ETV Bharat / international

ಮರು ಸಾಲ ನೀಡಲು ಚೀನಾ ಸಮ್ಮತಿ.. ಐಎಂಎಫ್ ಒಪ್ಪಂದ ಸನ್ನಿಹಿತ ಎಂದ ಶ್ರೀಲಂಕಾ ಅಧ್ಯಕ್ಷ

ಶ್ರೀಲಂಕಾ ಭೀಕರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಕಳೆದ ವರ್ಷ ಆಹಾರ ಪದಾರ್ಥಗಳು, ಔಷಧ, ಇಂಧನ, ಅಡುಗೆ ಅನಿಲ ಮತ್ತು ವಿದ್ಯುತ್‌ ತೀವ್ರ ಕೊರತೆ ಉಂಟಾಗಿತ್ತು. ಇದೀಗ ಆರ್ಥಿಕತೆ ಸುಧಾರಣೆಯ ಲಕ್ಷಣಗಳು ಬರುತ್ತಿವೆ.

srilankan-president-ranil-wickremesinghe-says-imf-deal-imminent-after-chinas-pledge
ಮರು ಸಾಲ ನೀಡಲು ಚೀನಾ ಸಮ್ಮತಿ... ಐಎಂಎಫ್ ಒಪ್ಪಂದ ಸನ್ನಿಹಿತ ಎಂದು ಶ್ರೀಲಂಕಾ ಅಧ್ಯಕ್ಷ
author img

By

Published : Mar 8, 2023, 3:47 PM IST

ಕೊಲಂಬೊ (ಶ್ರೀಲಂಕಾ): ಸಾಲದ ಮರು ಹಂಚಿಕೆಗೆ ಚೀನಾ ಭರವಸೆ ನೀಡಿದೆ ಎಂದು ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ. ಇದರಿಂದ ತನ್ನ 2.9 ಬಿಲಿಯನ್ ಡಾಲರ್​ ಬೇಲ್‌ಔಟ್ ಪ್ಯಾಕೇಜ್​ ಅನ್ನು ಶೀಘ್ರದಲ್ಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್​) ಅನುಮೋದಿಸಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾ ಸಂಸತ್ತಿನ ಮಾತನಾಡಿದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಸೋಮವಾರ ರಾತ್ರಿ ಚೀನಾದ ಎಕ್ಸಿಮ್ ಬ್ಯಾಂಕ್‌ನಿಂದ ಅಗತ್ಯ ಭರವಸೆಯ ಪತ್ರವನ್ನು ಸ್ವೀಕರಿಸಲಾಗಿದೆ. ತಕ್ಷಣವೇ ನಾನು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಅಂತಿಮ ಅನುಮೋದನೆಗಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ ಪತ್ರ ಕಳುಹಿಸಲಿದ್ದೇವೆ ಎಂದು ತಿಳಿಸಿದರು. ಅಲ್ಲದೇ, ಈಗ ನಾವು ನಮ್ಮ ಕೆಲಸವನ್ನು ಮಾಡಿದ್ದೇವೆ. ಈ ತಿಂಗಳ ಅಂತ್ಯದ ವೇಳೆಗೆ ಎಂದರೆ ಮೂರನೇ ಅಥವಾ ನಾಲ್ಕನೇ ವಾರದೊಳಗೆ ಐಎಂಎಫ್​ ತನ್ನ ಮುಂದಿನ ಕೆಲಸ ಮಾಡಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ವಿಕ್ರಮಸಿಂಘೆ ಹೇಳಿದರು.

ಚೀನಾವು ಶ್ರೀಲಂಕಾದ ವಿದೇಶಿ ಸಾಲದ ಸುಮಾರು ಶೇ.10ರಷ್ಟು ಹೊಂದಿದ್ದು, ಇದು 51 ಬಿಲಿಯನ್ ಡಾಲರ್​ಗೂ ಮೀರಿದೆ. ಐಎಂಎಫ್ ಒಪ್ಪಂದದ ನಂತರ ವಿಶ್ವ ಬ್ಯಾಂಕ್ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ಹಣಕಾಸಿನ ನೆರವು ಶೀಘ್ರದಲ್ಲೇ ಪಡೆಯಲು ಪ್ರಾರಂಭಿಸುತ್ತೇವೆ. ಆದಾಗ್ಯೂ, 16 ಹಿಂದಿನ ಒಪ್ಪಂದಗಳೊಂದಿಗೆ ಮಾಡಿದಂತೆ ಐಎಂಎಫ್​ ಮತ್ತು ಶ್ರೀಲಂಕಾದೊಂದಿಗೆ ಒಪ್ಪಿಕೊಂಡಂತೆ ಕಷ್ಟಕರವಾದ ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಬೇಕಾಗಿದೆ ಎಂದು ಮಾಹಿತಿ ನೀಡಿದರು.

