ETV Bharat / international

ವಿಶ್ವಕಪ್ ವಿಜಯೋತ್ಸವದ ವೇಳೆ ಆಟಗಾರ್ತಿಗೆ ಚುಂಬಿಸಿದ ವಿವಾದ: ಸ್ಪೇನ್​ ಫುಟ್ಬಾಲ್ ಮುಖ್ಯಸ್ಥನ ವಿರುದ್ಧ ಪ್ರಕರಣ - ಫುಟ್ಬಾಲ್ ಆಟಗಾರ್ತಿಗೆ ಚುಂಬಿಸಿದ ವಿವಾದ

ಫುಟ್ಬಾಲ್​ ಮಹಿಳಾ ವಿಶ್ವಕಪ್ ವಿಜಯೋತ್ಸವದ ಸಮಯದಲ್ಲಿ ಆಟಗಾರ್ತಿ ಜೆನ್ನಿ ಹೆರ್ಮೊಸೊ ತುಟಿಗಳಿಗೆ ಮುತ್ತಿಟ್ಟ ಸ್ಪೇನ್​ ಫುಟ್ಬಾಲ್ ಫೆಡರೇಶನ್‌ ಮುಖ್ಯಸ್ಥ ಲೂಯಿಸ್ ರುಬಿಯಾಲ್ಸ್ ವಿರುದ್ಧ ಪ್ರಕರಣ ದಾಖಲಾಗಿದೆ.

spain-moves-to-oust-countrys-soccer-chief-for-world-cup-kiss-luis-rubiales-breaks-week-long-silence
ವಿಶ್ವಕಪ್ ವಿಜಯೋತ್ಸವದ ವೇಳೆ ಆಟಗಾರ್ತಿಗೆ ಚುಂಬಿಸಿದ ವಿವಾದ: ಸ್ಪೇನ್​ ಫುಟ್ಬಾಲ್ ಮುಖ್ಯಸ್ಥನ ವಿರುದ್ಧ ಪ್ರಕರಣ
author img

By ETV Bharat Karnataka Team

Published : Sep 2, 2023, 1:10 PM IST

ಮ್ಯಾಡ್ರಿಡ್ (ಸ್ಪೇನ್): ಫುಟ್ಬಾಲ್​ ಮಹಿಳಾ ವಿಶ್ವಕಪ್ ವಿಜಯೋತ್ಸವದ ಸಮಯದಲ್ಲಿ ಆಟಗಾರ್ತಿ ಜೆನ್ನಿ ಹೆರ್ಮೊಸೊ ತುಟಿಗಳಿಗೆ ಮುತ್ತಿಟ್ಟ ಪ್ರಕರಣ ಸಂಬಂಧ ಸ್ಪೇನ್​ ಫುಟ್ಬಾಲ್ ಫೆಡರೇಶನ್‌ ಮುಖ್ಯಸ್ಥ ಲೂಯಿಸ್ ರುಬಿಯಾಲ್ಸ್ ಅವರ ಪದಚ್ಯುತಗೊಳಿಸುವ ಕ್ರಮವನ್ನು ಅಲ್ಲಿನ ಸರ್ಕಾರ ಪ್ರಾರಂಭಿಸಿದೆ. ಅಲ್ಲದೇ, ಸ್ಪ್ಯಾನಿಷ್ ಸರ್ಕಾರದ ಕಾನೂನು ಸಮಿತಿ ಪ್ರಕರಣ ದಾಖಲಿಸಿದೆ.

ಆಸ್ಪ್ರೇಲಿಯಾದ ಸಿಡ್ನಿಯಲ್ಲಿ ಆಗಸ್ಟ್​ 20ರಂದು ನಡೆದು ಫುಟ್ಬಾಲ್​ ಮಹಿಳಾ ವಿಶ್ವಕಪ್​ ಫೈನಲ್​ನಲ್ಲಿ ಸ್ಪೇನ್​ ಗೆಲುವು ಸಾಧಿಸಿತ್ತು. ಇದರ ವಿಜಯೋತ್ಸವದ ವೇಳೆ ಬಹಿರಂಗವಾಗಿ ಫುಟ್ಬಾಲ್ ಫೆಡರೇಶನ್‌ ಮುಖ್ಯಸ್ಥ ಲೂಯಿಸ್ ರುಬಿಯಾಲ್ಸ್ ಆಟಗಾರ್ತಿ ಜೆನ್ನಿ ಹೆರ್ಮೊಸೊ ತುಟಿಗಳಿಗೆ ಮುತ್ತಿಟ್ಟಿದ್ದರು.

