ETV Bharat / international

ಯೆಮೆನ್​ನಲ್ಲಿ ಹಣಕಾಸಿನ ನೆರವು ವಿತರಣೆ ಕಾರ್ಯಕ್ರಮದಲ್ಲಿ ಕಾಲ್ತುಳಿತ: 78 ಮಂದಿ ಸಾವು

ಯೆಮೆನ್​ ರಾಜಧಾನಿ ಸನಾದಲ್ಲಿ ಹಣಕಾಸಿನ ನೆರವು ವಿತರಿಸುವ ಕಾರ್ಯಕ್ರಮದಲ್ಲಿ ದುರಂತ ಸಂಭವಿಸಿದೆ. ಹೆಚ್ಚಿನ ಜನರು ಬಂದಿದ್ದರಿಂದ ಕಾಲ್ತುಳಿತ ಉಂಟಾಗಿ ಸಾವು ಸಂಭವಿಸಿದೆ.

ನೆರವು ವಿತರಣೆ ಕಾರ್ಯಕ್ರಮದಲ್ಲಿ ಕಾಲ್ತುಳಿತ
ನೆರವು ವಿತರಣೆ ಕಾರ್ಯಕ್ರಮದಲ್ಲಿ ಕಾಲ್ತುಳಿತ
author img

By

Published : Apr 20, 2023, 7:35 AM IST

ಯೆಮೆನ್: ಇಲ್ಲಿನ ಶಾಲೆಯೊಂದರಲ್ಲಿ ಹಣಕಾಸಿನ ನೆರವು ವಿತರಿಸುವ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಏಕಕಾಲಕ್ಕೆ ನುಗ್ಗಿದ್ದರಿಂದ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 78 ಮಂದಿ ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿರುವ ದುರ್ಘಟನೆ ನಿನ್ನೆ ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಬಂಡುಕೋರರ ಗುಂಪು ರಾಜಧಾನಿಯಲ್ಲಿ ಹಣಕಾಸಿನ ನೆರವು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದನ್ನರಿತ ಜನರು ಸಾಗರೋಪಾದಿಯಲ್ಲಿ ಮುತ್ತಿಗೆ ಹಾಕಿದರು. ಭಾರಿ ಸಮೂಹ ಸೇರಿದ್ದರಿಂದ ತಡೆಯುವಲ್ಲಿ ಆಯೋಜಕರು ವಿಫಲರಾಗಿದ್ದಾರೆ. ಜನರ ತಿಕ್ಕಾಟ ಹೆಚ್ಚಾಗಿ ನೆರವು ಪಡೆಯಲು ನಾಮುಂದು ತಾಮುಂದು ಎಂದು ಬಂದಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಘಟನೆಯಲ್ಲಿ 78 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬ್ಯಾಂಕ್ ಪಾಸ್‌ಬುಕ್‌ನಲ್ಲಿ ನಮೂದಾಗುವ ಮೊತ್ತವನ್ನು ವ್ಯಕ್ತಿಯ ಆದಾಯವೆಂದು ಪರಿಗಣಿಸಲಾಗದು: ಹೈಕೋರ್ಟ್

ಆಂತರಿಕ ಸಚಿವಾಲಯದ ಪ್ರಕಾರ, ಸನಾ ಮಧ್ಯಭಾಗದಲ್ಲಿರುವ ಓಲ್ಡ್ ಸಿಟಿಯಲ್ಲಿ ನೂರಾರು ಬಡ ವ್ಯಾಪಾರಿಗಳು ಕಾರ್ಯಕ್ರಮದಲ್ಲಿ ನೆರವು ಪಡೆಯಲು ಒಟ್ಟಿಗೆ ಜಮಾಯಿಸಿದ್ದರು. ನೆರವು ನೀಡಲು ಆಯೋಜನಕರು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಜನಸಮೂಹ ಒಂದೇ ಬಾರಿಗೆ ಸೇರಿದ್ದರಿಂದ ನೂಕಾಟ ನಡೆದಿದೆ. ಇದರಿಂದ ಭಾರಿ ದುರಂತ ಸಂಭವಿಸಿದೆ. ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡದೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ದುರಂತ ಜಾಗ ಸೀಲ್​: ಕಾಲ್ತುಳಿತಲ್ಲಿ ಗಾಯಗೊಂಡ ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸನಾದಲ್ಲಿನ ಹಿರಿಯ ಆರೋಗ್ಯ ಅಧಿಕಾರಿ ಮೊತಾಹೆರ್ ಅಲ್ ಮರೂನಿ ಅವರು ಜನರು ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸಿದರು. ದುರಂತದ ಬಳಿಕ ಕಾರ್ಯಕ್ರಮ ಆಯೋಜಿಸಿದ್ದ ಶಾಲೆಯನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡರು. ಪತ್ರಕರ್ತರು ಸೇರಿದಂತೆ ಜನರ ಪ್ರವೇಶವನ್ನು ನಿರಾಕರಿಸಲಾಗಿದೆ.

