ETV Bharat / international

ಹೆಚ್ 1ಬಿ ವೀಸಾ ಹೊಂದಿರುವವರ ಸಂಗಾತಿಗೆ ಅಮೆರಿಕದಲ್ಲಿ ಉದ್ಯೋಗಕ್ಕೆ ಅವಕಾಶ: ಯುಎಸ್​​ ಕೋರ್ಟ್‌

author img

By

Published : Mar 30, 2023, 1:11 PM IST

ಸೇವ್​ ಜಾಬ್ಸ್​​ ಯುಎಸ್​ಎ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಯುಎಸ್​ ಜಿಲ್ಲಾ ನ್ಯಾಯಾಲಯವು ಹೆಚ್ 1ಬಿ ವೀಸಾ ಹೊಂದಿರುವವರ ಸಂಗಾತಿಗೆ ಅಮೆರಿಕದಲ್ಲಿ ಉದ್ಯೋಗ ಮಾಡಲು ಅವಕಾಶ ನೀಡಿದೆ.

spouses-of-h1b-visa-holders-can-work-in-us-says-judge
ಹೆಚ್ 1ಬಿ ವೀಸಾ ಹೊಂದಿರುವವರ ಸಂಗಾತಿಗೆ ಅಮೆರಿಕಾದಲ್ಲಿ ಉದ್ಯೋಗಕ್ಕೆ ಅವಕಾಶ : ಯುಎಸ್​​ ಜಿಲ್ಲಾ ನ್ಯಾಯಾಲಯ

ವಾಷಿಂಗ್ಟನ್ : ಹೆಚ್ 1ಬಿ ವೀಸಾ ಹೊಂದಿರುವವರ ಸಂಗಾತಿಗಳು ಅಮೆರಿಕದಲ್ಲಿ ಉದ್ಯೋಗ ಮಾಡಬಹುದೆಂದು ಯುಎಸ್​ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಇಲ್ಲಿನ ಜಿಲ್ಲಾ ನ್ಯಾಯಾಧೀಶರಾದ ತಾನ್ಯಾ ಚುಟ್ಕಾನ್​​ ಅವರು ಸೇವ್​ ಜಾಬ್ಸ್​ ಯುಎಸ್​ಎ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಈ ತೀರ್ಪು ನೀಡಿದ್ದಾರೆ. ಇದರಿಂದ ಅಮೆರಿಕದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವ ವಿದೇಶಿಗರಿಗೆ ಬಿಗ್​​ ರಿಲೀಫ್​ ಸಿಕ್ಕಂತಾಗಿದೆ.

ಸೇವ್​ ಜಾಬ್ಸ್​​ ಯುಎಸ್​ಎ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಈ ತೀರ್ಪು ನೀಡಿತು. ಸೇವ್​ ಜಾಬ್ಸ್​​ ಯುಎಸ್​ಎ, ಹೆಚ್​​1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ (ಪತಿ ಅಥವಾ ಪತ್ನಿ) ಉದ್ಯೋಗದ ಅಧಿಕೃತ ಕಾರ್ಡ್​ಗಳನ್ನು ನೀಡುವ ಒಬಾಮಾ ಆಡಳಿತಾವಧಿಯ ನಿಯಮಗಳನ್ನು ವಜಾಗೊಳಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಸೇವ್​ ಜಾಬ್ಸ್​​ ಯುಎಸ್​ಎ ಸಲ್ಲಿಸಿದ್ದ ಅರ್ಜಿಯನ್ನು ಟೆಕ್ ದೈತ್ಯ ಕಂಪನಿಗಳಾದ ​ ಅಮೆಜಾನ್, ಆಪಲ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ಖಂಡಿಸಿದ್ದವು. ಯುಎಸ್​ ಇದುವರೆಗೆ ಸುಮಾರು 1 ಲಕ್ಷ ಉದ್ಯೋಗ ಕಾರ್ಡ್​ಗಳನ್ನು ಹಂಚಿಕೆ ಮಾಡಿದ್ದು, ಇದರಲ್ಲಿ ಭಾರತೀಯರು ಅತಿ ಸಂಖ್ಯೆಯಲ್ಲಿದ್ದಾರೆ.