ಒಪ್ಪಂದಗಳು ಅನಿವಾರ್ಯ: ನಾವು ಒಂದು ಸತ್ಯವನ್ನು ಒತ್ತಿ ಹೇಳಬೇಕು. ನಾವು ಈ ಸಮಯದಲ್ಲಿ ವಿದೇಶಿ ಸಾಲವನ್ನು ಮರುಪಾವತಿಸುವುದಿಲ್ಲ. ನಾವು ಬಹುಪಕ್ಷೀಯ ಹಣಕಾಸು ಸಂಸ್ಥೆಗಳಿಗೆ ಮಾತ್ರ ಸಾಲವನ್ನು ಮರುಪಾವತಿಸುತ್ತೇವೆ. ನಾವು ಐಎಂಎಫ್​​ನೊಂದಿಗೆ ಒಪ್ಪಂದವನ್ನು ಮುರಿದರೆ, ನಾವು ವಿದೇಶಗಳಿಗೆ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಸಾಲವನ್ನು ಮರುಪಾವತಿಸುವ ಒತ್ತಡಕ್ಕೆ ಸಿಲುಕುತ್ತೇವೆ ಎಂದು ವಿಕ್ರಮಸಿಂಘೆ ಹೇಳಿದರು.

ನಾವು 2029ರವರೆಗೆ ಪ್ರತಿ ವರ್ಷ ಸರಿ ಸುಮಾರು 6-7 ಬಿಲಿಯನ್ ಡಾಲರ್ ಮರುಪಾವತಿಬೇಕಾಗುತ್ತದೆ. ಇಷ್ಟೊಂದು ಮರು ಪಾವತಿ ಮಾಡಲು ನಮ್ಮ ಬಳಿ ವಿದೇಶಿ ಕರೆನ್ಸಿ ಇಲ್ಲ. ಆದ್ದರಿಂದ ಐಎಂಎಫ್​ ನಮ್ಮ ಸಾಲಗಾರರೊಂದಿಗೆ ಸಾಲದ ಸಮರ್ಥನೀಯತೆಯ ಒಪ್ಪಂದಗಳ ಮೇಲೆ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ವಿವರಿಸಿದರು. ಇದೇ ವೇಳೆ ವಿಕ್ರಮಸಿಂಘೆ, ಐಎಂಎಫ್​ನೊಂದಿಗೆ ಏನು ಒಪ್ಪಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿಲ್ಲ. ಆದರೆ, ಅನುಮೋದನೆಗಾಗಿ ಸಂಸತ್ತಿನ ಮುಂದೆ ವಿವರಗಳನ್ನು ಪ್ರಸ್ತುತಪಡಿಸುವುದಾಗಿ ತಿಳಿಸಿದರು. ಜೊತೆಗೆ ಸುಧಾರಣಾ ಪ್ರಯತ್ನಗಳನ್ನು ಹಳಿತಪ್ಪಿಸುವಂತಹ ಯಾವುದೇ ಬೀದಿ ಪ್ರತಿಭಟನೆಗಳನ್ನು ಹತ್ತಿಕ್ಕುವುದಾಗಿ ಅವರು ಎಚ್ಚರಿಸಿದರು.

ಮತ್ತೊಂದೆಡೆ, ಐಎಂಎಫ್​ ಪ್ಯಾಕೇಜ್‌ಗೆ ಅಗತ್ಯವಾದ ಆದಾಯವನ್ನು ಬಲಪಡಿಸಲು ಸರ್ಕಾರ ವಿದ್ಯುತ್ ದರ ಮತ್ತು ಆದಾಯ ತೆರಿಗೆಗಳಲ್ಲಿ ಹೆಚ್ಚಳ ಮಾಡಿದೆ. ಈ ಹೆಚ್ಚಳದ ಕುರಿತು ಹಲವಾರು ವಲಯಗಳ ವೃತ್ತಿಪರರು ಮತ್ತು ಕಾರ್ಮಿಕರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ, ಪ್ರತಿಪಕ್ಷಗಳು ಗ್ರಾಮ ಮತ್ತು ಪಟ್ಟಣ ಸಭೆಗಳ ಚುನಾವಣೆ ನಡೆಸಲು ಒತ್ತಾಯಿಸುತ್ತಿವೆ. ಆದರೆ, ಹಣಕಾಸು ಕೊರತೆಯಿಂದ ಈ ಚುನಾವಣೆಗಳನ್ನು ಮುಂದೂಡಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು: ಕಾಶ್ಮೀರಿ ನಾಯಕತ್ವ, ಪ್ರತ್ಯೇಕತಾವಾದಿಗಳ ಮೇಲೇನು ಪರಿಣಾಮ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.