ಇದನ್ನೂ ಓದಿ: ಭವಾನಿ ರೇವಣ್ಣ, ಹೆಚ್ ಡಿ ದೇವೇಗೌಡ ಸೇರಿ 27 ಮಂದಿ ಸ್ಟಾರ್ ಪ್ರಚಾರಕರ ಹೆಸರು ಪ್ರಕಟಿಸಿದ ಜೆಡಿಎಸ್‌

ಪ್ರತ್ಯಕ್ಷದರ್ಶಿಗಳಾದ ಅಬ್ದೆಲ್ ರೆಹಮಾನ್ ಅಹ್ಮದ್ ಮತ್ತು ಯಾಹಿಯಾ ಮೊಹ್ಸೆನ್ ಹೇಳುವಂತೆ, ಬಂಡುಕೋರ ಹೌತಿಗಳ ಗುಂಪು ಕಾರ್ಯಕ್ರಮದಲ್ಲಿ ನೂರಾರು ಜನರನ್ನು ನಿಯಂತ್ರಿಸುವಲ್ಲಿ ಸೋತರು. ಇದರಿಂದ ರೊಚ್ಚಿಗೆದ್ದ ಶಸ್ತ್ರಸಜ್ಜಿತ ಹೌತಿಗಳು ಗಾಳಿಯಲ್ಲಿ ಗುಂಡು ಹಾರಿಸಿದರು. ಗುಂಡುಗಳು ವಿದ್ಯುತ್ ತಂತಿಗೆ ಬಡಿದು ಅವು ಸ್ಫೋಟಗೊಳ್ಳಲು ಕಾರಣವಾಯಿತು. ಅದು ಗಾಬರಿಯನ್ನು ಹುಟ್ಟುಹಾಕಿತು. ಜನರು ಅಲ್ಲಿಂದ ಕಾಲ್ಕಿಳಲು ಶುರು ಮಾಡಿದರು. ಇದರಿಂದ ಕಾಲ್ತುಳಿತ ಉಂಟಾಯಿತು ಎಂದು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಹೌತಿಗಳ ಗುಂಪಿನ ಇಬ್ಬರನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಹೇಳಿದೆ. ಯೆಮೆನ್‌ನ ರಾಜಧಾನಿಯನ್ನು ಇರಾನ್ ಬೆಂಬಲಿತ ಹೌತಿಗಳು ನಿಯಂತ್ರಣಕ್ಕೆ ಪಡೆದಿದ್ದಾರೆ. 2014 ರಲ್ಲಿ ಸರ್ಕಾರದ ಹಿಡಿತದಿಂದ ದೇಶವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು.

ಇತ್ತೀಚಿನ ವರ್ಷಗಳಲ್ಲಿ ಈ ಸಂಘರ್ಷವು ಸೌದಿ ಅರೇಬಿಯಾ ಮತ್ತು ಇರಾನ್ ನಡುವಿನ ಶೀತಲ ಸಮರವಾಗಿ ಮಾರ್ಪಟ್ಟಿದೆ. ಈವರೆಗಿನ ಯುದ್ಧದಲ್ಲಿ ಹೋರಾಟಗಾರರು ಮತ್ತು ನಾಗರಿಕರು ಸೇರಿದಂತೆ 1,50,000 ಕ್ಕೂ ಹೆಚ್ಚು ಜನರು ಹತರಾಗಿದ್ದಾರೆ.

ಇದನ್ನೂ ಓದಿ: ಭೂಮಿಗೆ ಅಪ್ಪಳಿಸಲಿದೆ ನಿಷ್ಕ್ರಿಯ ಉಪಗ್ರಹ: ನಾಸಾ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.