ETV Bharat / international

ಬಿಲಿಯನೇರ್​​ ಹೂಡಿಕೆದಾರ ಜಾರ್ಜ್ ಸೊರೊಸ್ ಸಾಮ್ರಾಜ್ಯಕ್ಕೆ ಮಗ ಅಲೆಕ್ಸ್​ ಉತ್ತರಾಧಿಕಾರಿ - ಈಟಿವಿ ಭಾರತ ಕನ್ನಡ

ಬಿಲಿಯನೇರ್​ ಜಾರ್ಜ್​ ಸೊರೊಸ್ ​​ಅವರ ಓಪನ್ ಸೊಸೈಟಿ ಫೌಂಡೇಶನ್ಸ್​ಗೆ ಅಲೆಕ್ಸ್​ ಆಯ್ಕೆಯಾಗಿದ್ದಾರೆ.

ಜಾರ್ಜ್ ಸೊರೊಸ್
ಜಾರ್ಜ್ ಸೊರೊಸ್
author img

By

Published : Jun 12, 2023, 9:15 AM IST

ನ್ಯೂಯಾರ್ಕ್​ (ಅಮೆರಿಕ): ಹಂಗೇರಿಯನ್​ ಅಮೆರಿಕನ್​ ಉದ್ಯಮಿ ಮತ್ತು​​ ಸೊರೊಸ್ ಫಂಡ್​ ಮ್ಯಾನೇಜ್​ಮೆಂಟ್​ ಮತ್ತು ಓಪನ್ ಸೊಸೈಟಿ ಫೌಂಡೇಶನ್‌ ಸ್ಥಾಪಕ ಜಾರ್ಜ್​ ಸೊರೊಸ್​​ ತಮ್ಮ ಸಾಮ್ರಾಜ್ಯವನ್ನು ಮಗ ಅಲೆಕ್ಸ್​ಗೆ ಹಸ್ತಾಂತರಿಸಿದ್ದಾರೆ. ಭಾನುವಾರ ವಾಲ್​ ಸ್ಟ್ರೀಟ್​ ಜರ್ನಲ್​ಗೆ ​ನೀಡಿದ ಸಂದರ್ಶನದಲ್ಲಿ ಹಂಗೇರಿಯನ್​ ಮೂಲದ ಹೂಡಿಕೆದಾರ 92 ವರ್ಷದ ಸೊರೊಸ್​ ತಮ್ಮ ಪುತ್ರನಿಗೆ ಓಪನ್ ಸೊಸೈಟಿ ಫೌಂಡೇಶನ್ಸ್ (OSF) ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.

37 ವರ್ಷದ ಅಲೆಕ್ಸ್​ ಪದವೀಧರರಾಗಿದ್ದು, ಐವರು ಮಕ್ಕಳಲ್ಲಿ ಎರಡನೇಯ ಮಗನಾಗಿದ್ದಾರೆ. ಅಲ್ಲದೇ ಸೋರಸ್​ ಫಂಡ್​ ಮ್ಯಾನೇಜ್​ಮೆಂಟ್​ನ ಹೂಡಿಕೆ ಸಮಿತಿಯಲ್ಲಿ ಕುಳಿತಿರುವ ಏಕೈಕ ಕುಟುಂಬ ಸದಸ್ಯರಾಗಿದ್ದಾರೆ. ಇನ್ನು ಸೊರೊ​ಸ್​ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ​ಅತಿ ದೊಡ್ಡ ದಾನಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಇದೇ ವೇಳೆ, ಅಲೆಕ್ಸ್ ಅವರು ತಮ್ಮ ತಂದೆಗಿಂತ ಹೆಚ್ಚು ರಾಜಕೀಯ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದ್ದು, ಕುಟುಂಬದಿಂದ ಹಣ ದಾನ ಮಾಡುವುದನ್ನು ಮುಂದುವರಿಸುವುದಾಗಿಯೂ ಹೇಳಿದ್ದಾರೆ. ಅಲ್ಲದೇ ತಮ್ಮ ತಂದೆಯ ಉದಾರವಾದ ಗುರಿಗಳನ್ನು ಅಳವಡಿಸಿಕೊಳ್ಳುವುದಾಗಿಯೂ ಹೇಳಿದರು.

