ETV Bharat / international

ಪಾಕಿಸ್ತಾನಕ್ಕೆ ರಕ್ಷಣಾ ಧನಸಹಾಯ ನಿಲ್ಲಿಸಿ; ಬೈಡನ್ ಆಡಳಿತಕ್ಕೆ ಯುಎಸ್ ಸಂಸದರ ಒತ್ತಾಯ - ಧರ್ಮನಿಂದನೆ ಕಾನೂನನ್ನು ಮತ್ತಷ್ಟು ಬಲಪಡಿಸುವ

ಪಾಕಿಸ್ತಾನಕ್ಕೆ ನೀಡಲಾಗುತ್ತಿರುವ ರಕ್ಷಣಾ ಸಹಾಯ ನಿಲ್ಲಿಸುವಂತೆ ಅಮೆರಿಕ ಸರ್ಕಾರಕ್ಕೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದಾರೆ.

US lawmakers ask Biden administration to withhold assistance to Pakistan

author img

By ETV Bharat Karnataka Team

Published : Nov 19, 2023, 2:35 PM IST

ವಾಶಿಂಗ್ಟನ್ : ಪಾಕಿಸ್ತಾನಕ್ಕೆ ನೀಡಲಾಗುತ್ತಿರುವ ಧನಸಹಾಯವನ್ನು ತಡೆಹಿಡಿಯುವಂತೆ ಯುಎಸ್ ಕಾಂಗ್ರೆಸ್​ನ ಹನ್ನೊಂದು ಸದಸ್ಯರು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರಿಗೆ ಬರೆದ ಪತ್ರದಲ್ಲಿ ಬೈಡನ್ ಆಡಳಿತವನ್ನು ಒತ್ತಾಯಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆದು ಅಲ್ಲಿ ಸಾಂವಿಧಾನಿಕ ಸುವ್ಯವಸ್ಥೆ ಪುನಃಸ್ಥಾಪನೆಯಾಗುವವರೆಗೆ ಭವಿಷ್ಯದ ಯುಎಸ್ ಸಹಾಯವನ್ನು ತಡೆಹಿಡಿಯುವಂತೆ ಯುಎಸ್​ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದ್ದಾರೆ.

ಅಮೆರಿಕ ನೀಡುತ್ತಿರುವ ಭದ್ರತಾ ನೆರವು ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿದೆಯೇ ಎಂಬುದನ್ನು ನಿರ್ಣಯಿಸಲು "ಲೇಹಿ ಕಾನೂನುಗಳು" (Leahy Laws) ಮತ್ತು ವಿದೇಶಿ ನೆರವು ಕಾಯ್ದೆಯ ಸೆಕ್ಷನ್ 502 (ಬಿ) ಅಡಿಯಲ್ಲಿ ಕಾನೂನು ಅಭಿಪ್ರಾಯವನ್ನು ಸಂಸದರು ವಿದೇಶಾಂಗ ಇಲಾಖೆಯಿಂದ ಕೋರಿದ್ದಾರೆ ಎಂದು ಡಾನ್ ವರದಿ ಮಾಡಿದೆ.

"ಎಲ್ಲಾ ಪಕ್ಷಗಳು ಮುಕ್ತವಾಗಿ ಭಾಗವಹಿಸಲು ಸಾಧ್ಯವಾಗುವ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದು ಸೇರಿದಂತೆ ಸಾಂವಿಧಾನಿಕ ಕ್ರಮವನ್ನು ಪುನಃಸ್ಥಾಪಿಸುವತ್ತ ಪಾಕಿಸ್ತಾನ ನಿರ್ಣಾಯಕವಾಗಿ ಸಾಗುವವರೆಗೆ ಭವಿಷ್ಯದ ಭದ್ರತಾ ಸಹಾಯವನ್ನು ತಡೆಹಿಡಿಯಬೇಕೆಂದು ನಾವು ವಿನಂತಿಸುತ್ತೇವೆ" ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಧರ್ಮನಿಂದನೆ ಕಾನೂನನ್ನು ಮತ್ತಷ್ಟು ಬಲಪಡಿಸುವ ಪಾಕಿಸ್ತಾನದ ಕ್ರಮವನ್ನು ಪತ್ರದಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಧರ್ಮನಿಂದನೆ ಕಾನೂನು ಬಲವಾಗುವುದರಿಂದ ಸಣ್ಣ ಧಾರ್ಮಿಕ ಗುಂಪುಗಳು ಮತ್ತು ಅಲ್ಪಸಂಖ್ಯಾತರ ಸುತ್ತಲಿನ ಹಿಡಿತ ಮತ್ತಷ್ಟು ಬಿಗಿಯಾಗಲಿದೆ ಎಂದು ಕಾರ್ಯದರ್ಶಿ ಬ್ಲಿಂಕೆನ್ ಅವರಿಗೆ ಕಾಂಗ್ರೆಸ್​ ಸದಸ್ಯರು ಹೇಳಿದ್ದಾರೆ ಎಂದು ಡಾನ್ ವರದಿ ಮಾಡಿದೆ.