ಈ ವೇಳೆ ಆಟಗಾರ್ತಿಯ ಒಪ್ಪಿಗೆಯಿಲ್ಲದೆ ಮುತ್ತಿಟ್ಟಿದ್ದಾರೆ ಎಂದು ವಿವಾದಕ್ಕೆ ಕಾರಣವಾಗಿದೆ. ಜಾಗತಿಕ ಮಾಧ್ಯಮಗಲ್ಲೂ ಮುತ್ತಿಟ್ಟ ದೃಶ್ಯಗಳು ಪ್ರಸಾರವಾಗಿದ್ದು, ಸ್ಪೇನ್​ ರಾಷ್ಟ್ರಕ್ಕೆ ಮುಜುಗರವನ್ನುಂಟುಮಾಡಿದೆ. ಜೊತೆಗೆ ಯುರೋಪಿಯನ್ ಫುಟ್ಬಾಲ್ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರೂ ಆಗಿರುವ ರುಬಿಯಾಲ್ಸ್​ ತೀವ್ರ ಟೀಕೆಗಳಿಗೂ ಗುರಿಯಾಗಿದ್ದಾರೆ.

ಈಗಾಗಲೇ ಲೂಯಿಸ್ ರುಬಿಯಾ ಅವರನ್ನು 90 ದಿನಗಳವರೆಗೆ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಫಿಫಾ ಪ್ರಕ್ರಿಯೆಯಿಂದಲೂ ಅವರನ್ನು ತೆಗೆದುಹಾಕಲು ಸ್ಪೇನ್ ನಿರ್ಧರಿಸಿದೆ. ಇದರ ನಡುವೆ ಶುಕ್ರವಾರ ದೇಶದ ಕ್ರೀಡಾ ಸಮಸ್ಯೆಗಳನ್ನು ನಿಭಾಯಿಸುವ ಸ್ಪ್ಯಾನಿಷ್ ಸರ್ಕಾರದ ಕಾನೂನು ಸಮಿತಿಯು ರುಬಿಯಾಲ್ಸ್ ವಿರುದ್ಧ ಔಪಚಾರಿಕ ಪ್ರಕರಣವನ್ನು ತೆರೆದಿದೆ.

ರುಬಿಯಾಲ್ಸ್ ತಮ್ಮ ಅಧಿಕಾರವನ್ನು ಆಟಗಾರ್ತಿ ಜೆನ್ನಿ ಹರ್ಮೊಸೊ ಅವರಿಗೆ ಚುಂಬಿಸುವ ಮೂಲಕ ದುರುಪಯೋಗಪಡಿಸಿಕೊಂಡಿದ್ದರಾ ಅಥವಾ ಕ್ರೀಡಾಕೂಟದಲ್ಲಿ ಸ್ಪೇನ್‌ನ ಗೌವರ ಮತ್ತು ಖ್ಯಾತಿಯನ್ನು ಹಾಳುಮಾಡಿದ್ದರಾ ಎಂಬ ಈ ಸಮಿತಿಯು ನಿರ್ಧರಿಸುತ್ತದೆ. ಇದು ಏನಾದರೂ ಸಾಬೀತಾರೆ ರುಬಿಯಾಲ್ಸ್ ಅವರನ್ನು ಎರಡು ವರ್ಷಗಳ ಕಾಲ ಅಧಿಕಾರದಿಂದ ನಿಷೇಧಿಸಬಹುದು. ಇಡೀ ವಿಶ್ವವೇ ನಮ್ಮ ಆಟಗಾರರನ್ನು ಗಮನಿಸುತ್ತಿದ್ದ ಸಂದರ್ಭದಲ್ಲಿ ಮುಖ್ಯಸ್ಥ ಲೂಯಿಸ್ ರುಬಿಯಾಲ್ಸ್ ಎಸಗಿದ ಕೃತ್ಯ ನಮ್ಮ ಕ್ರೀಡೆಗೆ ಮತ್ತು ನಮ್ಮ ದೇಶಕ್ಕೆ ಹಾನಿಯನ್ನುಂಟುಮಾಡಿದೆ. ಅದನ್ನು ಸರಿಪಡಿಸಲು ಕಷ್ಟ ಎಂದು ಸ್ಪೇನ್‌ನ ಸಂಸ್ಕೃತಿ ಮತ್ತು ಕ್ರೀಡಾ ಸಚಿವ ಮೈಕೆಲ್ ಇಸೆಟಾ ತಿಳಿಸಿದ್ದಾರೆ.