ಅಲ್ಲದೇ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಮರಳಲಿದ್ದಾರೆ ಎಂದ ಅಲೆಕ್ಸ್ 2024ರ ಅಧ್ಯಕ್ಷೀಯ ಚುನಾವೆಯಲ್ಲಿ ಸೊರೊಸ್ ಸಂಸ್ಥೆಯು ಪ್ರಮುಖ ಆರ್ಥಿಕ ಪಾತ್ರವನ್ನು ವಹಿಸುತ್ತದೆ ಎಂದು ಸುಳಿವು ನೀಡಿದರು. ಡಿಸೆಂಬರ್‌ನಲ್ಲಿ, ಓಪನ್ ಸೊಸೈಟಿ ಫೌಂಡೇಶನ್‌ಗಳ ಮಂಡಳಿಯು ಜಾರ್ಜ್​ ಸೊರೊಸ್​​ ನಂತರ ಅದರ ಅಧ್ಯಕ್ಷನಾಗಿ ಅವರ ಮಗ ಅಲೇಕ್ಸ್​ರನ್ನು ಆಯ್ಕೆ ಮಾಡಿತು.

ಇದೀಗ ಅಲೆಕ್ಸ್ ಅಧ್ಯಕ್ಷರಾಗಿ ರಾಜಕೀಯ ಚಟುವಟಿಕೆಯನ್ನು ನಿರ್ದೇಶಿಸಲಿದ್ದಾರೆ. ಓಪನ್ ಸೊಸೈಟಿ ಫೌಂಡೇಶನ್‌ ಮತ್ತು ಕುಟುಂಬಕ್ಕೆ ಹಣವನ್ನು ನಿರ್ವಹಿಸುವ ಸೊರೊಸ್ ಫಂಡ್ ಮ್ಯಾನೇಜ್‌ಮೆಂಟ್ ಮೇಲ್ವಿಚಾರಣೆ ಮಾಡುವ ಹೂಡಿಕೆ ಸಮಿತಿಯಲ್ಲಿ ಅಲೆಕ್ಸ್​ ಏಕೈಕ ಕುಟುಂಬ ಸದಸ್ಯ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಇನ್ನು ಅತ್ಯಂತ ಉದಾರ ಕೊಡುಗೆದಾರ ಎಂದೇ ಖ್ಯಾತಿ ಪಡೆದಿರುವ ಜಾರ್ಜ್ ಸೊರೊಸ್ ತಮ್ಮ ಆದಾಯದ 32 ಶತಕೋಟಿ ಡಾಲರ್​ಗಿಂತ ಹೆಚ್ಚಿನ ಆದಾಯವನ್ನು ಓಪನ್ ಸೊಸೈಟಿ ಫೌಂಡೇಶನ್‌ಗಳಿಗೆ ದಾನ ಮಾಡಿದ್ದಾರೆ. ಅದರಲ್ಲಿ 15 ಶತಕೋಟಿ ಡಾಲರ್​ ಈಗಾಗಲೇ ವಿತರಿಸಲಾಗಿದೆ. ಫೋರ್ಬ್ಸ್ ಸೊರೊಸ್‌ ಅವರನ್ನು ಅತ್ಯಂತ ಉದಾರ ಕೊಡುಗೆದಾರ ಎಂದು ಕರೆದಿದೆ.

ಬುಡಾಪೆಸ್ಟ್‌ನಲ್ಲಿ ಯಹೂದಿಗಳಲ್ಲದ ಕುಟುಂಬದಲ್ಲಿ ಜನಿಸಿದ ಸೊರೊಸ್ 1947 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ಗೆ ತೆರಳಿದರು. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ವ್ಯಾಸಂಗ ಮಾಡಿದ್ದು, ಮತ್ತು 1951 ರಲ್ಲಿ ತತ್ವಶಾಸ್ತ್ರದಲ್ಲಿ BSc ಪದವಿ ಪಡೆದಿದ್ದು, ನಂತರ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಸೊರೊಸ್ ತನ್ನ ಮೊದಲ ಹೆಡ್ಜ್ ಫಂಡ್ ಡಬಲ್ ಈಗಲ್ ಅನ್ನು 1969 ರಲ್ಲಿ ಬ್ರಿಟಿಷ್ ಮತ್ತು ಅಮೆರಿಕನ್ ಮರ್ಚೆಂಟ್ ಬ್ಯಾಂಕ್‌ಗಳಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.

ಇದನ್ನೂ ಓದಿ: Pakistan Political crisis ಸೇನೆಯ ಬೆಂಬಲ ಸಿಗದೆ ಇಮ್ರಾನ್​ ಖಾನ್​ಗೆ ಹತಾಶೆ: ಬಿಲಾವಲ್ ಭುಟ್ಟೊ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.