ಸೇವ್ ಜಾಬ್ಸ್ ಯುಎಸ್​ಎ ತನ್ನ ವಾದದಲ್ಲಿ, ಹೆಚ್​​4 ವೀಸಾ ಹೊಂದಿರುವ ವಿದೇಶಿ ಪ್ರಜೆಗಳಿಗೆ ಅಮೆರಿಕಾದಲ್ಲಿ ಕೆಲಸ ಮಾಡಲು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಅಧಿಕಾರವನ್ನು ನೀಡಿಲ್ಲ ಎಂದು ಹೇಳಿದೆ. ಅಲ್ಲದೆ ವಿವಿಧ ವೀಸಾಗಳಲ್ಲಿ ಉದ್ಯೋಗವನ್ನು ಅಧಿಕೃತಗೊಳಿಸಲು ಸರ್ಕಾರವು ಮುಕ್ತ ಅಧಿಕಾರವನ್ನು ಹೊಂದಿದೆ. ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಅವರ ಸಂಗಾತಿ ಮತ್ತು ಅವಲಂಬಿತರಿಗೆ ಉದ್ಯೋಗವನ್ನು ಅಧಿಕೃತಗೊಳಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ವಿದೇಶಿ ಸರ್ಕಾರಿ ಅಧಿಕಾರಿಗಳ ಸಂಗಾತಿಗಳು ಮತ್ತು ಉದ್ಯೋಗಿಗಳ ಸಂಗಾತಿಗಳು, ಅಂತರಾಷ್ಟ್ರೀಯ ಸಂಸ್ಥೆಗಳ ಅಧಿಕಾರಿಗಳ ಕೆಲಸದ ಅವಧಿಯನ್ನು ದೀರ್ಘಕಾಲದವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದೆ.

ನ್ಯಾಯಾಲಯದ ತೀರ್ಪಿಗೆ ವಲಸಿಗರ ಹಕ್ಕುಗಳ ವಕೀಲರಾದ ಅಜಯ್ ಭುಟೋರಿಯಾ ಹರ್ಷ ವ್ಯಕ್ತಪಡಿಸಿದ್ದಾರೆ. ಹೆಚ್​1ಬಿ ವೀಸಾ ಹೊಂದಿರುವ ಸಂಗಾತಿಗಳಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟು ಅವರ ಕುಟುಂಬವನ್ನು ಬೆಂಬಲಿಸಲು ಸಹಕಾರಿ ಮಾಡಿಕೊಟ್ಟಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್​1ಬಿ ವೀಸಾವನ್ನು ವಿವಿಧ ದೇಶಗಳಿಂದ ಅಮೆರಿಕಾಗೆ ಆಗಮಿಸುವ ನುರಿತ ವಿದೇಶಿ ಉದ್ಯೋಗಿಗಳಿಗೆ ಅಮೆರಿಕಾದ ಕಂಪೆನಿಗಳಲ್ಲಿ ಉದ್ಯೋಗ ಮಾಡಲು ಅವಕಾಶ ಕಲ್ಪಿಸುತ್ತದೆ. ಆದರೂ ಇತ್ತೀಚಿನವರೆಗೂ, ಹೆಚ್​1 ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಉದ್ಯೋಗ ಮಾಡಲು ಅವಕಾಶ ಕಲ್ಪಿಸಿರಲಿಲ್ಲ. ಇದು ಕುಟುಂಬದ ಮೇಲೆ ಆರ್ಥಿಕ ಹೊರೆಯನ್ನು ಉಂಟು ಮಾಡುತ್ತಿತ್ತು. ನ್ಯಾಯಾಲಯದ ಈ ತೀರ್ಪಿನಿಂದ ಯುಎಸ್​ನಲ್ಲಿ ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವ ಕುಟುಂಬಗಳಿಗೆ ಸಹಕಾರಿಯಾಗುತ್ತದೆ. ಜೊತೆಗೆ ಕುಟುಂಬಗಳಿಗೆ ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಹೆಚ್​​1ಬಿ ಸಂಗಾತಿಗಳಿಗೆ ಕೆಲಸ ಮಾಡಲು ಅವಕಾಶ ನೀಡುವುದು ಕೇವಲ ಆರ್ಥಿಕ ನ್ಯಾಯದ ವಿಷಯವಲ್ಲ. ಇದು ಕುಟುಂಬದ ಐಕ್ಯತೆ ಮತ್ತು ಸ್ಥಿರತೆಯ ವಿಷಯವಾಗಿದೆ. ನಾನು ನ್ಯಾಯಾಲಯದ ತೀರ್ಪನ್ನು ಶ್ಲಾಘಿಸುತ್ತೇನೆ. ಇದು ಹೆಚ್ಚು ಸಹಾನುಭೂತಿ ಮತ್ತು ಸಮಾನ ವಲಸೆ ನಿಯಮದ ಮೊದಲ ಹೆಜ್ಜೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸೇವ್ ಜಾಬ್ಸ್ ಯುಎಸ್ಎ ಯೋಜಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಅಮೆರಿಕ ಗಡಿಯಲ್ಲಿನ ವಲಸಿಗರ ಬಂಧನ ಕೇಂದ್ರಕ್ಕೆ ಬೆಂಕಿ: 39 ವಲಸಿಗರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.