ಈ ಘಟನೆಯ ನಂತರ ಆಟಗಾರ್ತಿ ಜೆನ್ನಿ ಹರ್ಮೊಸೊ ಅವರಿಗೆ ಸಾಕಷ್ಟು ಬೆಂಬಲ ಸಹ ವ್ಯಕ್ತವಾಗಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು ನಾವು ಸ್ಪೇನ್‌ನ ಜೆನ್ನಿ ಹೆರ್ಮೊಸೊ ಮತ್ತು ಕ್ರೀಡೆಯಲ್ಲಿ ನಿಂದನೆ ಹಾಗೂ ಲೈಂಗಿಕತೆ ಕೊನೆಗೊಳಿಸಲು ಕೆಲಸ ಮಾಡುವ ಎಲ್ಲರೊಂದಿಗೆ ಇರುತ್ತವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಸಂದೇಶ ಬಿಡುಗಡೆ ಮಾಡಿತ್ತು.

ವಾರದ ನಂತರ ಮೌನ ಮುರಿದ ರುಬಿಯಾಲ್ಸ್: ಆಟಗಾರ್ತಿ ಜೆನ್ನಿ ಹೆರ್ಮೊಸೊ ಅವರಿಗೆ ಮುತ್ತಿಟ್ಟ ಪ್ರಕರಣದ ವಾರದಿಂದ ಮೌನ ವಹಿಸಿದ್ದ ಲೂಯಿಸ್ ರುಬಿಯಾಲ್ಸ್, ತಮ್ಮ ವಿರುದ್ಧ ಕಾನೂನು ಸಮಿತಿಯು ಪ್ರಕರಣ ತೆರೆಯಲು ನಿರ್ಧರಿಸಿದ ಬೆನ್ನಲ್ಲೆ ತಮ್ಮ ಮೌನ ಮುರಿದಿದ್ದಾರೆ. ಸುಳ್ಳು ಸ್ತ್ರೀವಾದಿಗಳ ಮಾಟಗಾತಿ, ಬೇಟೆಯಾಡಿದ್ದಾರೆ ಎಂದು ತಮ್ಮ ಮೊದಲ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ. ಫಿಫಾದ ತನಿಖೆ ಮತ್ತು ಫೆಡರೇಶನ್‌ನ ಆಂತರಿಕ ತನಿಖೆ ಎದುರಿಸಿರುವ ಅವರು, ನಾನು ಕೆಲವು ಸ್ಪಷ್ಟ ತಪ್ಪುಗಳನ್ನು ಮಾಡಿದ್ದೇನೆ. ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡುತ್ತೇನೆ. ಹರ್ಮೊಸೊ ಜೊತೆಗಿನ ಕಿಸ್ ಪರಸ್ಪರ ಒಮ್ಮತದ ಮತ್ತು ಸಂಭ್ರಮದ ಕ್ಷಣದಲ್ಲಿ ಸಂಭವಿಸಿದೆ ಎಂದಿದ್ದಾರೆ.

ಇದನ್ನೂ ಓದಿ: ₹6 ಸಾವಿರ ಕೋಟಿಗೆ 5 ವರ್ಷ ತವರಿನ ಕ್ರಿಕೆಟ್ ಪ್ರಸಾರದ ಹಕ್ಕು ವಯಾಕಾಮ್ ತೆಕ್ಕೆಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.