"ಧಾರ್ಮಿಕ ಅಲ್ಪಸಂಖ್ಯಾತರನ್ನು ಹಿಂಸಿಸಲು ಐತಿಹಾಸಿಕವಾಗಿ ಬಳಸಲಾಗುವ ಅಸ್ತಿತ್ವದಲ್ಲಿರುವ ಧರ್ಮನಿಂದೆಯ ಕಾನೂನನ್ನು ಬಲಪಡಿಸುವ ಕ್ರಿಮಿನಲ್ ಕಾನೂನು (ತಿದ್ದುಪಡಿ) ಮಸೂದೆ, 2023 ಅನ್ನು ಅಂಗೀಕರಿಸುವ ಬಗ್ಗೆ ನಾವು ತೀವ್ರ ಆತಂಕ ಹೊಂದಿದ್ದೇವೆ" ಎಂದು ಸಂಸದರು ಬರೆದಿದ್ದಾರೆ. ರಾಷ್ಟ್ರಪತಿಗಳು ಇನ್ನೂ ಸಹಿ ಹಾಕದ ಮಸೂದೆಯನ್ನು ಸಮಗ್ರ ಸಂಸದೀಯ ಕಾರ್ಯವಿಧಾನಕ್ಕೆ ಒಳಪಡಿಸಬೇಕೆಂದು ಪಾಕಿಸ್ತಾನದ ಅನೇಕ ಜನಪ್ರತಿನಿಧಿಗಳು ಪದೇ ಪದೇ ಕರೆ ನೀಡಿದ ಹೊರತಾಗಿಯೂ ಅದನ್ನು ಅವಸರದಲ್ಲಿ ಅಂಗೀಕರಿಸಲಾಗಿದೆ ಎಂದು ಅವರು ಗಮನಸೆಳೆದಿದ್ದಾರೆ.

ಮಸೂದೆಯನ್ನು ಅಂಗೀಕರಿಸಿದ ಎಂಟು ದಿನಗಳ ನಂತರ, ಆಗಸ್ಟ್ 16 ರಂದು ಜನರ ಗುಂಪೊಂದು ಚರ್ಚ್​ಗಳ ಮೇಲೆ ದಾಳಿ ಮಾಡಿತ್ತು ಮತ್ತು ಜರನ್ವಾಲಾದಲ್ಲಿನ ಕ್ರಿಶ್ಚಿಯನ್ನರ ಮನೆಗಳಿಗೆ ಬೆಂಕಿ ಹಚ್ಚಿತು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಗಿಲ್ಗಿಟ್-ಬಾಲ್ಟಿಸ್ತಾನದ ಶಿಯಾ ಸಮುದಾಯ ಸೇರಿದಂತೆ ಮಸೂದೆಯ ವಿರುದ್ಧ ನಡೆದ ಪ್ರತಿಭಟನೆಗಳನ್ನು ಅದು ಉಲ್ಲೇಖಿಸಿದೆ ಎಂದು ಡಾನ್ ವರದಿ ಮಾಡಿದೆ. "ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳ ವ್ಯಾಪಕವಾಗಿದೆ ಮತ್ತು ಈ ಮಸೂದೆಯು ಕಾನೂನಾಗಿ ಮಾರ್ಪಟ್ಟರೆ ಧಾರ್ಮಿಕ ಮತ್ತು ನಂಬಿಕೆಯ ಸ್ವಾತಂತ್ರ್ಯದ ಮೇಲೆ ಹೇರಲಾಗುವ ನಿರ್ಬಂಧಗಳ ಬಗ್ಗೆ ನಾವು ಚಿಂತಿತರಾಗಿದ್ದೇವೆ" ಎಂದು ಸಂಸದರು ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಯಹೂದಿ ವಿರೋಧಿ ನಿಲುವು ತಳೆದರಾ ಎಲೋನ್ ಮಸ್ಕ್? ಅಮೆರಿಕ ಆಕ್ರೋಶಗೊಂಡಿದ್ದೇಕೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.