ETV Bharat / international

ಮೆಕ್ಸಿಕೋದಲ್ಲಿ ಕಂದಕಕ್ಕೆ ಉರಳಿದ ಬಸ್​ ಆರು ಭಾರತೀಯರು ಸೇರಿ 17 ಮಂದಿ ಸಾವು : 23 ಜನರಿಗೆ ಗಾಯ - ಎಲೈಟ್ ಪ್ಯಾಸೆಂಜರ್ ಲೈನ್‌ ಬಸ್‌ ಅಪಘಾತ

ಮೆಕ್ಸಿಕನ್​ ರಾಜ್ಯವಾದ ನಯರಿತ್​ನಲ್ಲಿ ಬಸ್​ವೊಂದು ಕಂದಕಕ್ಕೆ ಉರುಳಿ 6 ಜನ ಭಾರತೀಯ ಪ್ರಜೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೆಕ್ಸಿಕೋದಲ್ಲಿ ಕಂದಕಕ್ಕೆ ಉರಳಿದ ಬಸ್​
ಮೆಕ್ಸಿಕೋದಲ್ಲಿ ಕಂದಕಕ್ಕೆ ಉರಳಿದ ಬಸ್​
author img

By

Published : Aug 5, 2023, 10:05 AM IST

ಮೆಕ್ಸಿಕೋ: ಬಸ್​ವೊಂದು ಕಂದಕಕ್ಕೆ ಉರುಳಿ ಭಾರತೀಯ ಪ್ರಜೆಗಳೂ ಸೇರಿ ಒಟ್ಟು 17 ಜನ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಬರೋಬ್ಬರಿ ಇಪ್ಪತ್ಮೂರು ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಪಶ್ಚಿಮ ಮೆಕ್ಸಿಕನ್​ ರಾಜ್ಯವಾದ ನಯರಿತ್​ನಲ್ಲಿ ನಡೆದಿದೆ. 40ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಮೆಕ್ಸಿಕೋ ದಿಂದ ದಕ್ಷಿಣ ಕ್ಯಾಲಿಫೋರ್ನಿಯಾದ ಗಡಿ ಪಟ್ಟಣ ಟಿಜುವಾನಾಗೆ ಹೊರಟಿತ್ತು.

ಗುರುವಾರ ಬೆಳಗ್ಗೆ ನಯರಿತನ್​ ಘಾಟ್​ ಪ್ರದೇಶದಲ್ಲಿ ತೆರಳುತ್ತಿದ್ದ ವೇಳೆ ಬಸ್​ ಚಾಲಕ ನಿದ್ರೆಗೆ ಜಾರಿದ್ದರಿಂದ​ ನಿಯಂತ್ರಣ ಕಳೆದುಕೊಂಡ ಬಸ್​ 164 ಅಡಿ ಆಳದ ಕಂದಕಕ್ಕೆ ಉರಳಿ ಬಿದ್ದಿದೆ. ಮೃತರಲ್ಲಿ ಆರು ಜನ ಭಾರತೀಯ ಪ್ರಜೆಗಳು ಇದ್ದರೆಂದು ಗುರುತಿಸಲಾಗಿದೆ. ರಾಜನ್ ಸಿಂಗ್ (21) ಮಂದೀಪ್ ಕುಮಾರ್ (22) ಆಡಮಾ ಕೇನ್ (46) ಹ್ಯಾನಿಡೌ ಕೇನ್ ಎಂದು ಬ್ರಿಟಿಷ್ ದಿನಪತ್ರಿಕೆಯೊಂದು ವರದಿ ಮಾಡಿದೆ. ಇನ್ನೂ ಇಬ್ಬರ ಹೆಸರು ಪತ್ತೆಯಾಗಿಲ್ಲ.

ಡೈಲಿ ಮೇಲ್ ವರದಿ ಪ್ರಕಾರ ಮೆಕ್ಸಿಕೋ ನಗರದಿಂದ ಹೊರಟಿದ್ದ ಎಲೈಟ್ ಪ್ಯಾಸೆಂಜರ್ ಲೈನ್‌ ಬಸ್‌ ಅಪಘಾತಕ್ಕಿಡಾಗಿದೆ. ಘಟನೆ ಸಂಭವಿಸಿದ ಬಳಿಕ ನಯರಿತ್​ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ, ಗಾಯಾಳುಗಳನ್ನು ರಕ್ಷಣೆ ಮಾಡಿದ್ದಾರೆ. ತುಂಬಾ ಆಳಕ್ಕೆ ಬಿದ್ದ ಕಾರಣ ರಕ್ಷಣೆ ಕಾರ್ಯ ಕಷ್ಟಕರವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬಳಿಕ ಫ್ರಾನ್ಸಿಸ್ಕೊ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ನಯರಿತ್​ ರಾಜ್ಯ ಭದ್ರತೆ ಮತ್ತು ನಾಗರಿಕ ಸಂರಕ್ಷಣಾ ಅಧಿಕಾರಿ, ಜಾರ್ಜ್​ ರೋಡ್ರಿಗಸ್​ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಬಸ್​ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದ್ದರಿಂದ ಭಾರಿ ಹಾನಿ ಸಂಭವಿಸಿದೆ. ಇದರಲ್ಲಿ ಭಾರತೀಯ ಪ್ರಜೆಗಳು ಸೇರಿದಂತೆ 17 ಜನ ಅಸುನೀಗಿದ್ದಾರೆ. ಆಳವಾದ ಕಂದಕವಾದ್ದರಿಂದ ರಕ್ಷಣೆ ಕಾರ್ಯ ತುಂಬಾ ಕಷ್ಟಕರವಾಗಿತ್ತು. ರಕ್ಷಣೆ ಮಾಡಿರುವ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿರುವುದಾಗಿ ಸ್ಥಳೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.

ಕಳೆದ ತಿಂಗಳು ಇಂತಹದ್ದೇ ಘಟನೆ: ಜೂನ್​ ತಿಂಗಳಲ್ಲೂ ದಕ್ಷಿಣ ರಾಜ್ಯ ಓಕ್ಸಾಕಾದಲ್ಲಿ ಬಸ್​ ಅಪಘಾತ ಸಂಭವಿಸಿ 29 ಜನರು ಸಾವನ್ನಪ್ಪಿದ್ದರು. ಫೆಬ್ರವರಿಯಲ್ಲಿ ನಡೆದ ಘಟನೆಯಲ್ಲಿ ಮಧ್ಯ ಅಮೆರಿಕದಿಂದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್​ ಮೆಕ್ಸಿಕೊದಲ್ಲಿ ಅಪಘಾತಕ್ಕೀಡಾಗಿ 17 ಜನರು ಸಾವನ್ನಪ್ಪಿದ್ದರು ಎಂದು ಸ್ಥಳೀಯ ಸುದ್ಧಿ ಸಂಸ್ಥೆಗಳು ವರದಿ ಮಾಡಿದ್ದವು.

ಇದನ್ನೂ ಓದಿ: ಟ್ರಕ್​ಗೆ ಡಿಕ್ಕಿ ಹೊಡೆದ ರೈಲು... 8 ಸಾವು, 4 ಮಂದಿಗೆ ತೀವ್ರ ಗಾಯ ​ ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.