಮ್ದಾನ್ ದಗಾಲೊ (ಇವರು ಹೆಮೆಟಟಿ ಎಂದು ಪ್ರಖ್ಯಾತರು) ಎಪ್ರಿಲ್ 15 ರಂದು ಪ್ರಥಮ ಬಾರಿಗೆ ಆರಂಭವಾದ ಹಿಂಸಾಚಾರದ ಕೇಂದ್ರಬಿಂದುವಾಗಿದ್ದಾರೆ. ಇತ್ತೀಚಿನ ಸಂಘರ್ಷದಲ್ಲಿ ಇದುವರೆಗೆ ಕನಿಷ್ಠ 459 ಜನರು ಸಾವನ್ನಪ್ಪಿದ್ದಾರೆ, 4,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇಷ್ಟಾದರೂ ಇಬ್ಬರೂ ಸೇನಾ ನಾಯಕರು ಯುದ್ಧ ನಿಲ್ಲಿಸಲು ಗಂಭೀರ ಮಾತುಕತೆಗೆ ಸಿದ್ಧವಾಗಿರುವ ಬಗ್ಗೆ ಯಾವುದೇ ಮುನ್ಸೂಚನೆ ನೀಡುತ್ತಿಲ್ಲ. ಪರಸ್ಪರರ ಮೇಲೆ ವಿಜಯ ಸಾಧಿಸುವ ವಿಶ್ವಾಸವನ್ನು ಇಬ್ಬರೂ ಹೊಂದಿದ್ದಾರೆ ಎಂದು ವೋಲ್ಕರ್ ಪರ್ಥೆಸ್ ಹೇಳಿದರು. ಕೆಂಪು ಸಮುದ್ರದ ಪೋರ್ಟ್​ ಸುಡಾನ್​ನಿಂದ ವಿಡಿಯೋ ಲಿಂಕ್ ಮೂಲಕ ಅವರು ಮಾತನಾಡಿದರು. 744 ವಿಶ್ವಸಂಸ್ಥೆಯ ಸಿಬ್ಬಂದಿ ಮತ್ತು ಅವರ ಅವಲಂಬಿತರು, ಅಂತರರಾಷ್ಟ್ರೀಯ ಎನ್‌ಜಿಒ ಸಿಬ್ಬಂದಿ ಮತ್ತು ಹಲವಾರು ರಾಯಭಾರ ಕಚೇರಿಗಳ ರಾಜತಾಂತ್ರಿಕ ಉದ್ಯೋಗಿಗಳು ಸೇರಿದಂತೆ ಸುಮಾರು 1,200 ಜನರನ್ನು ಖಾರ್ಟೂಮ್‌ನಿಂದ ಸ್ಥಳಾಂತರಿಸಿ ಅವರಿಗೆ ಇದೇ ಜಾಗದಲ್ಲಿ ಆಶ್ರಯ ನೀಡಲಾಗಿದೆ.

ಎರಡೂ ಸೇನಾಪಡೆಗಳು ತಪ್ಪು ಲೆಕ್ಕಾಚಾರದಲ್ಲಿ ಮುಳುಗಿವೆ. ಹೋರಾಟವು ಮುಂದುವರಿದಂತೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಹಾಳಾಗಲಿದೆ. ಅಧಿಕಾರ ಮತ್ತು ಹಿಡಿತ ಸಂಪೂರ್ಣ ಚದುರಿ ಹೋಗಲಿದೆ. ಇದರಿಂದ ಸುಡಾನ್ ಮತ್ತಷ್ಟು ದುರ್ಬಲವಾಗುತ್ತ ಹೋಗಬಹುದು. ಇದು ಪ್ರದೇಶದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಯುದ್ಧದಲ್ಲಿ ಯಾವುದೇ ಗುಂಪು ಗೆದ್ದರೂ ಕೊನೆಯಲ್ಲಿ ಸುಡಾನ್ ಮಾತ್ರ ವಿನಾಶವಾಗಲಿದೆ ಎಂದು ಅವರು ತಿಳಿಸಿದರು. ಅಮೆರಿಕದ ಮಧ್ಯಸ್ಥಿಕೆಯಿಂದ ಪ್ರಸ್ತುತ ಸ್ಥಾಪಿಸಲ್ಪಟ್ಟಿರುವ 72 ಗಂಟೆಗಳ ಕದನ ವಿರಾಮವು ಸುಡಾನ್‌ನ ಕೆಲವು ಭಾಗಗಳಲ್ಲಿ ಪರಿಣಾಮಕಾರಿಯಾಗಿ ಜಾರಿಯಲ್ಲಿರುವಂತೆ ಕಾಣಿಸುತ್ತಿದೆ. ಆದಾಗ್ಯೂ, ಕದನ ವಿರಾಮವನ್ನು ಉಲ್ಲಂಘಿಸಿ SAF ಮತ್ತು RSF ಸೈನಿಕರ ಹೋರಾಟ ನಡೆದ ಬಗ್ಗೆ ವರದಿಗಳು ಬಂದಿವೆ.

ಮನೆಗಳು, ಅಂಗಡಿಗಳು, ಶಾಲೆಗಳು, ನೀರು ಮತ್ತು ವಿದ್ಯುತ್ ಸ್ಥಾಪನೆಗಳು, ಮಸೀದಿಗಳು, ಆಸ್ಪತ್ರೆಗಳು ಮತ್ತು ಇತರ ಆರೋಗ್ಯ ಸೌಲಭ್ಯಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ. ಮನೆಗಳ ಮೇಲೆ ಆಕ್ರಮಣಗಳು ನಡೆಯುತ್ತಿವೆ. ಇನ್ನು ಕೆಲವೆಡೆ ಮನೆಗಳು, ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ. ಹಾಗೆಯೇ ಕೆಲ ಚೆಕ್‌ಪೋಸ್ಟ್‌ಗಳಲ್ಲಿ ಕಾರುಗಳನ್ನು ಲೂಟಿ ಮಾಡಲಾಗುತ್ತಿದೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ : ಮತ್ತೊಮ್ಮೆ ಅಮೆರಿಕ​ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವೆ: ಜೋ ಬೈಡನ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.